ಕರಿನೆರಳು

ಕರಿನೆರಳು

ಕಳೆದು ಹೋಗದಿರು ಜೀವದ ಗೆಳತಿ
ನಿನ್ನ ಗೆಳೆತನ ನನಗೆ ಹಿತ
ಆದರೆ,ನನ್ನ ಅನನುಭವದ ಗೆಳೆತನ
ತಂದಿತು ಆತಂಕದ ಅನುಭವ
ಜೀವದ ಗೆಳತಿ ಕೇಳು ಒಮ್ಮೆ
ನಾ 'ನಲ್ಲ' ನಿನಗೆ 'ಗೆಳೆಯ'
ಆದರೆ ನೀ ನೀನಾಗಬೇಡ ಈ ಧರೆಯ
ಕೊರಳ ಮರುಭೂಮಿಯ ದುನಿಯಾ
ಇಂತಿ ನಿನ್ನವ ಈ ಇಳೆಯ,ಇನಿಯ

ಅನ್ಯ ದಾರಿಯಿಲ್ಲ ಎನಗೆ
ಬಿಡಲು ನಿನ್ನ ಸಲಿಗೆ
ಆ ನೆಪದಲ್ಲಿ ನಾ ಮಾಡಲಿಲ್ಲ ನಿನ್ನ ಸುಲಿಗೆ
ಬೇರೆ ಹಾದಿಯಿಲ್ಲ ನನಗೆ
ಬಿಡಲು ನಿನ್ನ ಸ್ನೇಹದ ಹೂ ನಗೆ
ನಿನ್ನ ಚಿಗುರಿದ ಬದುಕಿನ ಪುಟದಲ್ಲಿ
ನಾ ಬರೆದ ಸುವರ್ಣಾಕ್ಷರಗಳ
ಅಳಿಸಿ ಸಾಗು ನೀ ಮುಂದೆ
ಚೆಲುವಿನ ಹಾದಿಯಲ್ಲಿ
ಇಂತಿ ನಿನ್ನವ ನಾ ಈ ಇಳೆಯ,ಇನಿಯ

Rating
No votes yet

Comments