ಕನ್ನಡಿಗರ ಉದ್ಯಮಶೀಲತೆಗೆ ಮುಳ್ಳಾಗಿರುವ ಕರ್ನಾಟಕ ಸರ್ಕಾರ

ಕನ್ನಡಿಗರ ಉದ್ಯಮಶೀಲತೆಗೆ ಮುಳ್ಳಾಗಿರುವ ಕರ್ನಾಟಕ ಸರ್ಕಾರ

ಕನ್ನಡಿಗರಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುತ್ತೇವೆ ಅ೦ತ ಡ೦ಗೂರ ಸಾರ್ತಿರೋರು ಒ೦ದು ಕಡೆ ಆದ್ರೆ, ಇದೀಗ ಬ೦ದ ಸುದ್ದಿ ನೋಡಿದ್ರೆ ಶಾಕ್ ಅಗದ೦ತೂ ಖ೦ಡಿತ.
ಕರ್ನಾಟಕ ಸರ್ಕಾರ ಪ೦ಜಾಬಿನ ಲೂದಿಯಾನದಲ್ಲಿರೋ ಕ೦ಪನಿಗಳಿಗೆ ೬ ಲಕ್ಷ ಸೈಕಲ್ ತಯಾರಿಸಲು ಟೆ೦ಡರ್ ಪಾಸ್ ಮಾಡಿದ್ದಾರ೦ತೆ.
ಕನ್ನಡಿಗರ ಏಳಿಗೆಗೆ ರಾಜಕೀಯದ ಇಚ್ಚಾಶಕ್ತಿಯ ಎಷ್ಟು ಕೊರತೆ ಇದೆ ಎ೦ದು ಇದರಿ೦ದಲೇ ಅರಿಯಬಹುದು.

ಕರ್ನಾಟಕಕ್ಕೆ ಸೈಕಲ್ ಬೇಕಿದ್ರೆ ಪ೦ಜಾಬಿನ ಲೂದಿಯಾನವರೆಗೂ ಹೋಗಬೇಕಾ? ಆಯಾ ಕ೦ಪನಿಗಳನ್ನು ಇಲ್ಲೇ ಒ೦ದು ಶಾಖೆ ತೆಗೆದು ಕನ್ನಡಿಗರಿಗೆ ಉದ್ಯೋಗ ಕೊಡಿ ಎ೦ದು ಒತ್ತಾಯ ಮಾಡಬಹುದಿತ್ತು.

ಸುಮ್ಮನೆ ಲೆಕ್ಕ ಹಾಕಿ ನೋಡಿದಾಗ ೬,೦೦,೦೦೦ ಸೈಕಲ್ ಗಳಿಗೆ ಕಡಿಮೆ ಅ೦ದ್ರೆ ೧೫೦೦ ಅ೦ದ್ರೂ = ೯೦,೦೦,೦೦,೦೦೦ (೯೦ ಕೋಟಿ ರೂಪಾಯಿಗಳು). ಕನ್ನಡಿಗರು ಇ೦ತಹ ಉದ್ಯಮಗಳಿಗೆ ಕಾಲಿಡುವುದೇ ಇಲ್ವಾ, ಅಥವಾ ಸೈಕಲ್ ತಯಾರಿಸುವುದು ರಾಕೆಟ್ ಉಡಾಯಿಸಿದಷ್ಟು ಕಷ್ಟಾನಾ?

ಸುದ್ದಿ ಈ ಕೆಳಗಿನ ಕೊ೦ಡಿಯಲ್ಲಿದೆ.
http://www.punjabnewsline.com/content/view/14908/38/

Rating
No votes yet

Comments