ಕನ್ನಡಿಗರು ಮರೆತ ಮಹಾನುಭಾವ

ಕನ್ನಡಿಗರು ಮರೆತ ಮಹಾನುಭಾವ

ಚಿತ್ರ

ಆಗಸ್ಫ್ಕ್ 12 ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು ನಿಧನರಾದ ದಿನ..ಅಂದು ಯಾವ ವಾಹಿನಿಯಲ್ಲೂ ಅವರ ಬಗ್ಗೆ ಒಂದು ವಿಚಾರವನ್ನೂ ಪ್ರಸ್ತಾಪಿಸಲಿಲ್ಲ..ಸರ್ಕಾರ..ಅದೆಲ್ಲಿದೆಯೋ? ನಮ್ಮ ಕನ್ನಡಿಗರಿಗೇನಾಗಿದೆ..?

Rating
No votes yet

Comments

Submitted by makara Thu, 08/22/2013 - 13:13

ಬಾಲುರವರೆ,
ನೀವು ಸಂಪದಕ್ಕೆ ಹೊಸದಾಗಿ ಪಾದಾರ್ಪಣೆ ಮಾಡುತ್ತಿರುವುದಕ್ಕೆ ಸ್ವಾಗತ. ನೀವೆ ಅವರ ಬಗ್ಗೆ ತಿಳಿದ ಒಂದಷ್ಟು ವಿಷಯಗಳನ್ನು ಇಲ್ಲಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಆಗ ಕನ್ನಡಿಗರಿಗೆ ಅವರ ಹಿರಿಮೆ ಗೊತ್ತಾಗುತ್ತಿತ್ತು. ಇಂತಹ ಮಹನೀಯರನ್ನು ನಾವು ಮರೆತಿದ್ದೇವೆ ಎನ್ನುವ ಹಪಿಹಪಿಯಾದರೂ ಓದುಗರಿಗೆ ಮೂಡುತ್ತಿತ್ತು. ಅವರು ನಿಧನವಾದದ್ದು 12ನೇ ಆಗಷ್ಟೋ ಅಥವಾ ನೀವು ಎಲ್ಲ ಕನ್ನಡಿಗರಂತೆ ಮರೆತು ಅದನ್ನು ಹತ್ತು ದಿವಸಗಳ ನಂತರ ನೆನಪು ಮಾಡಿಕೊಳ್ಳುತ್ತಿದ್ದೀರೋ? ಲೇಟಾದರೂ ಪರವಾಗಿಲ್ಲ; ಸಾಧ್ಯವಾದರೆ ಒಂದು ಸರಳ ಲೇಖನವನ್ನು ನಿಟ್ಟೂರು ಶ್ರೀನಿವಾಸರಾಯರ ಬಗೆಗೆ ಬರೆಯಿರಿ. ಆಗ ಅವರನ್ನು ನಿಜವಾಗಿ ಜ್ಞಾಪಿಸಿಕೊಂಡಂತೆ ಆಗುತ್ತದೆ. ಇದನ್ನೂ ಸಹ ಓದಿ ನಾವು ಮರೆತು ಹೋಗುವ ಮುನ್ನ ಆ ಕೆಲಸ ಮಾಡಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by venkatesh Fri, 08/23/2013 - 09:23

In reply to by makara

ನಿಟ್ಟೂರು ಶ್ರೀನಿವಾಸರಾಯರು ಒಬ್ಬ ಗಾಂಧಿ ಭಕ್ತರು. ದೇಶದ ಸ್ವಾತಂತ್ರ್ಯ ಸೇನಾನಿಗಳು. ಮೈಸೂರು ಸಂಸ್ಥಾನದ ಆಗಿನ ಕಾಲದ ನ್ಯಾಯಾಧೀಶರು. ಅವರು ಹೊಳಲ್ಕೆರೆಯ ನಿವಾಸಿ. ಗಣಪತಿ ಭಕ್ತರು. ಅವರು ಬಸವನಗುಡಿಯ ನೆಟ್ಕಲ್ಲಪ್ಪ ಸರ್ಕಲ್ ನ ಮೂಲೆಯಮನೆಯ ಸ್ವಂತ ಬಂಗಲೆಯ ನಿವಾಸಿ. ಅವರ ಮನೆಗೆ ಹೊಂದಿಕೊಂಡಂತೆ ಇರುವ ಮಾಡೆಲ್ ಹೌಸ್ ರಸ್ತೆಯಲ್ಲೇ ನಾವಿದ್ದದ್ದು. (ನಮ್ಮಣ್ಣನವರು) ಮತ್ತೇನು. ಇನ್ನೂ ಹಲವಾರು ಸಂಗತಿಗಳು ಓದಿದ ನೆನೆಪು; ಆದರೆ ಸಧ್ಯಕ್ಕೆ ಏನೂ ಕೆಲಸಕ್ಕೆ ಬರುತ್ತಿಲ್ಲ. ಭಂಡ್ರೀ ಯವರು ಏನಾದರೂ ಹೇಳಿ ಅಂತ ಅಪ್ಪಣೆ ಕೊಡಿಸಿದ್ದಕ್ಕೆ ಈ ಉತ್ತರ.

Submitted by BALU Fri, 08/23/2013 - 20:23

In reply to by makara

ಆತ್ಮೀಯರೇ
ತಮ್ಮ ಪ್ರತಿಕ್ರಿಯೆಗಾಗಿ ಅನಂತ ವಂದನೆಗಳು. ನಾನು ನಿಟ್ಟೂರರನ್ನು ತಡವಾಗಿ ಜ್ಞಾಪಿಸಿಕೊಳ್ಳಲಿಲ್ಲ. ಆಗಸ್ಟ್ 12 ರಂದು ಅವರ ನೆನಪಿನಲ್ಲಿ ನನ್ನ ಮನೆಯಲ್ಲೊಂದು ಪುಟ್ಟ ಕಾರ್ಯಕ್ರಮ ಮಾಡಿದ್ದೆ. ..ಆದರೆ ನಮ್ಮ ಕನ್ನಡಿಗರ ನಿರಭಿಮಾನಕ್ಕೆ ಬೇಸರವಾಯಿತು.