ಕನ್ನಡಿಗರಿಗೆ ಒಂದು ಸವಾಲು - ಸಿರಿಭೂವಲಯವನ್ನು ಬಿಡಿಸ ಬನ್ನಿ!
- ಸಿರಿಭೂವಲಯವು ಕನ್ನಡ ಸಾಹಿತ್ಯದ ಒಂದು ಅಪೂರ್ವ ಗ್ರಂಥ.
- ಇದನ್ನು ಕುಮುದೇಂದು ಕವಿಯು ಕ್ರಿ.ಶ.೮೧೬ರಲ್ಲಿ ರಚಿಸಿದನು.
- ಕಾವ್ಯ ರಚನೆಯನ್ನು ನಾವು ಅಕ್ಷರಗಳಿಂದ ಮಾಡುತ್ತೇವೆ. ಕುಮುದೇಂದುವು ಅಕ್ಷರಗಳ ಬದಲು ಕನ್ನಡ ಅಂಕಿಗಳನ್ನು (೧-೯) ಬಳಸಿದ್ದಾನೆ.
- ಇದು ಅಂಕಾಕ್ಷರ ಕಾವ್ಯ. ಕನ್ನಡದ ೯ ಅಂಕಿಗಳನ್ನು ೬೪ ವಿಧದಲ್ಲಿ ಕ್ರಮಜೋಡಿಸಿ ಕಾವ್ಯವನ್ನು ರಚಿಸಿದ್ದಾನೆ.
- ೬೪ ಅಂಕಗಳನ್ನು ಚಕ್ರಗಳೆಂಬ ಚೌಕಗಳಲ್ಲಿ (೨೭*೨೭=೭೨೯ ಮನೆಗಳು) ತುಂಬಿದ್ದಾನೆ. ನಮಗೆ ಇದುವರೆಗೂ ೧೨೭೦ ಚಕ್ರಗಳು ಲಭಿಸಿವೆ.
- ಒಂದೊಂದು ಅಂಕಿಯ ಸ್ತಾನದಲ್ಲಿ ಒಂದೊಂದು ಕನ್ನಡ ಅಕ್ಷರವನ್ನು ತುಂಬಿದರೆ ಕಾವ್ಯ ಸಿಧ್ಢವಾಗುತ್ತದೆ.
- ನಡುಗನ್ನಡ ಭಾಷೆಯ ಸಾಂಗತ್ಯ ಛಂದಸ್ಸಿನ ಪದ್ಯಗಳು ದೊರೆಯುತ್ತವೆ. ಇತರ ಛಂದಸ್ಸಿನ ಪದ್ಯಗಳೂ ಇವೆ.
- ಕವಿಯು ಕನ್ನಡವನ್ನು `ಸರ್ವಭಾಷಾಮಯೀ ಕನ್ನಡ` ಎಂದು ಕರೆಯುತ್ತಾನೆ. ಏಕೆಂದರೆ ಕನ್ನಡ ಭಾಷೆಯ ಈ ಕಾವ್ಯದಲ್ಲಿ ೧೮ ಮಹಾಭಾಷೆಗಳು ಹಾಗೂ ೭೦೦ ಸಾಮಾನ್ಯ ಭಾಷೆಗಳು (೭೧೮) ಅಡಗಿವೆ.
- ಈ ಚೌಕದ ಒಂದೊಂದು ಮನೆಯ ಅಕ್ಷರಗಳನ್ನು ಓದುತ್ತಾ ಹೋದರೆ, ಒಂದೊಂದು ಭಾಷೆಯಲ್ಲಿ ಕಾವ್ಯವನ್ನು ಓದಬಹುದು. ಉದಾ: ಚೌಕಗಳ ಮೊದಲ ಮನೆಯ ಅಕ್ಷರಗಳನ್ನು ಓದುತ್ತಾ ಹೋದರೆ ಪ್ರಾಕೃತ ಭಾಷೆಯ ಕಾವ್ಯ ಕಂಡು ಬರುತ್ತದೆ.
- ಕನ್ನಡದ ಜೊತೆಗೆ ಸಂಸ್ಕೃತ, ಪ್ರಾಕೃತ, ದ್ರಾವಿಡ, ಆಂದ್ರ, ಮಹಾರಾಷ್ತ್ರ, ಮಲಯಾಳ, ಗುರ್ಜರ, ಅಂಗ, ಕಳೀಂಗ, ಕಾಶ್ಮೀರ, ಕಾಂಭೋಜ, ಹಮ್ಮೀರ, ಶೌರಸೇನಿ, ವಾಲಿ, ತೇಬತಿ, ವೆಂಗಿ, ವಂಗ, ಬ್ರಾಹ್ಮಿ, ವಿಜಾಯಾರ್ಧ, ಪದ್ಮ, ವೈಧರ್ಭ, ವೈಶಾಲಿ, ಸೌರಾಷ್ಟ್ರ, ಖರೋಷ್ಟಿ, ನಿರೋಷ್ಟ, ಅಪಭ್ರಂಶಿಕ, ಪೈಶಾಚ, ರಕ್ಥಾಕ್ಷರ, ಅರಿಷ್ಟ ಹೀಗೆ ಒಟ್ಟು ೭೧೮ ಭಾಷೆಗಳ ಕಾವ್ಯ ಇಲ್ಲಿದೆ. ಹಾಗಾಗಿ ಕನ್ನಡವನ್ನು `ಸರ್ವಭಾಷಾಮಯೀ ಕನ್ನಡ` ಎಂದು ಕವಿಯು ಹೇಳಿದ್ದಾನೆ.
- ಇದರಲ್ಲಿ ಒಟ್ಟು ೫೬ ಅಧ್ಯಾಯಗಳಿವೆ. ಆರ್ಷೇಯ ಸಾಹಿತ್ಯದೊಡನೆ, ಭೌತರಸಾಯನಾದಿ ವಿಜ್ಞಾನಗಳು, ರಸವಾದ, ಜ್ಯೋತಿಷ, ಇತಿಹಾಸ, ಸಂಸ್ಕೃತಿ, ಧರ್ಮ, ದರ್ಶನ, ಲೋಹ, ಖಗೋಳ, ವೈದ್ಯ, ಗಣಿತ, ಅಣು-ಪರಮಾಣು, ಲಿಪಿ-ಭಾಷೆ ಇತ್ಯಾದಿ ವಿಷಯಗಳು ಅಡಕವಾಗಿವೆ.
- ಶ್ರೀಯುತರಾದ ಎಲ್ಲಪ್ಪಶಾಸ್ತ್ರಿ, ಕರ್ಲಮಂಗಲಂ ಶ್ರೀಕಂಠಯ್ಯ, ಕೆ.ಅನಂತಸುಬ್ಬರಾಯರು ಅಂಕೆಗಳಿಗೆ ಸೂಕ್ತವಾದ ಅಕ್ಷರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಈ ಕೆಲಸ ಪೂರ್ಣವಾಗಿಲ್ಲ.
- ನಮ್ಮ ಕನ್ನಡಿಗರು ಇಂದು ಕಂಪ್ಯೂಟರ್ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ್ದಾರೆ. ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು ಹೊಂದಿದ್ದಾರೆ. ತಮ್ಮ ಕಂಪ್ಯೂಟರ್ ಸಾಮರ್ಥ್ಯವನ್ನು ಬಳಸಿಕೊಂಡು ಈ ಎಲ್ಲ ಚಕ್ರಗಳನ್ನು ಬಿಡಿಸುವ ಪ್ರಯತ್ನ ಮಾಡಬೇಕಾಗಿದೆ.
- ಈಗ ಸಿರಿಭೂವಲಯದ ಭಾಗ-೧ ಮಾರಾಟಕ್ಕಿದೆ. ಆಸಕ್ತರು ಪುಸ್ತಕಶಕ್ತಿ, ನಮ್ ೧೦೩, ೩ ನೆಯ ಮುಖ್ಯರಸ್ತೆ, ತಾತಾ ಸಿಲ್ಕ್ ಫಾರಂ, ಬಸವನಗುಡಿ, ಬೆಂಗಳೂರು-೫೬೦ ೦೦೪: ಧೂರವಾಣಿ: ೨೬೯೧೫೯೧೭ ಸಂಪರ್ಕಿಸಬಹುದು.
- ಕನ್ನಡಿಗರು ಈ ಎಲ್ಲ ಚಕ್ರಗಳನ್ನು ಬಿಡಿಸಲು ಸಾಧ್ಯವಾಗುವುದಾದರೆ, ಜಗತ್ತಿನ ೧೦ ನೆಯ ಅದ್ಭುತವನ್ನು ಜಗತ್ತಿಗೆ ಕೊಟ್ಟ ಕೀರ್ತಿಗೆ ಪಾತ್ರರಾಗುತ್ತಾರೆ.
- ಕನ್ನಡಿಗರೆ! ಈ ಸವಾಲನ್ನು ಸ್ವೀಕರಿಸಿ!!
Rating
Comments
ಉ: ಕನ್ನಡಿಗರಿಗೆ ಒಂದು ಸವಾಲು - ಸಿರಿಭಾವಲಯವನ್ನು ಬಿಡಿಸ ಬನ್ನಿ!
In reply to ಉ: ಕನ್ನಡಿಗರಿಗೆ ಒಂದು ಸವಾಲು - ಸಿರಿಭಾವಲಯವನ್ನು ಬಿಡಿಸ ಬನ್ನಿ! by naasomeswara
ಉ: ಕನ್ನಡಿಗರಿಗೆ ಒಂದು ಸವಾಲು - ಸಿರಿಭಾವಲಯವನ್ನು ಬಿಡಿಸ ಬನ್ನಿ!
ಉ: ಕನ್ನಡಿಗರಿಗೆ ಒಂದು ಸವಾಲು - ಸಿರಿಭೂವಲಯವನ್ನು ಬಿಡಿಸ ಬನ್ನಿ!