ಕನ್ನಡ ಕಸ್ತೂರಿ ...ನಮ್ಮದು ಚೆಲುವ ಕನ್ನಡ ನಾಡು..............ಜಿ.ವಿಜಯ್ ಹೆಮ್ಮರಗಾಲ

ಕನ್ನಡ ಕಸ್ತೂರಿ ...ನಮ್ಮದು ಚೆಲುವ ಕನ್ನಡ ನಾಡು..............ಜಿ.ವಿಜಯ್ ಹೆಮ್ಮರಗಾಲ

ಕನ್ನಡ ಕಸ್ತೂರಿ

* ........................ *
ನಮ್ಮದು ಚೆಲುವ ಕನ್ನಡ ನಾಡು
ಕಪ್ಪು ನೆಲದ ಈ ಬೀಡು ,
ಪಸಿರು ಪಚ್ಚೆಯ ನಾಡು,
ಗಂಗರು ಆಳಿದ ಈ ತಲಕಾಡು
ನಮ್ಮೂರು ಶ್ರೀಕಂಠನ ನೆಲೆ ನಂಜನಗೂಡು
ಒಮ್ಮೆ ಬಂದು ನೀ ದರ್ಶನ ಮಾಡು,
ಶ್ರುಂಗೇರಿ ಶಾರದೆಯ ಕಳೆ,
ಪಟ್ಟದ ಕಲ್ಲು ಐಹೋಳೆಯ ಚಿತ್ರಕಲೆ
ನೋಡಲೆರಡು ಕಣ್ಣು ಸಾಲದು ಬಾಲೆ,
ವನ್ಯಪ್ರಾಣಿಗಳ ತಾಣ ನಾಗರಹೊಳೆ,
ವಿದ್ಯಾರಣ್ಯರು ಹರಸಿದ ಮುತ್ತುರತ್ನದ ಹೊಳೆ,
ಹುಟ್ಟುವಳು ಕಾವೇರಿ ಕೊಡಗಲ್ಲಿ
ಹರಿದು ನಲಿವಳು ಕನ್ನಡ ನಾಡಲ್ಲಿ
ಕೊನೆಗೆ ಲೀನಳಾಗುವಳು ಬಂಗಾಳಕೊಲ್ಲಿಯಲ್ಲಿ,
ಸ್ವರ್ಗಕ್ಕೂ ಮಿಗಿಲು ಹಳೇಬೀಡು ಕಲೆಯಲ್ಲಿ
ಬರಿಯ ಶಿಲೆಯಲ್ಲೊ……. ಅಣ್ಣಾ ಕಲೆಯ ಬಲೆ ಸೋಮನಾಥಪುರ
ಎಷ್ಟು ನೋಡಿದರು ಸಾಲದು ಬೇಲೂರ………….
ನೋಡಿದಷ್ಟು ಮತ್ತೇ ಮತ್ತೇ ನೋಡೆನೆಸುವ ಅರಮನೆ ನಾಡು ಮೈಸೂರ………….
ಇತಿಹಾಸಕ್ಕೆ ಮುಕುಟ ಮಣಿಯಾಗಿರುವ ನಮ್ಮ ವಿಜಯನಗರ
ಚಿನ್ನದ ನಾಡು ನಮ್ಮ ಕೋಲಾರ
ಜಿಂಕೆ- ಆನೆಗಳ ತವರು ಬಂಡೀಪುರ
ಸಪ್ತರ್ಷಿಗಳ ಹಾಗೇ ಸಪ್ತಜ್ಞಾನಪೀಠ ಗಳ ಹೊತ್ತು ತಂದನಾಡಲ್ಲವೇ ನಮ್ಮ ಚೆಲುವ ಕನ್ನಡ ನಾಡು........
ಜಿ.ವಿಜಯ್ ಹೆಮ್ಮರಗಾಲ

Rating
No votes yet