ಕನ್ನಡ ಚಿತ್ರಕ್ಕೆ ತೆರೆಯಿಲ್ಲ - ಶೋಚನೀಯವಲ್ಲ, ಇದು ಖಂಡನೀಯ
ಬೆಂಗಳೂರಿನ ಚಿತ್ರಮಂದಿರವೊಂದು ತನ್ನ ಮೊದಲ ವರ್ಷದ ಸಂಭ್ರಮದಾಚರಣೆಗೆ ಯೋಜನೆ ಹಾಕಿಕೊಂಡಿದೆ http://www.famecinemas.com/mailer/150110/lido_emailer-15th-Jan-2010.html ಆದರೆ ಇದರ ಮಧ್ಯೆ ಕಳೆದ ವಾರವಷ್ಟೇ ಬಿಡುಗಡೆಯಾದ ದಿ||ವಿಷ್ಣುವರ್ಧನ್ ಅವರ ಸ್ಕೂಲ್-ಮಾಸ್ಟರ್ ಚಿತ್ರ ಪ್ರದರ್ಶನಕ್ಕೆ ಮಾತ್ರ ಮೀನಾ-ಮೇಶ ಎಣೆಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಈಗ ಹೊಸದಲ್ಲದ ಇವರ ಈ ವರ್ತನೆ, ವರ್ಷಪೂರ್ತಿ ಹೀಗೇ ಮಾಡಿರುವುದನ್ನು ನೋಡಿದವರಿಗೆ ಕನ್ನಡ ಚಿತ್ರಗಳ ಕುರಿತು ಇವರ ನಿಲುವಿನ ಒಂದು ಸಾರಾಂಶವೇ ಸಿಕ್ಕಿದಹಾಗಾಯ್ತು.
ಆದರೂ ಕೆಲವರು ಇವರಲ್ಲಿ ಕನ್ನಡ ಚಿತ್ರಗಳ ಬೇಡಿಕೆ ಸಲ್ಲಿಸಿದ್ದರೋ ಏನೋ, ಇದೀಗ ಸ್ಕೂಲ್ ಮಾಸ್ಟರ್ ಚಿತ್ರವನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಆದರೆ ಬೇರೆ ಚಿತ್ರಗಳಿಗೆ ಕೊಟ್ಟ ಪ್ರಚಾರ ನಮ್ಮ ಚಿತ್ರಕ್ಕಿಲ್ಲ. ಇವರಲ್ಲಿ ಈ ಸಿನಿಮಾ ನಡೆಯುತ್ತಿದೆ ಎಂದು ಜನರಿಗೆ ತಿಳಿಯುವುದಾದ್ರು ಹೇಗೆ? ಜನರು ಬರ್ಲಿಲ್ಲ ಅನ್ನೋ ಕಾರಣ ಕೊಟ್ಟು ಈ ಚಿತ್ರನ ಹೊರಹಾಕುವ ಯೋಜನೆಯಿದ್ದಂಗಿಲ್ವ ಈ ಹುನ್ನಾರ? ಕನ್ನಡ ಸಿನಿಮಾ ನೋಡುವ ಜನ ಕಡಿಮೆಯೆಂದೇ ಭಾವಿಸಿರುವ ಇವರು ಅದಕ್ಕೆ ಕಾರಣ ಸಿನಿಮಾಗಳ ಗುಣಮಟ್ಟವಲ್ಲ, ತಮ್ಮದೇ ಪ್ರಚಾರ ಕೊರತೆ ಎಂದು ಒಮ್ಮೆಯಾದರೂ ಯೋಚನೆ ಮಾಡಬೇಕೆಲ್ವಾ? ಜನರ ಕೈಲಿ ಹೇಳಿಸಿಕೊಂಡು, ಬೈಸಿಕೊಂಡು, ಅಥವಾ ಜನರ ಒತ್ತಡಕ್ಕೆ ಹೆದರಿ ನಮ್ಮ ನಾಡಲ್ಲೇ ಕನ್ನಡದ ಸಿನಿಮಾ ಹಾಕುವ ನಾಟಕವನ್ನು ಎಷ್ಟು ದಿನ ಕನ್ನಡಿಗ ಗ್ರಾಹಕರು ನೋಡುತ್ತಾ ಕೂರಲು ಸಾಧ್ಯ?
ಸ್ಕೂಲ್ ಮಾಸ್ಟರ್ ಚಿತ್ರವೂ ಸೇರಿದಂತೆ ಕಳೆದ ವಾರ ಬಿಡುಗಡೆಯಾದ ಐದಾರು ಕನ್ನಡ ಚಿತ್ರಗಳನ್ನು ನೋಡಲು ನಮ್ಮ ಜನ ಊರೆಲ್ಲಾ ನಾ ಮುಂದು ತಾ ಮುಂದು ಎಂದು ನಗರದ ತೆರೆಗಳನ್ನೆಲ್ಲಾ ಹುಡುಕುತ್ತಿರಬೇಕಾದರೆ, ಇಂತಹ ಚಿತ್ರಮಂದಿರಗಳು ಕನ್ನಡ ಚಿತ್ರಗಳನ್ನು ಮಾತ್ರ ಮೂಲೆಗಿರಿಸಿ ಬೇರೆ ಹಲವು ಭಾಷೆಯ ಚಿತ್ರಗಳ ಪ್ರದರ್ಶನ ಮಾತ್ರವಲ್ಲ ಭರ್ಜರಿ ಪ್ರಚಾರನೂ ಮಾಡುತ್ತಿರುವುದು ಬೆಂಗಳೂರಿನ ಜನರಿಗೆ ಎಷ್ಟು ಅವಮಾನಕರ ಹಾಗೂ ಬೇಸರ ತರುವ ಸಂಗತಿ ಯೋಚ್ನೆ ಮಾಡಿ.
ಇಲ್ಲಿ ಇವರು ಕನ್ನಡ ಚಿತ್ರ ಪ್ರದರ್ಶನ ಮಾಡುತ್ತಿಲ್ಲ, ಅಥವಾ ಸಾಕಷ್ಟು ದಿನ ಕನ್ನಡ ಸಿನಿಮಾ ಉಳಿಸಿಕೊಳ್ಳುತ್ತಿಲ್ಲ ಅನ್ನುವ ಪ್ರಶ್ನೆಗಳಿಗಿಂತಲೂ, ಕನ್ನಡ ಸಿನಿಮಾಗಳನ್ನು ಇವರು ಏನೆಂದು ಪರಿಗಣಿಸುತ್ತಾರೆ ಎಂಬುದು ಮುಖ್ಯವಾದ ಪ್ರಶ್ನೆಯಾಗಿದೆ. ಇದು ಕನ್ನಡ ಸಿನಿಮಾಗಳ ಗ್ರಾಹಕರಾಗಿ ನಮ್ಮನ್ನು ನಾವು ಕೇಳಿಕೊಳ್ಳಲೇಬೇಕಾದ ಪ್ರಶ್ನೆ. ನಮ್ಮ ನಾಡಿನ ಜನರು ಸಿದ್ದಪಡಿಸಿರುವ ಒಂದು ಚಲನಚಿತ್ರವನ್ನು, ಜನಕ್ಕೆ ತೋರಿಸುವ ಮುಂಚೆಯೇ ಅದನ್ನು "ಜನ ನೋಡಲ್ಲ" ಎಂಬ ನಿಲುವು ಇಟ್ಟುಕೊಂಡು, ಹೀಗೆ ಬೇರೆ ಭಾಷೆಯ ಚಲನಚಿತ್ರಗಳಿಗೆ ಮಣೆ ಹಾಕೋದ್ರಿಂದ ಕನ್ನಡಿಗ ಗ್ರಾಹಕನ ಹಿತಾಸಕ್ತಿಗೆ ಸ್ಪಂದಿಸಿದಂಗಾಗತ್ತಾ? ಕನ್ನಡೇತರ ಚಿತ್ರದ ಗುಣಮಟ್ಟದ ಬಗ್ಗೆ ಆಶಾಭಾವ ವ್ಯಕ್ತಪಡಿಸಿ, ಕನ್ನಡ ಸಿನಿಮಾಗಳ ಬಗ್ಗೆ ಇವರು ನಿರಾಶಾಭಾವ ವ್ಯಕ್ತ ಪಡಿಸುತ್ತಿರುವುದು ಖಂಡನೀಯ.
ಗ್ರಾಹಕರಾಗಿ ನಾವು ಏನ್ ಮಾಡ್ಬೋದು?
ಇಂತಹ ಪರಿಸ್ಥಿತಿ ಹುಟ್ಟಲು ಕಾರಣವಾದರೂ ಏನು? ಕನ್ನಡ ಸಿನಿಮಾಗಳಿಗೆ ಕನ್ನಡಿಗರಾಗಿ ನಾವೇ ಬೇಡಿಕೆ ತೋರಿಸಲು ಮುಂದಾಗಬೇಕು ತಾನೆ? ಈ ರೀತಿ ಕನ್ನಡ ಸಿನಿಮಾಗಳ ನಿರ್ಲಕ್ಷೆ ಆಗುತ್ತಿದ್ದಲ್ಲಿ ಅದನ್ನು ಪ್ರಶ್ನಿಸಿ, ಸದಾ ಕನ್ನಡ ಚಿತ್ರಗಳಿಗೆ ಆದ್ಯತೆ ಕೊಡುವಂತೆ ನಾವು ಆಗ್ರಹಿಸಬೇಕು, ಆ ಮೂಲಕವೇ ಕನ್ನಡ ಚಿತ್ರೋದ್ಯಮದಲ್ಲಿ ಏನೇ ಸುಧಾರಣೆಯಾಗ್ಬೇಕೋ ಅದು ಆಗುವುದಕ್ಕೆ ಹಾದಿ ಮಾಡಿಕೊಡಬಹುದು. ಅದೇ ಗ್ರಾಹಕನಾಗಿ ನಮ್ಮ ಕೈಯಲ್ಲಿರುವ ಶಕ್ತಿಯೂ ಹೌದು.
ಕನ್ನಡ ಚಿತ್ರಗಳನ್ನು ಕಡೆಗಣಿಸಿರೋ ಚಿತ್ರಮ೦ದಿರಗಳಿಗೆ ನಮ್ಮ ಅನಿಸಿಕೆ ಬರೆಯೋಣ
ಫೇಮ್ ಸಿನೆಮಾ ಐಡಿ: contactus@famecinemas.com
ಫನ್ ಸಿನೆಮಾ ಐಡಿ: sales_bangalore@ecity.esselgroup.com, ಅಥವಾ ಇಲ್ಲಿ ನಿಮ್ಮ ಅನಿಸಿಕೆ ನೇರವಾಗಿ ಹಾಕಿ: https://www.funcinemas.com/GetInTouch.aspx?cc=13