ಕನ್ನಡ ನಿಘಂಟು

ಕನ್ನಡ ನಿಘಂಟು

ಹೀಗೆ ನನ್ನದೊಂದು ಯೋಚನೆ

ಬಹಳ ದಿನದಿಂದ ಈ ಕುರಿತು ಕೆಲಸ ಮಾಡಬೇಕೆಂದುಕೊಂಡಿದ್ದೆ, ಆದ್ರೆ ಕಾರಣಾಂತರದಿಂದ ಆಗಿರಲಿಲ್ಲ, ಈಗಾಗಲೇ ಕನ್ನಡ ನಿಘಂಟು ಸಂಪದದಲ್ಲಿ ಬಂದಿರಬಹುದು, ಅಥವಾ ಅದಕ್ಕೆ ವೆಬ್ ಲಿಂಕನ್ನು ಸೇರಿಸಿರಬಹುದು, ಆದ್ರೆ ಸಂಪದಿಗರ ಅನುಕೂಲಕ್ಕೆ ನನ್ನದೊಂದು ಪುಟ್ಟ ಪ್ರಯತ್ನ, ಅಕಸ್ಮಾತ್ ಏನಾದರೂ ತಪ್ಪಿದ್ದರೆ ತಿಳಿಸಿ, ತಿದ್ದಿಕೊಳ್ಳುವೆ, ಇದು ಈಗಾಗಲೇ ಇದ್ದರೆ ಹರಿ ದಯವಿಟ್ಟು ಅಳಿಸಿ ಹಾಕಿ ನನಗೊಂದು ಮಿಂಚಂಚೆ ಕಳಿಸು. ಇದರ ಪ್ರಯತ್ನವನ್ನು ಬಿಡುತ್ತೇನೆ.

೨೦೦೦ ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಎಲ್ಲರಲ್ಲೂ ಅವರದೇ ಆದ ಪದಗಳ ಅರ್ಥವಿರಬಹುದು, ನಾನಿಲ್ಲಿ ಕೇವಲ ಮ್ಯೆಸೂರು ವಿಶ್ವವಿದ್ಯಾಲಯದವತಿಯಿಂದ ಪ್ರಕಟಿಸಿದ ಪುಸ್ತಕದಿಂದ ದಿನವೂ ಈ ವಿಚಾರವಾಗಿ ಬರೆಯೋಣ ಅನ್ನಿಸಿದೆ,

ಕನ್ನಡ ನಿಘಂಟು

ಅ (ನಾ) - ಕನ್ನಡ ವರ್ಣಮಾಲೆಯ ಮೊದಲನೆ ಅಕ್ಷರ, ವಿಷ್ಣು.

ಅಂಕ (ನಾ) - ಕೊಕ್ಕೆ, ಅಂಕುಶ, ಕೊಂಕು ಡೊಂಕು, ಅಂಕವಣಿ;ರಿಕಾಪು, ತೊಡೆ, ಗುರುತು;ಚಿಹ್ನೆ, ಹೆಸರು, ಬಿರುದು,
ಯುದ್ಧ, ಸ್ಪರ್ಧೆ, ಕಾಳಗ, ಹೋರಾಟಗಳು ನಡೆಯುವ ಸ್ಥಳ, ಜಟ್ಟಿ, ನಾಟಕದಲ್ಲಿ ಒಂದು ಭಾಗ,
ಕುಂದು;ಕಳಂಕ, ಅಂಕೆ ಸಂಖ್ಯೆ, ಪ್ರಸಿದ್ದಿ, ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಯೋಗ್ಯತೆಯನ್ನು ಸೂಚಿಸಲು
ನೀಡುವ ಗುಣಾಂಕ.

ಅಂಕಗಣಿತ (ನಾ) - ಸಂಖ್ಯೆಗಳ ಮೂಲಕ ಮಾಡುವ ಗಣಿತ, ಗಣಿತಶಾಸ್ತ್ರದ ಒಂದು ಪ್ರಭೇಧ.

ಅಂಕಣ (ನಾ) - ಮನೆಯ ಎರಡು ಕಂಬಗಳ (ತೊಲೆಗಳ) ಪ್ರದೇಶ. ಸ್ಥಳ;ಪ್ರದೇಶ, ಸೆಳೆಖಾನೆ;ಡ್ರಾಯರ್,
ಪತ್ರಿಕೆಯಲ್ಲಿನ ಉದ್ದ ಸಾಲು;ಕಾಲಂ., ಪತ್ರಿಕೆಯಲ್ಲಿ ನಿರ್ದಿಷ್ಟ ವಿಷಯಕ್ಕೆ ಗೊತ್ತುಪಡಿಸಿದ ಜಾಗ.

ಅಂಕಣ ಬರಹ (ನಾ) - ಪತ್ರಿಕೆಯಲ್ಲಿ ಬರೆಯುವ ನಿಯತವಾದ ನಿರ್ದಿಷ್ಟ ಲೇಖನ.

ಅಂಕಣಿ (ನಾ) - ಕುದುರೆಯ ರಿಕಾಪು.

ಅಂಕನ (ನಾ) - ಗುರುತು ಮಾಡುವುದು, ಮುದ್ರೆಯೊತ್ತುವುದು, ಬರೆ ಹಾಕುವುದು - ಎಳೆಯುವುದು.

ಅಂಕಪಟ್ಟಿ (ನಾ) - ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಪಡೆದ ಅಂಕಗಳನ್ನು ನಮೂದಿಸುವ ಪಟ್ಟಿ.

ಅಂಕಪರದೆ (ನಾ) - ನಾಟಕದಲ್ಲಿ ಅಂಕದ ಕೊನೆಯಲ್ಲಿ ಬಿಡುವ ತೆರೆ.

ಅಂಕಮಾಲೆ (ನಾ) - ಬಿರುದುಗಳುಳ್ಳ ಮಾಲೆ, ಬಿರುದಾವಳಿ.

ಅಂಕಲಿಪಿ (ನಾ) - ಅಂಕಿಗಳನ್ನು ಅಕ್ಷರಗಳನ್ನು ಕಲಿಸುವ ಪುಸ್ತಕ, ಅಂಕೆಗಳನ್ನು ಬಳಸಿ ಬರೆಯುವ ಬರಹ.

ಅಂಕವಣೆ (ಣಿ) - ಅಂಕಣಿ

ಅಂಕವರಿ (ನಾ) - ರಣಭೇರಿ

ಅಂಕಮಾತು (ನಾ) - ಯುದ್ಧದ ಮಾತು, ವೀರವಚನ.

ಅಂಕಿ (ನಾ) - ಸಂಖ್ಯೆಯ ಬರಹರೂಪದಲ್ಲಿ ತೋರಿಸುವ ಚಿಹ್ನೆ; ಅಂಕೆ.

ಅಂಕಿತ (ನಾ) - ಗುರುತು, ಮುದ್ರಿಕೆ, ರುಜು, ಸಹಿ, ಅರ್ಪಣೆ (ಗು), ಗುರುತು ಮಾಡಿದ.

ಅಂಕಿತನಾಮ (ನಾ) - ವ್ಯಕ್ತಿ/ಸ್ಥಳಗಳಿಗೆ ಇಟ್ಟಿರುವ ಹೆಸರು.

ಮುಂದುವರೆಯುವುದು..........................................................

Rating
Average: 5 (1 vote)

Comments