ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?

ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?

ಒಂದಷ್ಟು ವರುಷ ಗೂಗಲ್ ನಲ್ಲಿ "Kannada" ಎಂದು ಹುಡುಕಿದವರಿಗೆ ಮೊದಲು ಸಿಗುತ್ತಿದ್ದದ್ದು ಕನ್ನಡ ಪ್ರಭ. ಒಂದು ಕಾಲದಲ್ಲಿ ಕನ್ನಡ ಸುದ್ದಿಗೆ ಮೊದಲು ಓದುಗರು ನುಗ್ಗುತ್ತಿದ್ದುದು ಅಂತರ್ಜಾಲದಲ್ಲಿ ಇಲ್ಲಿಗೇ. ಈಗೀಗ ಇ-ಪೇಪರ್ ಗಳು ಬಂದು, ಇತರ ವೆಬ್ಸೈಟುಗಳೂ ಸುದ್ದಿ ಹಾಕಲು ಪ್ರಾರಂಭಿಸಿದ ಮೇಲೆ ಗಮನ ಬೇರೆಡೆಯೂ ಹರಿದಿದೆ.

ವಿಜಯ ಕರ್ನಾಟಕ ತನ್ನ ಇ-ಪೇಪರ್ ಗೆ direct access ಕೊಟ್ಟು ಓದುಗರನ್ನು ಹಿಡಿದಿಟ್ಟುಕೊಂಡಂತಿದೆ. ಪ್ರಜಾವಾಣಿಯವರು ಇ-ಪೇಪರ್ ಕೊಟ್ಟದ್ದೇನೋ ನಿಜ, ಆದರದನ್ನು ಓದುವುದಕ್ಕೆ ತೊಡಕು, ತೊಂದರೆಯಾಗುವಂತೆ ಮಾಡಿಟ್ಟು ಓದುಗರನ್ನು ಕಳಕೊಂಡಿರುವಂತಿದೆ (ತಮಾಷೆಯೆಂದರೆ ವಿ.ಕ ಮತ್ತು ಪ್ರಜಾವಾಣಿ - ಇವೆರಡರ ಇ-ಪೇಪರ್ ಸವಲತ್ತನ್ನು ಒಂದೇ ಕಂಪೆನಿ ರೆಡಿ ಮಾಡಿರುವುದು. ಬಳಸಲಾಗುತ್ತಿರುವ ತಂತ್ರಾಂಶದ ಆವೃತ್ತಿ ಮಾತ್ರ ಬೇರೆ ಇರುವಂತಿದೆ. ಇತ್ತೀಚೆಗೆ ವಿ.ಕ ಇ-ಪೇಪರ್ ಸುಮಾರು ಹೊತ್ತು ಡೌನ್ ಆಗಿರೋದುಂಟು ಕೂಡ.)
ಕನ್ನಡ ಪ್ರಭದ ಇ-ಪೇಪರ್ manual uploadಉ. ವಿ.ಕ ಅಥವ ಪ್ರಜಾವಾಣಿಯ ಇ-ಪೇಪರ್ ಆವೃತ್ತಿಗಳಲ್ಲಿ ಸಿಗುವ ಸವಲತ್ತುಗಳು (features) ಇದರಲ್ಲಿಲ್ಲ.

ಇತ್ತೀಚೆಗಷ್ಟೆ ಕನ್ನಡಪ್ರಭದ look and feel ಬದಲಾದಂತಿದೆ. ಹೊಸ ಲುಕ್ ಹೊರನೋಟಕ್ಕೆ ಬಹಳ ಚೆನ್ನಾಗಿದೆ. ಹಿಂದಿನದ್ದಕ್ಕಿಂತ ಹೆಚ್ಚು usable ಆಗಿದೆ.
ಆದರೆ ಹಿಂದಿನಂತೆ ಯೂನಿಕೋಡ್ ಅಲ್ಲದ ಫಾಂಟುಗಳೇ ಉಳಿದು ಹೊಸ ಮೆರುಗು ಕ್ಷೀಣವಾದಂತಿದೆ.

ಆದರೆ ಇಂದಿಗೂ ಕನ್ನಡ ಸುದ್ದಿ ಸೈಟುಗಳ ಮಟ್ಟಿಗೆ ಕನ್ನಡಪ್ರಭವೇ ಇದ್ದಿದ್ದರಲ್ಲಿ ಉತ್ತಮವಾದುದು. ಪ್ರಜಾವಾಣಿಫೈರ್ ಫಾಕ್ಸ್ ನಲ್ಲಿ ಬರೋದೇ ಇಲ್ಲ. ಇವರು ಬಳಸೋದು ಹಳೆಯ (ಯೂನಿಕೋಡ್ ಅಲ್ಲದ) ಫಾಂಟು. ಎಲ್ಲಾದರೂ ಅದನ್ನು ಹಾಕಿದ್ದಾರಾ ನೋಡೋಣ ಎಂದು ಹುಡುಕಿಕೊಂಡು ಹೋದವರಿಗೆ ಸಿಕ್ಕರೂ ಸಿಕ್ಕೀತು, ಉಳಿದ ಓದುಗರಿಗೆ ಫೈರ್ ಫಾಕ್ಸಿನಲ್ಲಿ jargon ಅಷ್ಟೇ ಕಾಣೋದು.
ವಿ.ಕ.ದವರು ಟೈಮ್ಸ್ ಕಂಪೆನಿಯ ಇಂಟರ್ನೆಟ್ ತಂಡದವರಿಂದಲೇ ಬಹುಶಃ ಹೊಸ ವೆಬ್ಸೈಟೊಂದನ್ನು ತರುತ್ತಿರಬಹುದು. ಹೀಗಾಗಿಯೇ ಸದ್ಯಕ್ಕೆ ಇ-ಪೇಪರ್ ಎಂದು ಇಟ್ಟಂತಿದೆ. ಅದೂ ಇತ್ತೀಚೆಗೆ ಈ ಹಿಂದೆ ತಿಳಿಸಿದಂತೆ ಡೌನ್ ಟೈಮ್ (ಲಭ್ಯವಿಲ್ಲದ ಸಮಯ) ಹೆಚ್ಚು.

ಹಾಗಾದರೆ ಸಂಪೂರ್ಣ ಯೂನಿಕೋಡ್ ನಲ್ಲಿ ತಮ್ಮ ಸಂಪೂರ್ಣ ಸೈಟು ತರಲು ಯಾವ ಪತ್ರಿಕೆ ಧೈರ್ಯದ ಪ್ರಯತ್ನ ಮಾಡುತ್ತದೆ? ಉತ್ತರಕ್ಕೆ ಕಾದು ನೋಡೋಣ :-)

trivia:
1) ಕನ್ನಡಪ್ರಭವನ್ನು ಯೂನಿಕೋಡ್ ನಲ್ಲಿ ಓದಬೇಕೆ? ಇಲ್ಲಿ ಕ್ಲಿಕ್ ಮಾಡಿ.
2) ಉದಯವಾಣಿಯನ್ನು ಕೂಡ ಯೂನಿಕೋಡ್ ನಲ್ಲಿ ಓದಬಹುದು.
(ಏನಿದು? ಈ ವೆಬ್ಸೈಟ್ ಯಾವುದು? - ಇದು ಫೈರ್ ಫಾಕ್ಸ್ ಬ್ರೌಸರಿನೊಂದಿಗೆ add-on ಆಗಿ ಬರುವ "ಪದ್ಮ" ಎಂಬ script ಒಂದರ ಪಿ ಎಚ್ ಪಿ ರೂಪಾಂತರ. ಪ್ರಾಕ್ಸಿಯಂತೆ ಕೆಲಸ ಮಾಡಿ ಹಳೆಯ ಎನ್ಕೋಡಿಂಗ್ ನಲ್ಲಿರುವ ವೆಬ್ಸೈಟನ್ನು ಯೂನಿಕೋಡ್ ಗೆ ಪರಿವರ್ತಿಸಿ ನಿಮ್ಮ ಬ್ರೌಸರಿಗೆ ನೀಡುತ್ತದೆ).

Rating
No votes yet