ಕರಾವಳಿಯ ಸಂಗ್ರಾಮದ ಕತೆ!!

ಕರಾವಳಿಯ ಸಂಗ್ರಾಮದ ಕತೆ!!

ಕರಾವಳಿಯಲ್ಲಿ ಬಿಜೆಪಿ ಮತ್ತೆ ಈಗ ಜಯಭೇರಿ ಬಾರಿಸಿದೆ
ಪೂಜಾರಿ ಕಂಡ ಕನಸುಗಳ ಹೇಗೆ ನುಚ್ಚು ನೂರಾಗಿಸಿದೆ

ಮೊಯ್ಲಿ ಸೋಲುವ ಕುದುರೆ, ನಾನೇ ಗೆದ್ದು ಬರುವೆ ಎಂದಿದ್ದ
ಬಂಡು ಧೈರ್ಯಮಾಡಿ ಮತ್ತೆ ಅದೇಕೋ ಕಣಕ್ಕೆ ಧುಮುಕಿದ್ದ

ಮೊಯ್ಲಿ ಹಲವು ಬಾರಿ ಮಾಡಿದ ತಪ್ಪನ್ನೀ ಬಾರಿ ಮಾಡದಿದ್ದ
ಅದಕ್ಕೆ ಚಿಕ್ಕ ಬಳ್ಳಾಪುರದಲ್ಲಿ ನೋಡಿ ನಿರಾಯಾಸವಾಗಿ ಗೆದ್ದ

ಕ್ಷೇತ್ರ ಮರು ವಿಂಗಡಣೆ ಮಂಗ್ಳೂರಲ್ಲಿ ಗೌಡಂಗಾತಂಕ ತಂದಿತ್ತು
ಉಡುಪಿಯಲ್ಲಿ ಯಾವುದೇ ಶ್ರಮರಹಿತ ಗೆಲುವಿನ ನಿರೀಕ್ಷೆ ಇತ್ತು

ಜಯಪ್ರಕಾಶ ಹೆಗ್ಡೆಯ ಪರಿಚಯ ಉಡುಪಿ ಜಿಲ್ಲೆಯಲ್ಲಷ್ಟೇ ಜಾಸ್ತಿ
ಚಿಕ್ಕಮಗಳೂರು ಕಡೆಯ ಮತ ಪಾರ್ಟಿಯದು ಹೆಗ್ಡೆಯದಲ್ಲ ಆಸ್ತಿ

ಎಡರಂಗದವರು ಉಡುಪಿಯಲ್ಲಿ ಯಾಕೆ ಸ್ಪರ್ಧೆಗೆ ಇಳಿಯುತ್ತಾರೋ
ಅವರ ಬೇಳೆ ಬೇಯಿಸಲು ನೀರೇ ಸಿಗದು ಎಂದ್ಯಾರು ಹೇಳ್ತಾರೋ

ನಳಿನ ಕುಮಾರ ಹೊಸಬ, ಅಲ್ಲಿ ಆತನಿಗಲ್ಲ ಅದು ಪಕ್ಷಕ್ಕೆ ಸಿಕ್ಕ ಮತ
ಮುಂದೆ ಗೆಲ್ಲಬೇಕಿದ್ದರೆ ಆತ ಮಾಡಬೇಕಿದೆ ಮಂಗಳೂರಿಗರಿಗೆ ಹಿತ

ಹಿಂದೂಗಳ ಪ್ರತಿನಿಧಿಯಾಗದೇ ಮಂಗಳೂರನ್ನೇ ಪ್ರತಿನಿಧಿಸಬೇಕು
ಅನ್ಯರಿಗೂ ಆತನ ಮೇಲೆ ಭರವಸೆ ಮೂಡುವಂತಾತ ದುಡಿಯಬೇಕು

ಮೊಯ್ಲಿ ದೊರಕಿಸಿಕೊಂಡಾನು ಮಂತ್ರಿಗಿರಿ ಯಾ ತಕ್ಕ ಸ್ಥಾನಮಾನ
ಪೂಜಾರಿಯ ಕೇಳುವವರಿಲ್ಲ ತವರೂರಲ್ಲೇ ಆದಮೇಲೆ ಈ ಅವಮಾನ

ಪೂಜಾರಿ ಮತ್ತು ಜಯಪ್ರಕಾಶ್ ಹೆಗ್ಡೆಗಿನ್ನು ನಿವೃತ್ತಿಯೇ ಒಳ್ಳೆಯದು
ಕೆಡುತ್ತಿರುವ ಆರೋಗ್ಯವ ಕಾಪಾಡಿಕೊಂಡು ಇರುವುದೊಳ್ಳೆಯದು

ಮಾರ್ಗರೇಟಳಿಗಿನ್ನು ಬೆಲೆ, ದಿಲ್ಲಿಯಲಿ ಹಿಂದಿನಷ್ಟಿರುವುದಿಲ್ಲ ನೋಡಿ
ಸೋತು ಮರಳುತ್ತಿದ್ದಾಳೆ ಈಗ, ಮೊದಲು ಬಾಯ್ತುಂಬಾ ಮಾತಾಡಿ

ಗೆದ್ದ ಅನಂತ ಕುಮಾರ ಹೆಗಡೆ ನಾಲಿಗೆಗೆ ಲಗಾಮು ಹಾಕಬೇಕು
ಬೇಕಾಬಿಟ್ಟಿ ಮಾತನಾಡದೇ ಕ್ಷೇತ್ರದ ಏಳಿಗೆಗಾಗಿ ದುಡಿಯಬೇಕು

Rating
No votes yet

Comments