ಕನ್ನಡಿಗರ ಸ್ಥಿತಿ

ಕನ್ನಡಿಗರ ಸ್ಥಿತಿ

ಭಾರತ ಬಿಟ್ಟು, ಬೆಂಗಳೂರ್ ಬಿಟ್ಟು ಬಂದದ್ದಾಯ್ತು ಇಲ್ಲಿ
ದೊಡ್ ದೇಶದಾಗೆ ದುಡ್ ನಂಜ್ ಕೊಂಡು ಮನಸೋಗ್ತೈತೆ ಅಲ್ಲಿ!
ಕೆಲಸ ಸಿಗ್ದು, ದುಡ್ಡಿಲ್ಲಾಂತ ಏನೋ ಬಂದ್ವು ಇಲ್ಲಿ,
ಕೆಲಸ ದುಡ್ಡು ಎರಡೂ ಇದ್ರೂ ನಮ್ಮೋರಿಲ್ಲಾ ಇಲ್ಲಿ!
ಅಲ್ಲಿದ್ದವರ್ಗೆ ಇಲ್ಗ್ ಬರ್ ಬೇಕೂಂತ ಏನೋ ಭಾರಿ ಹುಚ್ಚು
ಇಲ್ಲಿದ್ರೂನೆ ಅಲ್ಲಿದ್ ನೆನಸೋದ್ ಏನಿದ್ ನನ್ಗೆ ಪೆಚ್ಚು!
ಐಸ್ ಕ್ರೀಂ ಕೇಕು ಚಾಕಲೇಟ್ ಬೇಕು ಮೈನೂರ್ ಮಕ್ಕಳೀಗ್ ಅಲ್ಲಿ
ಇಡ್ಲಿ ದೋಸೆ ಬೋಂಡಾ ನೆನಸಿ ಬಾಯಲ್ ನೀರು ಇಲ್ಲಿ!
ಮೈಸೂರ್ ಮಲ್ಲಿಗ್ವ್ ರೇಷ್ಮೆ ಸೀರೆ ಇಲ್ಲಿದ್ ನನ್ಗೆ ಕನ್ಸು
ಮೈಸೂರ್ ನಲ್ಲೇ ಇರೋ ಹುಡ್ಗಿಗೆ ಪ್ಯಾಂಟು ಸ್ಕರ್ಟಿನ ದಿರ್ಸು!
ಮಕ್ಕಳೀಗ್ ಕನ್ನಡ ಕಲಿಸ್ ಬೇಕೂಂತ ನಮಿಗೊದ್ದಾಟ ಇಲ್ಲಿ
ಹುಟ್ಟೋಕ್ ಮೊದಲೇ ಕಾನ್ವೆಂಟಿಗ್ ಹಾಕಿ ಇಂಗ್ಲಿಷ್ ಕಲ್ಸೋದ್ ಅಲ್ಲಿ!
ಅಲ್ಲಿ ಇಲ್ಲಿ ಎಲ್ಲೇ ಆಗ್ಲಿ ನಮ್ ತಾಯ್ ಭಾಷೆ ನವಿರು
ಕೇಳೋಕ್ ಆಸೆ ಓದೋಕ್ ಆಸೆ ಕನ್ನಡವೇ ನನ್ ತವರು!

(ಸಂಗ್ರಹ-ವಿಜಯ ಕರ್ನಾಟಕ)

Rating
No votes yet