ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?

ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?

ಸಂಪದಕ್ಕೆ ಇಂದು ಲಾಗ್ ಮಾಡಿದಾಗ ನುಡಿಮುತ್ತುಗಳ sectionಅಲ್ಲಿ ಹೀಗೆ ಬರೆದಿತ್ತು..

"ಪ್ರಶ್ಣೆ ಮಾಡುವುದನ್ನು ನಿಲ್ಲಿಸದಿರುವುದು ಬಹಳ ಮುಖ್ಯ" - ಆಲ್ಬರ್ಟ್ ಐನ್ಸ್ತಟೈನ್.

ಸ್ವಲ್ಪ ದೈರ್ಯ ಮಾಡಿ ಈ ಪ್ರಶ್ಣೆ ಕೇಳುತ್ತಿದ್ದೇನೆ.. ನೀವೆಲ್ಲಾ ನನ್ನ ಮೇಲೆ ಧಾಳಿ ಹೇಳುವ ಮುನ್ನ ನನ್ನ ಒಂದು ಮಾತು "ನಾನು ರಾಜ್ ಅಭಿಮಾನಿ, ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು".. ಒಬ್ಬ ನಟನಾಗಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಕನ್ನಡದ ಕೆಲವು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.. ಇದೆಲ್ಲಾ OK. ಆದ್ರೆ ಅವರು ಅಥವ ಅವರ ಕುತುಂಬದವರು ಒಂದು ರೀತಿಯ Monopolism ಸ್ರುಷ್ಟಿ ಮಾಡಿದ್ರು..

ಅವರಿಂದ ಅನಂತ್-ನಾಗ್ ಗೆ ಬಹಳಶ್ಟು ಅವಕಾಶಗಳು ತಪ್ಪು ಹೋದವು ಅಂತ ಕೇಳಿದ್ದೇನೆ.. ವಿಷ್ಣುವಿನ ವಿರುದ್ದವೂ ಬಹಳಷ್ಟು ಹಣಾಹಣಿ ನೆಡೆದು, ವಿಷ್ಣು ಕನ್ನಡ ಚಿತ್ರರಂಗ ತ್ಯಜಿಸುವ ನಿರ್ದಾರ ಕೈಗೊಂಡಾಗ, ಅವರ ನಡುವೆ ರಾಜಿ ಆಯಿತು ಅಂತಲೂ ಕೇಳಿದ್ದೇನೆ.. ಇವೆಲ್ಲಾ ಎಷ್ಟು ನಿಜವೋ ನನಗೆ ತಿಳಿಯದು. ಆದರೆ ಒಂದಂತೂ ನಿಜ.. ಅವರ ಮಕ್ಕಳು ಮಾಡಿದ ಅನೇಕ ಡಬ್ಬ ಚಿತ್ರಗಳು, ಒಳ್ಳೊಳ್ಳೆ ಚಿತ್ರಮಾಂದಿರಗಳಲ್ಲಿ ಜನ ಬರದಿದ್ದರೂ ೫೦ ದಿನ, ೧೦೦ ದಿನ ಹೀಗೆ ಒಡಿಸಿದ್ದನ್ನ ಕಣ್ಣಾರೆ ನೋಡಿದ್ದೇನೆ..ಇದರಿಂದ ಒಳ್ಳೆ ಚಿತ್ರಗಳ್ಗೆ ಅವಕಾಶ ತಪ್ಪಿಹೋಗಲ್ವೆ ? ಈಗ ಕನ್ನಡ ಚಿತ್ರರಂಗದಲ್ಲಿ ಇರುವ ಬಹಳಷ್ಟು ಜನ Dr-ರಾಜ್ ಸಂಬಂದಿಗಳೇ .. ಇದರಿಂದ ಬೇರೆ ನಿಜವಾದ talentsಗೆ ಅವಕಾಶ ತಪ್ಪಿ ಹೊಗ್ತಿದೆ ಅಂತ ಯಾರಿಗೂ ಅನ್ಸೊಲ್ವೆ ?

ರಾಜ್ ಬಹಳಷ್ಟು ಒಳ್ಳೆ ಕೆಲಸ ಮಾಡಿರಬಹುದು. ಆದ್ರೆ, ಕನ್ನಡ ಯಾವುದೇ ವ್ಯಕ್ತಿ ಅಥವ ವ್ಯಕ್ತಿತ್ವಕ್ಕಿಂತ ದೊಡ್ದದು... ಯಾರೂ ಅದನ್ನ Hijack ಮಾಡೊಕ್ಕೆ ಬಿಡ್ಬಾರ್ದು..

Rating
No votes yet

Comments