ಕನ್ನಡಿಗನಾಗಿ

ಕನ್ನಡಿಗನಾಗಿ

ವೇಷ ಬೇರೆ ಬಾಷೆ ಬೇರೆ, ದೇಶ ಒಂದೇ ಭಾರತ*
ಹಲವು ಬಾಷೆ ಒಂದೇ ನಾಡು ಎಂಬ ನೀತಿ ನಮ್ಮದು!!

ಚಿನ್ನದಂತ ನುಡಿಯು ನಮ್ಮದು , ರನ್ನದಂತ ಭಾಷೆ ನಮ್ಮದು
ಕಲಿಸಿ, ನುಡಿಸಿ, ನಲಿಸಿ ಬೆಳೆಸೋಣ ಮುಂದಕೆ !!

ಎಲ್ಲರೊಡನೆ ಕೂಡಿ ಬೆಳೆವೆವು ನಮ್ಮ ದ್ಯೇಯ ಭಾರತ
ನಮ್ಮ ತನವ ಕೂಡಿ ಸೆಳೆದು ನಡೆಯೋಣ ಮುಂದಕೆ!!

ನಾಡ ಸಂಸ್ಕೃತಿಯ ತಿಳಿದು, ನಡೆದು, ತಿಳಿಸೋಣ ಮುಂದಕೆ
ನಾಡ ನುಡಿಗೆ ಸಂಗೀತ ಸುಧೆಯ ನಾಟ್ಯ ಕಟ್ಟಿ, ನಲಿದು ಕುಣಿದು ಬೆಳೆಸೋಣ ಮುಂದಕೆ!!

ಎಂಕನಂತೆ ಬಾಳ ಬೇಡ, ಮಂಕನಂತೆ ಮರುಗ ಬೇಡ
ಎಂದು ತಿಳಿಯೋ ಕನ್ನಡಿಗ, ಎಚ್ಚೆತ್ತಿಕೋ ಸ್ವಾಭಿಮಾನಿ ಕನ್ನಡಿಗ!!

ಸಮಯ ಬಂದಿದೆ ಏಳೋ ಮಗನೆ ಎನುತಿಹಳು ಕನ್ನಡಾಂಬೆ
ಮುಂದೆ ನುಗ್ಗಿ ನೋಡೋ ಕನ್ನಡಿಗ, ಎಚ್ಚೆತ್ತಿಕೋ ವೀರ ಕನ್ನಡಿಗ!!

*ಮೊದಲಿನ ಸಾಲು (ಅಡಿಗರ ಆಯ್ದ ಕವನದ ಸಾಲನ್ನು ಬಳಸಿದ್ದೇನೆ)

Rating
No votes yet

Comments