ಕನ್ನಡ ಚಿತ್ರ ಒದ್ದೋಡಿಸಲು ಯತ್ನಿಸಿದ ಪಿವಿಆರ್
ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.
ಅಂತರಾತ್ಮ ಕಳೆದ ವಾರ ತೆರೆಗೆ ಬಂದು ಯಶಸ್ವಿ ಪ್ರದರ್ಶನ ಕಾಣ್ತಾ ಇರೋ ಚಿತ್ರ. ಕನ್ನಡ ಚಿತ್ರದಿಂದ ಹೆಸರು, ಹಣ ಎರಡನ್ನು ದಂಡಿಯಾಗಿ ಮಾಡಿಕೊಂಡಿರೋ, ಆದ್ರೂ ಕನ್ನಡ ಚಿತ್ರಗಳ ಬಗ್ಗೆ ಯಾವಾಗಲೂ ಮಲತಾಯಿ ಧೋರಣೆ ತಳೆಯೋ ಪಿ.ವಿ.ಆರ್ ಮಲ್ಟಿಪ್ಲೆಕ್ಸ್ ನಲ್ಲಿ ಈ ಚಿತ್ರ ಯಶಸ್ವಯಾಗಿ ಪ್ರದರ್ಶನ ಕಾಣ್ತಾ ಇತ್ತು. ಯಶಸ್ವಿಯಾಗಿ ಓಡೋ ಯಾವುದೇ ಸಿನೆಮಾವನ್ನು ಚಿತ್ರ ಮಂದಿರದಿಂದ ತೆಗೆಯೋದು ಕಾನೂನುಬಾಹಿರ. ಚಿತ್ರ ಮಂದಿರದಲ್ಲಿ ಕಲೆಕ್ಷನ್ ಇಲ್ಲ ಅಂತಾದಾಗ ಮಾತ್ರ ಆ ಚಿತ್ರ ತೆಗೆದು ಬೇರೆದನ್ನು ಹಾಕುವ ಹಕ್ಕು ಚಿತ್ರ ಮಂದಿರಕ್ಕಿದೆ. ಆದ್ರೆ ಅಂತರಾತ್ಮ ಚೆನ್ನಾಗಿ ಓಡ್ತಾ ಇತ್ತು, ಅದನ್ನ ತೆಗಯೋಕೆ ಹೋದ್ರೆ ಕಿರಿಕ್ ಆಗುತ್ತೆ ಅನ್ನೋದು ಪಿ.ವಿ.ಆರ್ ಅವರಿಗೆ ಗೊತ್ತು.
ಅದಕ್ಕೆ ಅವರು ಮಾಡಿದ ತಂತ್ರ ಅಂದ್ರೆ ಚಿತ್ರ ನೋಡಲು ಬರುವ ಜನ ಸಾಮಾನ್ಯರಿಗೆ ಚಿತ್ರದ ಬಗ್ಗೆ ಅಪಪ್ರಚಾರ ಮಾಡಿದ್ದು. "ಇದೊಳ್ಳೆ ಡಬ್ಬಾ ಸಿನೆಮಾ, ಕಚಡಾ ಸಿನೆಮಾ, ಇದನ್ಯಾಕ್ ನೋಡ್ತಿರಾ, ಇದರ ಬದಲು ಒಳ್ಳೆ ತೆಲುಗು, ತಮಿಳು, ಹಿಂದಿ ಚಿತ್ರ ನೋಡಿ" ಅಂತ ಪಿ.ವಿ.ಆರ್ ನ ಸಿಬ್ಬಂದಿಯೇ ಅಪಪ್ರಚಾರಕ್ಕೆ ಮುಂದಾದ ಸುದ್ದಿ ಇವತ್ತಿನ ಸಂಜೆವಾಣಿಯಲ್ಲಿ ಬಂದಿದೆ. ತೆಲುಗು,ತಮಿಳು, ಹಿಂದಿ ಚಿತ್ರ ರಂಗದ ಲಾಬಿಗಳ ಮುಂದೆ ಯಾವ ಹಂತಕ್ಕೆ ಬಂತು ನೋಡಿ ಕನ್ನಡ ಚಿತ್ರರಂಗದ ಸ್ಥಿತಿ. ಒಳ್ಳೇ ಸಿನೆಮಾದ ಕೊರತೆ ಇರೋವಾಗ, ಬರೋ ಒಳ್ಳೆ ಸಿನಮಾವನ್ನು ಈ ರೀತಿ ತುಳಿಯುವ ಪ್ರಯತ್ನವನ್ನು ನಾವೆಲ್ಲ ಖಂಡಿಸಬೇಕು. ಪಿ.ವಿ.ಆರ್ ನವರಿಗೆ ಬುದ್ದಿ ಹೇಳಬೇಕು.
ನೆನಪಿದೆಯಾ ಗೆಳೆಯರೇ, ಇದೇ ಪಿ.ವಿ.ಆರ್ ಐದು ವರ್ಷದ ಹಿಂದೆ ಕನ್ನಡ ಮಾತಾಡಲ್ಲ, ಕನ್ನಡ ಸಿನೆಮಾ ಹಾಕಲ್ಲ ಅಂತೆಲ್ಲ ನಾಟಕ ಮಾಡಿದಾಗ, ಅದನ್ನ ಪ್ರತಿಭಟಿಸಿ, ಅವರನ್ನ ಮಾತುಕತೆಗೆ ಎಳೆದು ಸರಿ ದಾರಿಗೆ ತಂದಿದ್ದು ಅಂತರ್ಜಾಲದಲ್ಲಿರುವ ನೂರಾರು ಐ.ಟಿ ಕನ್ನಡಿಗರು. ಅದಾದ ಮೇಲೆ ಪಿ.ವಿ.ಆರ್ ಕನ್ನಡ ಚಿತ್ರಗಳಿಗೆ ಆದ್ಯತೆ ಕೊಟ್ಟಿತು. ಕನ್ನಡ ಮಾತನಾಡುವ ಸಿಬ್ಬಂದಿ ನೇಮಿಸಿಕೊಂಡಿದ್ದು. ಈಗ ಮತ್ತೆ ತನ್ನ ಹಳೆ ವರಸೆ ತೆಗೆದಿದೆ. ಎಲ್ಲ ಕನ್ನಡಿಗರು ಒಟ್ಟಾಗಿ ಇವರಿಗೆ ಬುದ್ದಿ ಹೇಳಬೇಕು. ಕನ್ನಡ ಕೈಬಿಟ್ರೆ ಅವರ ವ್ಯಾಪಾರವೇ ಹಾಳಾಗೋದು, ಅದು ಕನ್ನಡಿಗರ ವಿಶ್ವಾಸ ಕಳೆದುಕೊಳ್ಳೊದು, ಅದರಿಂದ ಹಾನಿ ಅವರಿಗೇ ಅಂತಲೂ ಹೇಳಬೇಕು.
ಬನ್ನಿ ನಿಮ್ಮ ಐದು ನಿಮಿಷ ಸಮಯ ಅವರಿಗೆ ಒಂದು ಮಿಂಚೆ ಬರೆಯಲು ಹೋಗಲಿ. ಇದು ಹೀಗೆ ಮುಂದುವರೆದ್ರೆ ನಾಳೆ ಕನ್ನಡ ಸಿನೆಮಾನೇ ಹಾಕಲ್ಲ ಅನ್ನೋ ಹಂತಕ್ಕೆ ಹೋದಾರು !
ಹಾಗಾಗಬಾರದೆಂದರೆ, ಈಗಲೇ feedback@pvrcinemas.com ಗೆ ಮಿಂಚೆ ಬರೆದು ನಿಮ್ಮ ನ್ಯಾಯಸಮ್ಮತ ಪ್ರತಿಭಟನೆಯ ಬಿಸಿ ಮುಟ್ಟಿಸಿ.
ಸಂಜೆವಾಣಿಯಲ್ಲಿ ಬಂದ ಸುದ್ದಿ: