ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಾದ ಚಂದ್ರಶೇಖರ್,ಹಾಗೂ ಪ್ರಸನ್ನರನ್ನು ನೋಡಿದ ನಾವು ಕುಂಬ್ಲೆಯನ್ನು ಸ್ಪಿನ್ನರ್ ಎಂದು ಒಪ್ಪಲು ರೆಡಿಯಿರಲಿಲ್ಲ.
ಹೆಚ್ಚಿನ ಬಾರಿ ಅನಗತ್ಯ ಕಾರಣಕ್ಕೆ ಟೀಮಿನಿಂದ ಹೊರಹಾಕಿದಾಗಲೂ ನಮಗೆ ಬೇಸರ ಅಗಲಿಲ್ಲ.
ರಾಜು,ಕಾರ್ತಿಕ್,ಹರಭಜನ್..ರ ಭಜನೆ ಮಾಡುತ್ತಿದ್ದೆವು ಹೊರತು ಕುಂಬ್ಲೆ ಇರಬೇಕಿತ್ತು ಎಂದು ಒಮ್ಮೆಯೂ ಹೇಳಿರಲಿಲ್ಲ.
ಇಂಡಿಯಾದ ಕ್ಯಾಪ್ಟನ್ ಆಗಿ ಕುಂಬ್ಲೆಯನ್ನು ಆರಿಸಿದಾಗಲೂ 'ಧೋನಿ'ಆದರೆ ಒಳ್ಳೆಯದಿತ್ತು ಎಂದೆವು.
ಏಟು ಬಿದ್ದಾಗಲೂ ಮುಖಕ್ಕೆ ಪಟ್ಟಿ ಕಟ್ಟಿ ಬೌಲಿಂಗ್ ಗೆ ಇಳಿದ,
ಪಾಕಿಗಳ ವಿರುದ್ಧ ಹತ್ತು ವಿಕೆಟ್ ಒಂದೇ ಇನ್ನಿಂಗ್ಸ್ ನಲ್ಲಿ ತೆಗೆದ,
ಆಸ್ಸಿಗಳನ್ನು ನಡುಗಿಸುತ್ತಿರುವ ಕುಂಬ್ಲೆಗೆ
ಕರ್ನಾಟಕದ ಜನತೆಯ ನೀರಸ ವರ್ತನೆಯಿಂದ ಬೇಸರವಾಗಲಿಲ್ಲವೆ?
ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎಂದು ಒಮ್ಮೆಯೂ ಹೇಳಿಲ್ಲ ಏಕೆ?
Rating
Comments
ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
In reply to ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. by roshan_netla
ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..