ಕರ್ನಾಟಕದ ಹಣೆಬರಹ!

ಕರ್ನಾಟಕದ ಹಣೆಬರಹ!

ಕರ್ನಾಟಕದ ಹಣೆಬರಹ!

ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ ಮತ್ತು ದೆಹಲಿಯಿಂದ ಒಪ್ಪಿಗೆ ಮಾತ್ರ ಬರುವುದು ಬಾಕಿ! ದೆಹಲಿ ಒಡೆಯರು ಒಪ್ಪಿಗೆ ಕೊಡುವುದು ಮಾತ್ರ ಸಂಶಯ.

ಕುಮಾರಸ್ವಾಮಿಯ ಸಂಧಾನ ಕಾರ್ಯ ಯಶಸ್ವಿಯಾಯಿತೆಂದು ತೋರುತ್ತದೆ. ಸ್ವಲ್ಪವೇ ದಿನಗಳ ಹಿಂದೆ ಒಬ್ಬರ ಮೇಲೊಬ್ಬರು ವಾಗ್ಭಾಣವನ್ನು ಬಿಡುತ್ತಿದ್ದವರು ಈಗ ಮತ್ತೊಮ್ಮೆ ಒಂದಾಗಿದ್ದಾರೆ.. ಎಷ್ಟು ವಿಚಿತ್ರ! ರಾಜಕಾರಣದಲ್ಲಿ ಯಾವಾಗ ದೋಸ್ತಿಗಳಾಗುತ್ತಾರೆ, ಯಾವಾಗ ವೈರಿಗಳಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ..ಒಂದಂತೂ ಸತ್ಯ ... ಬಿ.ಜೆ.ಪಿಗೆ ಇನ್ನೂ ಬುದ್ಧಿ ಬಂದಿಲ್ಲ. ಈ ಜೆಡಿ(ಯೆಸ್) ನವರು ಯಾವಾಗ ಕಾಲೆಳೆಯುತ್ತಾರೆಂದು ಹೇಳಲು ಸಾಧ್ಯವಿಲ್ಲ. ಆದರೂ ಗದ್ದುಗೆಯ ಅಸೆ!
ಗೌಡನವರ ಆಲೋಚನೆಯೇನೋ? ಇಲ್ಲದ್ದಿದ್ದರೆ ಬಿ.ಜೆ. ಪಿಗೆ ಅಧಿಕಾರ ಕೊಡುತ್ತಿರಲ್ಲಿಲ್ಲ!
ಧರ್ಮಯುದ್ಧ, ನ್ಯಾಯಯುದ್ಧ ಎಲ್ಲಾ ಬದಿಗೆ ಸರೆಯಿತು... ಈಗ ಹೊಸ ಆಟ!

ಕೆಲವು ದಿನಗಳ ಹಿಂದೆ ಪೇಪರ್ ನಲ್ಲಿಯೆಡ್ಯೂರಪ್ಪ ನವರಿಗೆ ಮುಖ್ಯ ಮಂತ್ರಿಯಾಗುವ ಯೋಗವಿಲ್ಲವೆಂದು ಒಬ್ಬ ಜ್ಯೋತಿಷಿಗಳು ಭವಿಷ್ಯ ನುಡಿದ್ದಿದ್ದರು.. ಯಡ್ಯೂರಪರ ಪಟ್ಟಾಭಿಷೇಕವಾಗುತ್ತದೆಯೋ ಎಂದು ಕಾದು ನೋಡಬೇಕು!

Rating
No votes yet