ಕನ್ನಡ ಸಾಹಿತ್ಯ ಪರಿಷತ್, ಗಣಕ ಪರಿಷತ್ - ಪತ್ರಕರ್ತರು, ಸಾಹಿತಿಗಳು, ಚಲನ ಚಿತ್ರ ವಲಯದಿಂದ ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಅಭೂತಪೂರ್ವ ಬೆಂಬಲ...!

ಕನ್ನಡ ಸಾಹಿತ್ಯ ಪರಿಷತ್, ಗಣಕ ಪರಿಷತ್ - ಪತ್ರಕರ್ತರು, ಸಾಹಿತಿಗಳು, ಚಲನ ಚಿತ್ರ ವಲಯದಿಂದ ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಅಭೂತಪೂರ್ವ ಬೆಂಬಲ...!

ಕಂಪ್ಯೂಟರ್ ಪರಿಸರದಲ್ಲಿ ದೇಸಗತಿ ಭಾಷೆಗಳ ಅಳವಡಿಕೆಯ ಕುರಿತಂತೆ ಕನ್ನಡಸಾಹಿತ್ಯ.ಕಾಂ ಹಾಗು ಎಲ್ಲ ಬೆಂಬಲಿಗರ ಪರವಾಗಿ ಸಹಿ ಸಂಗ್ರಹ ಆಂದೋಳನಕ್ಕೆ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದ ಪ್ರಮುಖ ಪತ್ರಿಕೆಗಳ ಬಹುತೇಕ ಎಲ್ಲ ಪತ್ರಕರ್ತರು ಬೆಂಬಲ ಸೂಚಿಸಿ ಸಹಿ ಮಾಡಿದ್ದಾರೆ. ಜೊತೆಗೆ, ಸಾರ್ವಜನಿಕ ಜೀವನದಲ್ಲಿ, ಸಾಂಸ್ಕೃತಿಕ ಮುಂಚೂಣಿಯಲ್ಲಿರುವ ಅನೇಕರು, ಚಲನಚಿತ್ರ ರಂಗದ ಪ್ರಮುಖರೂ ಸಹ ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ.ಅವರುಗಳ ವಿವರ ಈ ಕೆಳಕಂಡಂತಿದೆ:

ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು
ಪಿ ಶೇಷಾದ್ರಿ - ಚಲನ ಚಿತ್ರ ನಿರ್ದೇಶಕರು
ಲಿಂಗದೇವರು - ಚಲನಚಿತ್ರ ನಿರ್ದೇಶಕರು (ಮೌನಿ)
ಚಂದ್ರಶೇಖರ ಪಾಟೀಲ (ಚಂಪಾ), ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಶತ್ತು,
ಎಸ್ ದಿವಾಕರ್,ಲೇಖಕ/ಅನುವಾದಕ/ಪತ್ರಕರ್ತ,
ಪ್ರತಿಭಾ ನಂದಕುಮಾರ್, ಕವಿಯತ್ರಿ/ಅಂಕಣಗಾರ್ತಿ/ಪತ್ರಕರ್ತೆ,
ಮಹಾಬಲ ಕೊಡ್ಲೆಕೆರೆ - ಲೇಖಕರು,
ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು
ರಂಗನಾಥ್ - ಸಂಪಾದಕರು, ಕನ್ನಡಪ್ರಭ
ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ,
ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,
ಆರ್ ಪೂರ್ಣಿಮ - ಸಂಪಾದಕರು , ಉದಯವಾಣಿ
ವಿಶ್ವೇಶರ ಭಟ್ - ಸಂಪಾದಕರು, ವಿಜಯ ಕರ್ನಾಟಕ
ಕೃಷ್ಣ ಪ್ರಸಾದ್ - ಸಂಪಾದಕರು, ವಿಜಯ ಟೈಮ್ಸ್
ರಾಮಕೃಷ್ಣ ಉಪಾಧ್ಯ - ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್
ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ
ಎಂ ಕೆ ಭಾಸ್ಕರ ರಾವ್, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,
ಸಿ ಜಿ ಮಂಜುಳ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,
ಜಿ ಪಿ ಬಸವರಾಜು, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,
ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ
ಬಾಗೇಶ್ರೀ- ಮುಖ್ಯ ವರದಿಗಾರರು, ದಿ ಹಿಂದೂ
ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ,
ಭೂಮಿಕ, ಉಪ ಸಂಪಾದಕರು, ದಿ ಹಿಂದೂ,
ಎಸ್ ಅರ್ ರಾಮಕೃಷ್ಣ, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ,
ಎಸ್ ದಿವಾಕರ್, ಲೇಖಕರು-ಪತ್ರಕರ್ತರು
ಡಾ|| ವಿಜಯಾ, ಪತ್ರಕರ್ತರು,
ವಿ ವೆಂಕಟೇಶ್, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,
ಗಣಕ ಪರಿಷತ್ ಪದಾಧಿಕಾರಿಗಳಲ್ಲದೆ-
- ಮಿಗಿಲಾಗಿ ನೂರಾರು ಸಾರ್ವಜನಿಕರಲ್ಲದೆ, ಮಾಹಿತಿ ತಂತ್ರಜ್ಞಾನವಲಯದಲ್ಲಿ ಉದ್ಯೋಗನಿರತರಾಗಿರುವವರು.

ಮನವಿಯನ್ನು ಬೆಂಬಲಿಸುವವರು, http://kanlit.com/manavi.pdf, http://baraha.com/anakru/manavi.pdf ನಿಂದ ಮನವಿ ಪತ್ರ ಮತ್ತು ಸಹಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ನಿಮ್ಮ ಸಂಪರ್ಕದಲ್ಲಿರುವವರ ಸಹಿ ಮಾಡಿಸಿ ಮನವಿ ಪತ್ರವನ್ನು ಮನವಿ ಪತ್ರದೊಡನೆಯೇ ಇರುವ ವಿಳಾಸಕ್ಕೆ ಈ ತಿಂಗಳ ಕೊನೆಯೊಳಗೆ ಕಳಿಸಿ.

Rating
No votes yet

Comments