ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತು!
ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತು
ಕನ್ನಡಪ್ರಭಕ್ಕೆ ಇಂದಿನಿಂದ ಮತ್ತೊಮ್ಮೆ ಪ್ರಭೆ ಬಂದಂತಾಯ್ತು
ತಮ್ಮ ಮೆಚ್ಚಿನ ಓದುಗರ ಕಾಯುವಿಕೆ ಅಂತ್ಯವಾದಂತಾಯ್ತು
ಹೊಸ ಹುದ್ದೆ, ಹೊಸ ಜನರು ಮತ್ತಾ ಹೊಸ ವಾತಾವರಣ
ಇಲ್ಲಿ ಮರುಕಳಿಸದಂತಿರಲಿ ಅಲ್ಲಿನ ಎಲ್ಲಾ ಹಳೆಯ ಪುರಾಣ
ಎಚ್ಚರಿಕೆಯ ಹೆಜ್ಜೆಗಳಿರಲಿ, ಕೈಯಲ್ಲಿ ಸದಾ ಕಡಿವಾಣವಿರಲಿ
ತನ್ನವರು ಪರರಾರೆಂಬ ಬಗ್ಗೆ ನಿಶ್ಚಿತ ಮನ ನಿಮ್ಮದಾಗಿರಲಿ
ಕನ್ನಡಪ್ರಭದಲಿ ಸದಾ ಕಾಲ ಬರಿಯ ಕನ್ನಡದ ಪ್ರಭೆ ಇರಲಿ
ಆಂಗ್ಲಪದಗಳ ಮಿಶ್ರಣ ಅನಿವಾರ್ಯತೆಗಷ್ಟೇ ಸೀಮಿತವಿರಲಿ
ಕ್ಷಣಿಕ ಚಮತ್ಕಾರಗಳನು ನಾನು ಮಾರಾಟದ ಸೂತ್ರವೆಂಬೆ
ಆದರೂ ಭಾಷೆಯ ಮೇಲಿನ ಅತ್ಯಾಚಾರ ಏತಕ್ಕೆ ಎಂದೆಂಬೆ
ಕನ್ನಡ ಪತ್ರಿಕೆಯ ಮೆಚ್ಚಲು ಆಂಗ್ಲದ ಸಹವಾಸ ಬೇಕಾಗಿಲ್ಲ
ಜನ ಮೆಚ್ಚಿ ಓದಲು ಪ್ರಧಾನ ಸಂಪಾದಕ ನೀವಷ್ಟೇ ಸಾಕಲ್ಲಾ
ಜಯವಿರಲಿ, ವಿಜಯವಿರಲಿ ಸದಾ ಕಳೆಗುಂದದ ನಗೆ ಇರಲಿ
ಕನ್ನಡಪ್ರಭ, ವಿಶ್ವೇಶ್ವರ ತಮ್ಮ ಹೆಸರಿಗೇ ಪರ್ಯಾವಾಗಿರಲಿ
ಹಾರ್ದಿಕ ಶುಭ ಹಾರೈಕೆಗಳು!
******************
Rating
Comments
ಉ: ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತು!
ಉ: ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತು!
ಉ: ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತು!
ಉ: ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತು!