ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-2
ಈ ಲೇಖನವನ್ನು ಈಗಾಗಲೇ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ.. ಸಂಪದ ಓದುಗರಿಗಾಗಿ ಇಲ್ಲೊಮ್ಮೆ ಪ್ರಸ್ತುತಪಡಿಸುತ್ತಿದ್ದೇನೆ.. ಬ್ಲಾಗ್ ವಿಳಾಸ:- http://shivagadag.blogspot.com
ಇದನ್ನು ಕಳಿಸಿದ್ದು:-
8) ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ /ವಾ..ವಾ../
ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ.....
ಅದೇ ಕಲ್ಲಿನಿಂದ
ಶಿಲ್ಪಿಯನ್ನು ಕೆತ್ತಿದರೆ,
ಕೊಲೆ...../ವಾ..ವಾ.//
ಇದನ್ನು ಕಳಿಸಿದವರು:- ಲಿಂಗರಾಜ್ (ಬೆಂಗಳೂರು)
9) ನನ್ನ ಮೊಟ್ಟ ಮೊದಲ ಹುಡುಗಿ ನಿಶಾ
ಹತ್ತಿಸಿದಳು ತಲೆಗೆ ಅವಳದೇ ನಶಾ..
ಕೈಕೊಟ್ಟಾನ ನನ್ನ ಪಾಲಿಗೆ ಉಳಿದದ್ದು ವಿಷ!!
ಆದರೆ, ಈಗ ನಾನು ಬದುಕಿರಲು ಕಾರಣ,
ಅವಳ ತಂಗಿ ಉಷಾ!!!
ಇದನ್ನು ಕಳಿಸಿದವರು:- ಮಮ್ಮಿ(ಮಂಜುಳಾ ಹೊಸಕೋಟೆ/ದೊಡ್ಡನಲ್ಲೂರಹಳ್ಳಿ)
10)ಮಗುವಿನ ನಗು
ಸತ್ತವರನ್ನು ಬದುಕಿಸುತ್ತೆ /ವಾ.ವಾ/
ಮಗುವಿನ ನಗು ಸತ್ತವರನ್ನು ಬದುಕಿಸುತ್ತೆ,
ಕಾಲೇಜ್ ಕನ್ಯೆಯ ನಗು
ಬದುಕಿರುವವರನ್ನೂ ಸಾಯಿಸುತ್ತೆ,, /ವಾ..ವಾ//
Moral:- ಕೂಸ್ ನ ನಂಬಿದ್ರೂ.. ಪೀಸ್ ನ ನಂಬಬಾರದು.
ಇದನ್ನು ಕಳಿಸಿದವರು:- ಆಶಾ (ಹೊಸಕೋಟೆ)
11) ಕೈ ಕೆಸರಾದರೆ.....
ಕೈ ತೊಳ್ಕೊ..
ಅಷ್ಟು ಗೊತ್ತಾಗಲ್ವ..?? ಅದನ್ನು
ನನ್ ಮೆಸೇಜ್ ನೋಡೇ ತಿಳ್ಕೊಬೇಕಾ?
ನಿಂಗೆ ಯಾವಾಗ ಬುದ್ಧಿ ಬರುತ್ತೋ.. ಆ ಪರಮಾತ್ಮನಿಗೇ ಗೊತ್ತು..
ಇದನ್ನು ಕಳಿಸಿದವರು:- ಈರಣ್ಣ ಯಳವತ್ತಿ (Brother)
12) ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,,
ಇದನ್ನು ಕಳಿಸಿದವರು:- ಯದು ಢಾಭಾ (ಚಿಕ್ಕನಾಯಕನಹಳ್ಳಿ)
13)ಪಿನ್ ಚುಚ್ಚಿದರೆ ರಕ್ತ ಯಾಕೆ ಬರುತ್ತೆ????
ಯಾರು ಚುಚ್ಚಿದರು ಅಂತಾ ನೋಡೋಕೆ ಬರುತ್ತೆ....
ಇದನ್ನು ಕಳಿಸಿದವರು:- ಮೀನಾ(ರೋಣ)
14) ಮುಂಗಾರು ಮಳೆ ಬಂದಿದೆ..
ನಿಂಗೆ ತುಂಬಾ ಖುಶಿ ಅಲ್ವಾ..?
ಮಳೆ ಬರುವಾಗ ಹೊರಗೆ ಹೋಗಬೇಕು, ನೀರಲ್ಲಿ ಆಡಬೇಕು, ಕುಣೀಬೇಕು
ಅಂತೆಲ್ಲಾ ಅನ್ಸುತ್ತೆ ಅಲ್ವಾ....???
ಎಲ್ಲಾ ಕಪ್ಪೆಗೂ ಹೀಗೇ ಆಗುತ್ತೆ...
ಇದನ್ನು ಕಳಿಸಿದವರು:- ಮಮ್ಮಿ(ಮಂಜುಳಾ ಹೊಸಕೋಟೆ/ದೊಡ್ಡನಲ್ಲೂರಹಳ್ಳಿ)
15)ಕಾಡು ಬೆಳೆಸಿ, ನಾಡು ಉಳಿಸಿ
ನೀರು ಉಳಿಸಿ, ಬೆಳೆ ಬೆಳೆಸಿ
ಮೆಸೇಜ್ ಕಳಿಸಿ, Friendship ಬೆಳೆಸಿ,. ಇಲ್ಲಾ ಅಂದ್ರೆ,
ತಲೆ ಬೋಳಿಸಿ, ಕೊಬ್ರಿ ಎಣ್ಣೆ ಉಳಿಸಿ.
ಇದನ್ನು ಕಳಿಸಿದವರು:- ಜಗದೀಶ(ಬೆಂಗಳೂರು)
16) ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು
ನೀನೇ ನನ್ನ ಟಾಟಾ ಬಿರ್ಲಾ.. /ವಾ..ವಾ../
ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಲು
ನೀನೇ ನನ್ನ ಟಾಟಾ ಬಿರ್ಲಾ,
ಪರ್ಸು ಖಾಲಿಯಾದ್ರೆ, ಅವಳು ಹೇಳುವಳು
ಟಾಟಾ ಬರ್ಲಾ.... /ವಾ..ವಾ/
ಇದನ್ನು ಕಳಿಸಿದವರು:- ನಿರಂಜನ (ತುಮಕೂರು)
17ಕಳಬೇಡ ಕೊಲಬೇಡ
CALL ಮಾಡಲು ಮರೀಬೇಡ,
MISS CALL ಕೊಡಬೇಡ
SMS ಕಳಿಸಲು ಮರಿಬೇಡ..
ಇದೇ ನನ್ನ ಸುದ್ದಿ
ಬರಲಿ ನಿಂಗೆ ಒಳ್ಳೆ ಬುದ್ಧಿ
ಮೊಬೈಲ್ ಸಂಗಮದೇವಾ....
ಇದನ್ನು ಕಳಿಸಿದವರು:- ಜಗದೀಶ(ಬೆಂಗಳೂರು)
18)ಅವಳ ಒಂದು ಕಣ್ಣು
ಎಷ್ಟು ಸುಂದರವಾಗಿತ್ತೆಂದರೆ...
ಅವಳ ಒಂದು ಕಣ್ಣು
ಎಷ್ಟು ಸುಂದರವಾಗಿತ್ತೆಂದರೆ..
ಅವಳ ಇನ್ನೊಂದು ಕಣ್ಣು
ಆ ಕಣ್ಣನ್ನೇ ನೋಡುತ್ತಿದ್ದು....
ಇದನ್ನು ಕಳಿಸಿದವರು:- ರಾಘವೇಂದ್ರ ಯಳವತ್ತಿ (ಗದಗ)
19) ಮನಸ್ಸಿನ ಆಳದಲ್ಲಿ...
ನೆನಪಿನ ಅಲೆಯಲ್ಲಿ
ಒಲುಮೆಯ ಜೀವಕ್ಕೆ
ಪ್ರೀತಿಯ ಹೃದಯಕ್ಕೆ
ತಂಪು ನೀಡುವುದೇ....
"ಗಣೇಶ ಬೀಡಿ".... ಸೇದಿ ಆನಂದಿಸಿ...
ಇದನ್ನು ಕಳಿಸಿದವರು:- ನಾನೇ ಕಣ್ರಿ,,
18) ನೀವು ಎಲ್ಲೇ ಇರಿ.. ಹೇಗೇ ಇರಿ,,
ನೂರಾರು ಬ್ಲಾಗ್ ನೋಡಿ, ಸಾವಿರಾರು ಕಾಮೆಂಟ್ಸ್ ಬರೀರಿ..
ಆದ್ರೆ, ಒಂದೇ ಒಂದು ಮಾತು ತಿಳ್ಕೊಳ್ರಿ,
ನಿಮಗೆ ನನ್ನಂಗೆ ನಗಿಸೋ-ಅಳಿಸೋ ಬ್ಲಾಗರ್ ಎಲ್ಲೂ ಸಿಗಲ್ಲಾ ಕಣ್ರಿ..
ನನ್ನ ಬ್ಲಾಗ್ ನ ಫಾಲೋ ಮಾಡಿ ಅಂತಾ ನಾನು ಕೇಳಲ್ಲಾ ರೀ..
ನಿಮ್ಮ ಬ್ಲಾಗಲ್ಲಿ ನನ್ನ ಬ್ಲಾಗ್ ನ ಹಾಕ್ಕೊಳ್ಳಿ ಅಂತಾನೂ ಬೇಡಲ್ಲಾ ಕಣ್ರೀ,...
ಅವಾಗವಾಗ ನನ್ನ ಬ್ಲಾಗ್ ನ ವಿಸಿಟ್ ಮಾಡಿ, ಒಂದು ಕಾಮೆಂಟ್ ಬರೆದು ನನ್ನ ವಿರೋಧಿಗಳ ಮಧ್ಯೆ ನನ್ನ ಮರ್ಯಾದೆ ಉಳಿಸಿ,,,
ಅಷ್ಟು ಸಾಕ್ರಿ, ಈ ಜೀವನಾ ಪೂರ್ತಿ ಬ್ಲಾಗಿಂಗ್ ಮಾಡ್ತಾ ಕಳೆದು ಬಿಡ್ತೀನಿ ಕಣ್ರಿ.......
ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ
http://shivagadag.blogspot.com