ಕನ್ನಡಸಾಹಿತ್ಯಡಾಟ್‌ಕಾಂ ಮನವಿಯ ಬಗೆಗೆ 'ಉದಯವಾಣಿ'ಯಲ್ಲಿ ಸುಧೀರ್ಘ ಲೇಖನ

ಕನ್ನಡಸಾಹಿತ್ಯಡಾಟ್‌ಕಾಂ ಮನವಿಯ ಬಗೆಗೆ 'ಉದಯವಾಣಿ'ಯಲ್ಲಿ ಸುಧೀರ್ಘ ಲೇಖನ

ಸ್ನೇಹಿತರೆ,

ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿಯ ಕುರಿತಂತೆ 'ಉದಯವಾಣಿ' ದಿನಾಂಕ- ೧೮-೧೧-೨೦೦೬ ರ ಶನಿವಾರದ ಸಂಚಿಕೆಯಲ್ಲಿ (ಪುಸ್ತಕ ಸಂಪದ ವಿಭಾಗ, ಪುಟ ೧೦) "ಕಂಪ್ಯೂಟರ್ ಲೋಕದಲ್ಲಿ ಕನ್ನಡವೂ ರಾರಾಜಿಸಲಿ" ಎನ್ನುವ ಶೀರ್ಷಿಕೆಯಡಿಯಲ್ಲಿ ಸುಧೀರ್ಘವಾದ ಸುದ್ದಿ\ಲೇಖನ ಪ್ರಕಟಸಿದೆ.

ಕನ್ನಡಸಾಹಿತ್ಯ.ಕಾಂ೦- ನಿರ್ವಹಿಸುತ್ತಿರುವ ಚಟುವಟಿಕೆಗಳು ಒಂದು ಸಣ್ಣ ಸಾಮಾಜಿಕ ಆಂದೋಲನದ ಸ್ವರೂಪ ಪಡೆಯುತ್ತಿರುವ ಚಿಹ್ನೆಯನ್ನು ತೋರುತ್ತಿರುವುದು ಒಂದು ಸಮಾಧಾನಕರ ಸಂಗತಿ. ಲೇಖನದ ಒಂದು ಸಣ್ಣ ತುಣುಕನ್ನು ಕೆಳಗೆ ನೀಡಲಾಗಿದೆ.

`ಕಂಪ್ಯೂಟರ್ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸುತ್ತಾ ಹೋಗುವಾಗ ಅದು ಕೇವಲ ಇಂಗ್ಲಿಷ್ ಸಾಧ್ಯತೆಯನ್ನಷ್ಟೇ ತೆರೆದಿಡುತ್ತ ಕಂಪ್ಯೂಟರೆಂದರೆ ಇಂಗ್ಲಿಷ್ ಎಂದೆನ್ನುವಂತ ಸಮೀಕರಣ ನಿರ್ಮಾಣವಾಗುತ್ತಿರುತ್ತದೆ. ಹೀಗಾಗಿ ಮಗು ಸಹ ಕಂಪ್ಯೂಟರೆಂದರೆ ಇಂಗ್ಲಿಷ್ ಎಂದೆನ್ನುವುದು ಮಾತ್ರ ಅಂಗೀಕರಿಸುತ್ತಾ ಹೋಗಿಬಿಡುವ ಸಾಧ್ಯತೆಗಳು ಇರುತ್ತವೆ. ಕಂಪ್ಯೂಟರ್-ಇಂಗ್ಲಿಷ್‌ಮಯ ಲೋಕ ನಿರ್ಮಾಣವಾಗುತ್ತ ಹೋಗುವುದರ ಜೊತೆಗೆ ಉದ್ಯೋಗ ಗಳಿಕೆ-ದೇಶಾಂತರದ ಸವಲತ್ತುಗಳ ಖಾತ್ರಿಯೂ ಹೆಚ್ಚುತ್ತಾ ಹೋಗುತ್ತದೆ ಇದರಿಂದ ಹೆತ್ತವರು ಹಾಗೂ ಮಕ್ಕಳು ಪರಸ್ಪರ ನಂಬಿಕೆಗಳ ಮೇಲೆ ಪರಿಸರವೊಂದನ್ನು ಕಟ್ಟುತ್ತಾ ಹೋಗುತ್ತಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್ ಕಲಿಯುತ್ತಿರುವ ಮಕ್ಕಳಿಗೆ ಅವರ ಪರಿಸರದ ಭಾಷೆಯಲ್ಲಿ ಕಂಪ್ಯೂಟರ್ ಶಿಕ್ಷಣ ಸಿಗದೆ ಅವರು ಹಿಂದೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳೂ ಇವೆ. ಗ್ರಾಮೀಣ ಪ್ರದೇಶದ ಮಕ್ಕಳನ್ನೂ ಒಳಗೊಂಡಂತೆ ದೇಸಗತಿಯಲ್ಲಿ ಕಂಪ್ಯೂಟರ್ ಸೌಲಭ್ಯ ಅಂದರೆ `ಸ್ಥಳೀಯ ಪರಿಸರಕ್ಕೆ ಭಾಷಾಲೋಕವನ್ನು ತೆರೆದಿಡಬಹುದಾದ ತಂತ್ರಾಂಶಗಳು-' ಕಡ್ಡಾಯವಾಗಿ ಸೇರಿಕೊಳ್ಳಬೇಕು.

 

Rating
No votes yet