ಕನ್ನಡ

ಕನ್ನಡ

ಕನ್ನಡ ನಮ್ಮ ಮಾತೃ ಭಾಷೆ. ಜನ್ಮ ಕೊಟ್ಟ ತಾಯಿ ಮೇಲಿನ ಪ್ರೀತಿಗೂ ನಮ್ಮ ತಾಯಿ ಭಾಷೆಗೂ ಸಮಾನ ಸ್ಥಾನಮಾನ. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಅನ್ನೋ ಹಾಗೆ ನಾವು ಎಷ್ಟೇ ಭಾಷೆ ಕಲಿತರೂ ಕನ್ನಡಿಗರೊಂದಿಗೆ ಆಡುವುದು ಕನ್ನಡವೇ. ಇದು ಕನ್ನಡಿಗರಿಗಷ್ಟೇ ಅನ್ವಯಿಸುತ್ತದೆ ಎನಿಸುತ್ತದೆ. ನಮ್ಮ ನಾಡಿಗೆ ಯಾವ ರಾಜ್ಯದವನು ಬಂದರೂ ಅವರ ಭಾಷೆ ಯಲ್ಲೆ ಸಂಭಾಷಣೆ ನಡೆಸುತ್ತೇವೆ. ಇದು ಅಣ್ಣವ್ರು ಹೇಳಿಕೊಟ್ಟಿದ್ದಕ್ಕೇನೋ ಗೊತ್ತಿಲ್ಲ. ನಮ್ಮವರು ಕೋಟಿ ಭಾಷೆ ಕಲಿತಾರೆ. ಆದರೆ, ಹೊರ ರಾಜ್ಯದಿಂದ ಬಂದವರು ನಮ್ಮ ಭಾಷೆ ಕಲಿಯಲಿಕ್ಕೆ ಮನಸ್ಸು ಮಾಡುವುದಿಲ್ಲ. ಏಕೆಂದರೆ, ಅವರಿಗೆ ಅಗತ್ಯವೂ ಇಲ್ಲ. ಹೊರ ರಾಜ್ಯದವರು ವ್ಯವಹಾರ ನಡೆಸುವ ಜಾಗದಲ್ಲೆಲ್ಲ ನಾಲ್ಕಾರು ಭಾಷೆ ಬಲ್ಲವರಿರುತ್ತಾರೆ. ಅವರು ಕನ್ನಡಿಗರೇ. ನಿಮ್ಮ ಮನೆಯಲ್ಲಿ ಬೇಕಾದರೆ, ನಿಮ್ಮ ಭಾಷೆ ಮಾತನಾಡಿಕೊಳ್ಳಿ. ಕರ್ನಾಟಕದಲ್ಲಿ ಯಾವ ರಾಜ್ಯದವರು ಬೇಕಾದರೂ ನೆಲೆಸಬಹುದು. ಆದರೆ, ಮನೆ ಬಿಟ್ಟು ಹೊರಗೆ ಬಂದ ನಂತರ ಎಲ್ಲರೂ ಕನ್ನಡಿಗರಾಗುತ್ತಾರೆ. ನಮ್ಮ ಆಡಳಿತ ಭಾಷೆ, ವ್ಯಾವಹಾರಿಕ ಭಾಷೆ ಕನ್ನಡ. ಈ ಹಿನ್ನೆಲೆಯಲ್ಲಿ ಎಲ್ಲರೂ ಕನ್ನಡ ಕಲಿಯಲೇಬೇಕು. ಸಾರ್ವಜನಿಕ ಪ್ರದೇಶದಲ್ಲಿ ಎಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು. ಅನೇಕ ಭಾಷೆಗಳನ್ನಾಡುವ ತಾಣವಾಗಿರುವ ಬೆಂಗಳೂರಿನಲ್ಲಿ ಇಂಥದ್ದೊಂದು ಕಾನೂನು ಶೀಘ್ರ ಜಾರಿ ಅಗತ್ಯವಾಗಿದೆ. ದುರಂತವೆಂದರೆ ಕರ್ನಾಟದಲ್ಲಿರುವ ಅನೇಕ ಮುಸ್ಲೀಂರ ಮಾತೃಭಾಷೆ ಕನ್ನಡವಲ್ಲ. ತಮಿಳುನಾಡಿನ ಮುಸ್ಲೀಂಮರು ಸೊಚ್ಚಂದವಾಗಿ ತಮಿಳು ಮಾತನಾಡುತ್ತಾರೆ. ಆಂಧ್ರಪ್ರದೇಶದ ಇಸ್ಲಾಮಿಯರು ಗ್ರಾಮೀಣ ಸೊಗಡಿನಲ್ಲೇ ತೆಲುಗು ಮಾತನಾಡುತ್ತಾರೆ. ಕರ್ನಾಟಕದ ಒಂದು ಭಾಗವಾಗಿರುವ ಮಂಗಳೂರಿನಲ್ಲಿ ಮುಸ್ಲೀಂರು ತುಳು ಮಾತನಾಡುತ್ತಾರೆ. ಕರ್ನಾಟಕದ ಇತರೆಡೆಗಳಲ್ಲಿ ವಾಸಿಸುವ ಮುಸ್ಲೀಂಮರ ಕನ್ನಡ ಮಾತನಾಡುವುದನ್ನು ಕೇಳಿದರೆ ಇವರು ನಮ್ಮವರಲ್ಲ ಎನಿಸುತ್ತದೆ. ಇನ್ನೂ ಕೆಲವರಿಗೆ ಕನ್ನಡ ಮಾತನಾಡಲಿಕ್ಕೆ ಬರುವುದಿಲ್ಲ. ಯಾಕೆ ಹೀಗೆ. ಇವರಾರು ಕನ್ನಡ ತಾಯಿ ಸೆರಗಿನಲ್ಲಿ ಸುರಕ್ಷಿತವಾಗಿಲ್ಲವೇ. ಕನ್ನಡ ನಾಡಿನ ಯಾವ ಲಾಭವನ್ನು ಇವರು ಪಡೆದುಕೊಂಡಿಲ್ಲವೇ? ಯಾರಿಂದ ಈ ಪ್ರಶ್ನೆಗೆ ಉತ್ತರ ನಿರೀಕ್ಷಿಸಲಿ?

- ಲೋಕೇಶ್‌ಗೌಡ ಎಚ್‌.ಸಿ.

Rating
No votes yet

Comments