ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

ಭಾರತೀಯರು ಉತ್ತಮ ಉಳಿತಾಯದಾರರು ; ಉತ್ತಮ ಹೂಡಿಕೆದಾರರಲ್ಲ . ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ದೇಶದ ಜನರ ಬಡತನವನ್ನು ತೊಲಗಿಸಬಹುದು . ಷೇರುಪೇಟೆಯಲ್ಲಿ ಹಣ ತೊಡಗಿಸುವದು ಲಾಭಗಳಿಕೆಯ ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ಮಾರ್ಗ ; ಹಣದುಬ್ಬರದ ದರಕ್ಕಿಂತ ವೇಗವಾಗಿ ನಮ್ಮ ಹಣ ಬೆಳೆಯುವಂತೆ ಮಾಡಬಹುದು ;

ಸಂಪತ್ತು ಮತ್ತು ಷೇರುಪೇಟೆಯ ಕುರಿತು ಕನ್ನಡದಲ್ಲಿ ಪುಸ್ತಕಗಳೇ ಇಲ್ಲ ; ಕನ್ನಡಿಗರು ಷೇರುಪೇಟೆಯ ಲಾಭದಿಂದ ವಂಚಿತರಾಗಿದ್ದಾರೆ . ಇಂಗ್ಲೀಷ ಸಿರಿವಂತರ ಭಾಷೆ , ಸಿರಿವಂತಿಕೆ ಗಳಿಸುವ ಮಾರ್ಗವಾಗಿ, ಕನ್ನಡ ಬಡವರ ಭಾಷೆ ಆಗಿ ಉಳಿಯಬೇಕೇ ?

ಸಂಪತ್ತಿನ ಮತ್ತು ಹಣದ ಬಗ್ಗೆ ನಮ್ಮಲ್ಲಿ ತಪ್ಪು ಅಭಿಪ್ರಾಯಗಳಿವೆ . ಹಣ ಗಳಿಸುವದು ತಪ್ಪು, ನಾವು ಬಡವರಾದರೂ ನೆಮ್ಮದಿಯಾಗಿರಬಹುದು, ಇದ್ದೀವಿ ಅಂತ ತಿಳ್ಕೊಂಡಿದ್ದೀವಿ. ನಾವು ಬಡದೇಶವಾಗಿ ಉಳಿದಿರುವದಕ್ಕೆ ಈ ನಮ್ಮ ಮನೋಭಾವವೇ ಕಾರಣ.

( ನಿಮಗೆ ಗೊತ್ತಾ .... Economic times ... ಗುಜರಾತೀಲೂ ಇದೆ ...
ಸೆನ್ಸೆಕ್ಸ್ ಸೈಟು , ಇಂಗ್ಲೀಷ್ , ಹಿಂದಿ , ಮತ್ತು ಗುಜರಾತೀಲೂ ಇದೆ... )

ಕನ್ನಡಿಗರೂ ತಮ್ಮ ಮನೋಭಾವ ಬದಲಿಸಿ , ನಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳೋಣ , ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸುವದನ್ನು ಕಲಿಯೋಣ ಎಂದು ಈ ಪುಸ್ತಕ- ಷೇರುಪೇಟೆ ಎಂಬ ವಿಸ್ಮಯಲೋಕ’ ಬರೆದಿರುವ ಕೆ.ಕೆ.ಪೂರ್ಣೇಶ್ ಅವರ ಆಸೆ .

ನೀವೂ ಈ ಪುಸ್ತಕ ಓದಿ , ಇತರರಿಗೂ ತಿಳಿಸಿ. ನಾವು ಭಾಶೆ/ ಸಂಸ್ಕೃತಿ/ಇತಿಹಾಸ ಬಿಟ್ಟು ಬೇರೆ ವಿಚಾರ ಮಾಡೋದು ಯಾವಾಗ ?

Rating
No votes yet

Comments