ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ: ಇತ್ತೀಚಿನ ಬೆಳವಣಿಗೆಗಳು

ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ: ಇತ್ತೀಚಿನ ಬೆಳವಣಿಗೆಗಳು

ಬೆಂಗಳೂರಿನಲ್ಲಿ ಶ್ರೀಯುತ ವಿಶ್ವೇಶ್ವರ ತೀರ್ಥ ಸ್ವಾಮಿಗಳವರು, ತಮ್ಮ ಬೆಂಬಲವನ್ನು ಸೂಚಿಸಿ ಸಹಿ ಹಾಕಿದ್ದಲ್ಲದೆ, ತಮ್ಮ ಮಠವು ನಡೆಸುತ್ತಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡ ತಂತ್ರಾಂಶಗಳಾದ 'ನುಡಿ' ಹಾಗೂ 'ಬರಹ'ಗಳನ್ನು ಅನುಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿರುತ್ತಾರೆ. ಅಂತೆಯೇ, ಕ್ರಿಶ್ಚಿಯನ್ ಪಾದ್ರಿಗಳ, ಮಸಲ್ಮಾನ ಮೌಲ್ವಿಗಳ ಬೆಂಬಲವನ್ನೂ ಕೋರಲಾಗುತ್ತಿದೆ. ಕನ್ನಡಸಾಹಿತ್ಯ.ಕಾಂ ಬೆಂಬಲಿಗರು ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ.

ಮುಂಬಯಿಯಲ್ಲಿ, ನೆಲೆಸಿರುವ ಕನ್ನಡದ ಹೆಸರಾಂತ ಸಾಹಿತಿ, ಹಿರಿಯರೂ ಆದ, ಶ್ರೀಯುತ ಯಶವಂತ ಚಿತ್ತಾಲರು, ತಮ್ಮ ಬೆಂಬಲವನ್ನು ಸೂಚಿಸಿ, ಸಹಿ ಹಾಕಿ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಪ್ರಯತ್ನಕ್ಕೆ ಶುಭ ಕೋರಿರುತ್ತಾರೆ. ಹಾಗೆಯೇ, ಕರ್ನಾಟಕ ರಾಜ್ಯದ ಮಾಜಿ ಕನ್ನಡ ಹಾಗೂ ಸಂಸ್ಕೃತಿ ಖಾತೆ ಸಚಿವರಾಗಿದ್ದಂತಹ, ಶ್ರೀಮತಿ ಲೀಲಾದೇವಿ ಆರ್‍ ಪ್ರಸಾದ್ ರವರು ಮನವಿ ಪತ್ರಕ್ಕೆ ಸಹಿ ಹಾಕಿ, ಕನ್ನಡ ಯುವಕರ ಈ ಮುಂದಾಳತ್ವಕ್ಕೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಚಲನಚಿತ್ರ ನಿರ್ದೇಶಕರಾದ, ಬೂದಾಳ್ ಕೃಷ್ಣಮೂರ್ತಿಯವರು, ಮನವಿ ಪತ್ರಕ್ಕೆ ಸಹಿ ಹಾಕಿರುತ್ತಾರೆ.

ಮೆಲ್ಲ, ಮೆಲ್ಲಗೆ, ಎಣಿಸಿದಂತೆ, 'ಸಹಿ-ಸಂಗ್ರಹಣಾ ಅಭಿಯಾನ'ವು ಸಣ್ಣ ಪ್ರಮಾಣದಲ್ಲಿಯಾದರು ಭೌಗೋಳಿಕ ವಲಯಗಳನ್ನು ಮೀರಿದ ಕನ್ನಡದ ದೇಸಗತಿಯಲ್ಲಿ ಒಂದು ಸಾಮಾಜಿಕ ಆಂದೋಳನದ ರೂಪು ಪಡೆಯುತ್ತಿದೆ.

http://www.kanlit.com/manavi.pdf

Rating
No votes yet