ಕನ್ನಡಿಗರು ಮತ್ತು ಉದ್ಯಮಶೀಲತೆ : ಒಂದು ಮಾತು

ಕನ್ನಡಿಗರು ಮತ್ತು ಉದ್ಯಮಶೀಲತೆ : ಒಂದು ಮಾತು

ನಮಸ್ಕಾರ,
ಮೊನ್ನೆ ನಮ್ಮ ದೇಶಕ್ಕೆ ವಿಶ್ವದ ೨ನೆ ಅತಿ ದೊಡ್ಡ ಶ್ರೀಮಂತ ರೂಪರ್ಟ್ ಮುರ್ಡೋಕ್ ಬಂದಿದ್ದಾಗೆ ನಮ್ಮ ದೇಶದ ದೂರದರ್ಶನದ ಕ್ಷೇತ್ರದಲ್ಲಿ ಸುಮಾರು ೧೦೦ ಮಿಲಿಯನ್ ಡಾಲರ್ ನಷ್ಟು ಬಂಡವಾಳ ಹೂಡಲು ತಯಾರಾಗಿರೋ ವಿಷಯ ಹೊರಬಿದ್ದಿದೆ. ರೂಪರ್ಟ್ ಮುರ್ಡೋಕ್ ಅವರ ಸಂಸ್ಥೆ ನಮ್ಮ ಕನ್ನಡ ಸೇರಿದಂತೆ ದೇಶದ ೬ ಪ್ರಾದೇಶಿಕ ಭಾಷೆಗಳಲ್ಲಿ ಹೊಸ ಚಾನಲ್ಲುಗಳನ್ನು ಶುರುಮಾಡುವವರಿದ್ದಾರೆ, ದಕ್ಷಿಣದ ೪ ರಾಜ್ಯಗಳು ಮತ್ತು ಉತ್ತರದ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಶುರುವಾಗಲಿವೆ. ಯಾಕೆ ಅಂತ ಹುಡುಕಲು ಹೊರಟರೆ ಸಿಗುವುದು ಆಯಾ ಭಾಷೆಯ ಮಾರುಕಟ್ಟೆಯಲ್ಲಿರುವ ವಿಪುಲ ಅವಕಾಶಗಳು!
ಅವರು ಇಲ್ಲಿ ಹಣ ಹೂಡ್ತಾ ಇರೋದು ನಮ್ಮ ದೇಶ ಅಥವಾ ಭಾಷೆ ಉದ್ಧಾರ ಮಾಡ್ತೀನಿ ಅನ್ನೋ ಕಾರಣಕಲ್ಲ. ಹಣ ಹೂಡ್ತಾ ಇರೋದು ಇಲ್ಲಿ ಹಣ ಮಾಡೋಕೆ ಇರುವ ಬಹಳಷ್ಟು ಅವಕಾಶಗಳನ್ನ ಬಳಸಿಕೊಳ್ಳುವುದಕ್ಕೆ.

೨೦೦೭-೦೮ ರಲ್ಲಿ ಪ್ರಾದೇಶಿಕ ಮಾರುಕಟ್ಟೆಗೆ ಬರುತ್ತಿರುವ ಜಾಹಿರಾತುಗಳು ಶೇ ೨೨.೭ ರಷ್ಟು ಅಧಿಕಗೊಂಡಿದೆ (http://www.business-standard.com/india/storypage.php?autono=331929 ). ಇದರಿಂದ ತಿಳಿಯುವುದು ಏನೆಂದರೆ ಯಾವುದೇ ಉತ್ಪನ್ನ ಜನಕ್ಕೆ ಮೆಚ್ಚುಗೆ ಆಗಲು, ಜನ ಅದನ್ನ ಖರೀದಿಸಲು, ಆಯಾ ಉತ್ಪನ್ನಗಳ ಜಾಹಿರಾತು ಜನರಿಗೆ ಅರ್ಥ ಆಗೋ ಭಾಷೇಲಿ ಇರಬೇಕು, ಹಾಗಿದ್ದಾಗಲೇ ಅವರು ಅದನ್ನ ಹೆಚ್ಚೆಚ್ಚು ಉಪಯೋಗಿಸುತ್ತಾರೆ.
ಎಲ್ಲ ಪ್ರಾದೇಶಿಕ ಭಾಷೆಗಳನ್ನ ತಗೆದು ಹಿಂದಿ ಅನ್ನೋ ಭೂತಾನ ನಮ್ಮ ಮೇಲೆ ಹೇರಬೇಕು ಅನ್ನೋರಿಗೆ, ಪ್ರಾದೇಶಿಕ ಭಾಷೆಯಿಂದ ಉದ್ಧಾರ ಆಗೋದಿಲ್ಲ ಅನ್ನೋ ಜನರಿಗೆ ಈ ವಿಷಯ ತಿರುಗೇಟು ನೀಡುವಂತಿದೆ.

ಯಾಕೆ ಪ್ರಾದೇಶಿಕತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ?
ಪ್ರಾದೇಶಿಕ ಚಾನಲ್ಲುಗಳು ಮತ್ತು ಮಾರುಕಟ್ಟೆ ಹೂಡಿಕೆದಾರರಿಗೆ ಹಣದ ಹೊರೆಯನ್ನು ಹೊರಿಸೋದಿಲ್ಲ, ಜಾಹಿರಾತುಗಳು ಕೇಂದ್ರಿಕೃತ ಮತ್ತು ನಿರ್ದಿಷ್ಟ ಗ್ರಾಹಕರನ್ನ ತಲುಪುತ್ತವೆ. ಮತ್ತೊಂದು ಮುಖ್ಯ ವಿಷಯವೆಂದರೆ ಅವುಗಳು ಇತರೆ ಭಾಷೆಗಳ ಜಾಹಿರಾತಿನಂತೆ ಪೋಲಾಗುವುದಿಲ್ಲ. ಮುಂಚಿನ ಹಾಗೆ ನಾವು ಹಿಂದಿ ಅಥವ ಇಂಗ್ಲಿಷ್ನಲ್ಲಿ ಜಾಹಿರಾತು ಕೊಟ್ರೆ ಯಾವ ಪ್ರಾಣೀನು ಮೂಸಿನೋಡಲ್ಲ ಅಂತ ತಿಳಿದುಕೊಂಡ ಅಂತರರಾಷ್ಟ್ರೀಯ ಕಂಪನಿಗಳಾದ ಪೆಪ್ಸಿ, ಕೋಕಾ ಕೋಲ, ನೆಸ್ತ್ಲೇ, ಮುಂತಾದವುಗಳು ಆಯಾ ಪ್ರಾದೇಶಿಕ ಭಾಷೆಯಲ್ಲಿ ಮತ್ತು ಅಲ್ಲಿಯ ಜನರನ್ನ ಬಳಸಿ ಜಾಹಿರಾತುಗಳನ್ನ ನೀಡಲು ಶುರು ಮಾಡಿದ್ದಾರೆ. ಇಷ್ಟೇ ಯಾಕೆ ನಮ್ಮ ಮೊಬೈಲು ಕಂಪನಿಗಳು ಕೂಡ ಪ್ರಾದೇಶಿಕ ಭಾಷೆಯಲ್ಲಿ ಸೇವೆ ನೀಡುವುದು ಅನಿವಾರ್ಯ ಅನ್ನೋದನ್ನ ತಿಳ್ಕೊಂಡಿದಾರೆ.
ಆಯಾ ಪ್ರಾದೇಶಿಕ ಭಾಷೆಯಲ್ಲಿ ಜಾಹಿರಾತು ನೀಡುವುದರಿಂದ ಅಲ್ಲಿಯಜನರಿಗೆ ತಲುಪುತ್ತೆ ಅನ್ನೋದು ಎಷ್ಟು ಸರಿನೋ, ಅಲ್ಲಿಯ ಜನರಿಗೆ ವಿಪುಲ ಉದ್ಯೋಗಾವಕಾಶಗಳನ್ನು ಒದಗಿಸುತ್ತೆ , ಹಿಂದಿನೇ ದೇವ್ರು ಅನ್ನೋ ಮೂಢರಿಗೆ ಪ್ರಾದೇಶಿಕತೆಯ ಬೆಲೆ ಗೊತ್ತಾಗತ್ತೆ, ಬಹಳಷ್ಟು ಲಾಭ ತಂದು ಕೊಡುತ್ತೆ ಅನ್ನೋದು ಅಷ್ಟೆ ಸರಿ. ಇಷ್ಟೆಲ್ಲಾ ಯಾಕೆ ಇತ್ತಿಚ್ಚಿನ ರೇಡಿಯೋ ಮಿರ್ಚಿಯ ಉದಾಹರಣೆ ನಮ್ಮ ಕಣ್ಣ ಮುಂದಿದೆ.

ಇದರಿಂದ ತಿಳ್ಕೊಬೇಕಾದದ್ದೇನು?
ಹಾಗೆ ಯೋಚನೆ ಮಾಡೋದಾದ್ರೆ ನಮಗೆ ಇನ್ನೊಂದು ಸಾಧ್ಯತೆ ಕಾಣಸಿಗುತ್ತೆ, ಅದೇನು ಅಂದ್ರೆ ಇವತ್ತು ಜಾಗತೀಕರಣ ಅನ್ನೋ ಕಾರಣದಿಂದ ಪ್ರಪಂಚದ ಯಾವುದೇ ವ್ಯಕ್ತಿ ಎಲ್ಲಿ ಬೇಕಾದರು ಬಂದು ಬಂಡವಾಳ ಹೂಡುತ್ತಾನೆ, ಇವತ್ತು ರೂಪರ್ಟ್ ಮುರ್ಡೋಕ್ ನಂತಹ ವ್ಯಕ್ತಿಗಳು ಇಲ್ಲಿಬಂದು ಬಂಡವಾಳ ಹೂಡಿ ಲಾಭ ಮಾಡಿಕೊಳ್ತಾರೆ, ಇದು ತಪ್ಪು ಅಂತ ಹೇಳ್ತಿಲ್ಲ ಆದ್ರೆ ನಮ್ಮಲ್ಲಿ ಇಂತಹ ಅವಕಾಶಗಳನ್ನ ಸದುಪಯೋಗ ಪಡಿಸಿಕೊಲ್ಲುತ್ತಿಲ್ಲ ಅನ್ನೋದು ವಿಷಾದನೀಯ. ಇವತ್ತು ನಮ್ಮ ಕನ್ನಡದಲ್ಲಿರುವ ಎಲ್ಲ ಚಾನೆಲ್ಲುಗಳು ಬೇರೆಯವರ ಕೈಯಲ್ಲಿ ಇರುವಂತಹವು. ಹೇಳಿಕೊಳ್ಳಲು ಕನ್ನಡದ್ದು ಅಂತ ಇರೋದು "ಕಸ್ತೂರಿ" ಮಾತ್ರ. ಇವತ್ತು ಪ್ರಾದೇಶಿಕ ಭಾಷೆಗಳಿಗಿರುವ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ನಮ್ಮ ಕನ್ನಡಿಗರಿಗೆ ಇಂತಹ ಚಾನೆಲ್ಲುಗಳನ್ನೂ ಸ್ಥಾಪಿಸಲು ಬೇಕಾಗುವ ನೆರವನ್ನು ನೀಡಬೇಕು ಮತ್ತು ಪ್ರೋತ್ಸಾಹಿಸಬೇಕು. ಇದರಿಂದ ಬರುವ ಲಾಭ ಇಲ್ಲಿಯೇ ವಿನಿಯೋಗವಾಗುತ್ತದೆ ಮತ್ತು ಇನ್ನು ಹೆಚ್ಚಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ಒಂದು ಕಾರ್ಯ ಮುಂದಿನ ನೂರು ದಾರಿಗಳಿಗೆ ಮಾರ್ಗ ಸೂಚಿಯಾಗಿ ನಿಲ್ಲುತ್ತೆ ಅನ್ನೋದು ನಿಜಕ್ಕೂ ಸಂತೋಷ ಪಡಬೇಕಾದಂತಹ ವಿಷಯ ಗುರು. ಇದೊಂದೇ ಅಲ್ಲ ಇಂತಹ ನೂರಾರು ಅವಕಾಶಗಳು ನಮ್ಮ ಕಣ್ಣ ಮುಂದೇನೆ ಇದ್ರೂ ನಾವುಗಳು ಅವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಅನ್ನೋದು ವಿಷಾದನೀಯ.

Rating
No votes yet

Comments