ಕಪಿಲ ಸಿಬಲನದದೇನೋ ಹೊಸ ಶಿಕ್ಷಣ ನೀತಿ ಬರಲಿದೆಯಂತೆ!!!

ಕಪಿಲ ಸಿಬಲನದದೇನೋ ಹೊಸ ಶಿಕ್ಷಣ ನೀತಿ ಬರಲಿದೆಯಂತೆ!!!

ವಿಶ್ವ ವಿದ್ಯಾಲಯಗಳು ತಲೆ ಎತ್ತತೊಡಗಿದವು ನಾಯಿಕೊಡೆಗಳಂತೆ


ಜೊತೆ ಜೊತೆಗೆ ಅಧಿಕಾರದಲ್ಲಿದ್ದವರ ಜೇಬುಗಳೂ ತುಂಬುತ್ತಿದ್ದವಂತೆ


 


ಅಂದು ಸ್ಥಾಪನೆಯಾಗುವಾಗ ತುಂಬಿದವಲ್ಲಿ ಜೇಬುಗಳು ಹಲವಾರು


ಇಂದುಳಿಸಿಕೊಳ್ಳಲು ತುಂಬಬೇಕಾಗಿದೆ ಇನ್ನು ಜೇಬುಗಳು ಕೆಲವಾರು


 


ಸ್ಥಾಪಿಸುವುದೇ ಆದರೆ ಹೊಸ ವಿಶ್ವವಿದ್ಯಾಲಯಗಳನ್ನೇ ಸ್ಥಾಪಿಸಿ ಬಿಡಲಿ


ವಿಶ್ವವಿದ್ಯಾಲಯಗಳಿಗೆ ಸಮಾನ ಎಂಬ ಅಡ್ಡ ಹೆಸರನ್ನು ಇಡದೇ ಇರಲಿ


 


ಈ ಕಪಿಲ ಸಿಬಲನದು ಅದೇನೋ ಹೊಸ ಶಿಕ್ಷಣ ನೀತಿ ಬರಲಿದೆಯಂತೆ


ಹಣ ಗಳಿಸಲು ಹೊಸ ಹೊಸ ಮಾರ್ಗಗಳು ಇರಬಹುದೋ ಅನ್ನೋ ಚಿಂತೆ


 


ಎಲ್ಲರಿಗೂ ಇಲ್ಲಿ ತಮ್ಮ ತಮ್ಮ ಛಾಪು ಮೂಡಿಸಿ ಉಳಿಸಿ ಹೋಗುವ ಆಸೆ


ಈ ದೇಶ ಉದ್ಧಾರ ಆಗಬೇಕು ಅನ್ನುವುದು ಜನತೆಯ ಈಡೇರದಾಸೆ!!!


**************************************


- ಆಸು ಹೆಗ್ಡೆ


 

Rating
No votes yet