ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ...
ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ಈ ಕೆಳಗಿನ ವಾಕ್ಯಗಳನ್ನು ಗಮನಿಸಿ:-
೧. "ನಾನು ಯಾರನ್ನು ಹಚ್ಚಿಕೊಳ್ಳುವುದು ಅಪರೂಪ'.
೨. "ಯಾರನ್ನು ಪಕ್ಷಕ್ಕೆ ಕರೆಯೋಲ್ಲ : ಯಡಿಯೂರಪ್ಪ"
೩. "ಮೊದಲನೆಯದಾಗಿ ಬಸ್ಸಿನಲ್ಲಿ ಕಿಕ್ಕಿರಿದು ಜನ ತುಂಬಿದ್ದರೂ ಯಾರು ಪರಸ್ಪರ ಒಂದು ಮಾತನ್ನು ಕೂಡಾ ಆಡುವುದಿಲ್ಲಾ,"
೪. "ಕೆಂಪು ಕ್ವಾಲೀಸ್ ಕಾರೊಂದು ಚಾರ್ಮುಡಿ ಘಾಟ್ ರಸ್ತೆಯಲ್ಲಿ ಊರ ಹೊರಗೆ ನಿಂತಿದೆ, ಅದರಲ್ಲಿ ಯಾರು ಇಲ್ಲ,"
೫. "ನನಗೆ ಏನು ತೊಂದರೆ ಮಾಡಲಿಲ್ಲ,"
೬. "ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ ನನಗೂ ಸರ್ಕಾರದಲ್ಲಿ ಭಾಗಿಯಾಗಬೇಕೆಂಬ ಹಂಬಲವಿದೆ "
ಇಲ್ಲೆಲ್ಲ ಅನುಕ್ರಮವಾಗಿ
೧. ಯಾರನ್ನೂ
೨. ಯಾರನ್ನೂ
೩. ಯಾರೂ
೪. ಯಾರೂ
೫. ಏನೂ
೬. ಯಾರೂ
ಶಬ್ದಗಳನ್ನು ಬಳಸಬೇಕಿತ್ತು . ಪ್ರಶ್ನಾರ್ಥಕ ವಾಕ್ಯವಿದ್ದಾಗ ಮಾತ್ರ ಹ್ರಸ್ವ ರೂಪಗಳನ್ನು ಬಳಸಬೇಕು. ಇಂಥ ವಾಕ್ಯಗಳ ಬಳಕೆ ಅಂತರ್ಜಾಲದಲ್ಲಿ, ಮತ್ತು ಟೀವೀಗಳಲ್ಲಿ ಈಗೀಗ ಹೆಚ್ಚು ಕಾಣುತ್ತಿದೆ. ಒಂದು ದಿನ ಮುದ್ರಣದಲ್ಲೂ ಕಂಡೀತು ಅಲ್ಲವೇ ? ಓದುಗರನ್ನು ಇಂಥ ವಾಕ್ಯಗಳು ಗೊಂದಲದಲ್ಲಿ ಕೆಡವುತ್ತವೆ ಅಲ್ಲವೇ? ನೀವೇನಂತೀರಿ?
Comments
ಉ: ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ...
ಮುದ್ರಣದಲ್ಲಿ ಇದು ಈಗಾಗಲೇ ನುಸುಳಿರಬಹುದು. :-)
ಉ: ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ...
ಇದನ್ನು ನೋಡಿ -- http://honalu.net/%E...
In reply to ಉ: ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ... by shridharjs
ಉ: ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ...
ಕ್ಷಮಿಸಿ, ಲಿಂಕ್ ಸರಿಯಾಗಿ ಬರಲಿಲ್ಲ... honalu.net ನಲ್ಲಿ, "ಎಲ್ಲರಕನ್ನಡ" ವಿಭಾಗವನ್ನು ನೋಡಿ. ಕನ್ನಡವನ್ನು ಒತ್ತಕ್ಷರ, ಧೀರ್ಘಕ್ಷರಗಳಿಂದ "ಮುಕ್ತ"ಗೊಳಿಸುವ ಯೋಜನೆ ಇದು!