ಕರ್ನಾಟಕ ಕೈಪಿಡಿ ೨೦೧೧ ಪುಸ್ತಕ ಮಾರಾಟಕ್ಕೆ ಬಿಡುಗಡೆ
ದಿನಾಂಕ ೦೬-೦೯-೨೦೧೧ ರಂದು ಬಿಡುಗಡೆಯಾದ ಗ್ಯಾಸೆಟಿಯರ್ ಸಂಪುಟಗಳ
ಪತ್ರಿಕಾ ಪ್ರಕಟಣೆ
ಸ್ವಾತಂತ್ರ್ಯಪೂರ್ವದಲ್ಲಿ ಪ್ರಕಟವಾಗಿದ್ದ ಜಿಲ್ಲಾ ಗ್ಯಾಸೆಟಿಯರ್ಗಳ ಪರಿಷ್ಕರಣೆ ಮತ್ತು ಸ್ವಾತಂತ್ರ್ಯಾನಂತರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಕ್ರೋಢೀಕರಿಸಿ ಜಿಲ್ಲಾ ಗ್ಯಾಸೆಟಿಯರ್ಗಳನ್ನು ಪ್ರಕಟಿಸುವ ಉದ್ದೇಶದಿಂದ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯನ್ನು ೧೯೫೮ರಲ್ಲಿ ಸ್ಥಾಪಿಸಲಾಯಿತು. ವಿವಿಧ ರಂಗಗಳಲ್ಲಾಗಿರುವ ಅಭಿವೃದ್ಧಿಯ ಪ್ರವೃತ್ತಿಯನ್ನು ವಿಸ್ತೃತವಾಗಿ ಅಳವಡಿಸುವ ಮೂಲಕ ಏಕರೀತಿಯ ಪರಿವಿಡಿಯನ್ನು ರೂಪಿಸುವ ಸಲುವಾಗಿ ಕೇಂದ್ರ ಗ್ಯಾಸೆಟಿಯರ್ ಘಟಕವು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು. ಈ ಯೋಜನೆಯಂತೆ ಕೇಂದ್ರ ಸರ್ಕಾರದ ಮರುವಿನ್ಯಾಸಗೊಳಿಸಿದ ಸರಣಿಯಡಿ ಹಿಂದೆ ಅಸ್ತಿತ್ವದಲ್ಲಿದ್ದ ಧಾರವಾಡ, ಕೊಡಗು, ಬಿಜಾಪುರ, ಗುಲಬರ್ಗಾ, ಚಿತ್ರದುರ್ಗ, ಮಂಡ್ಯ,ಕೋಲಾರ, ತುಮಕೂರು, ರಾಯಚೂರು, ಹಾಸನ, ಬಳ್ಳಾರಿ, ದಕ್ಷಿಣ ಕನ್ನಡ, ಶಿವಮೊಗ್ಗ,ಬೀದರ್, ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರು (ಒಟ್ಟು ೧೯) ಜಿಲ್ಲಾ ಗ್ಯಾಸೆಟಿಯರ್ಗಳನ್ನು ಆಂಗ್ಲ ಭಾಷೆಯಲ್ಲಿ ೧೯೯೦ರವರೆಗೆ ಪ್ರಕಟಿಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆ ಅಡಿ ಜಿಲ್ಲಾ ಗ್ಯಾಸೆಟಿಯರ್ಗಳ ಸಂಪಾದನೆ ಮತ್ತು ಪ್ರಕಟಣಾ ಕಾರ್ಯವು ಪೂರ್ಣಗೊಂಡ ನಂತರ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ಸ್ವತಂತ್ರವಾಗಿ ಜಿಲ್ಲಾ ಗ್ಯಾಸೆಟಿಯರ್ಗಳನ್ನು ರಾಜ್ಯ ಸರ್ಕಾರದ ಭಾಷಾನೀತಿಯಂತೆ ಸ್ವತಂತ್ರವಾಗಿ ಕನ್ನಡದಲ್ಲಿ ಪ್ರಕಟಿಸಲು ಪ್ರಾರಂಭಿಸಿ ಇದುವರೆಗೆ ಈ ಮಾಲಿಕೆಯಡಿ ಕೊಡಗು,ಧಾರವಾಡ, ಗುಲಬರ್ಗಾ, ಬಿಜಾಪುರ, ಮಂಡ್ಯ, ಕೋಲಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾಸೆಟಿಯರ್ಗಳನ್ನು ಪ್ರಕಟಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುವ ಗ್ಯಾಸೆಟಿಯರ್ ಸಲಹಾ ಸಮಿತಿಯ ನಿರ್ದೇಶನದಂತೆ ಜಿಲ್ಲಾ ಗ್ಯಾಸೆಟಿಯರ್ಗಳನ್ನು ಕನ್ನಡ ಭಾಷೆಯಿಂದ ಆಂಗ್ಲ ಭಾಷೆಗೆ ಭಾಷಾಂತರಿಸುವ ಕಾರ್ಯಕ್ರಮವನ್ನು ಇಲಾಖೆಯು ಹಮ್ಮಿಕೊಂಡಿತು. ಈ ಮಾಲಿಕೆಯಲ್ಲಿ ಈವರೆಗೆ ಕೊಡಗು, ಧಾರವಾಡ, ಗುಲಬರ್ಗಾ, ವಿಜಾಪುರ ಮತ್ತು ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ಗಳನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖಾ ಸಚಿವಾಲಯದ ಆಡಳಿತ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿದೆ.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆ
೧) ಉಡುಪಿ ಜಿಲ್ಲಾ ಗ್ಯಾಸೆಟಿಯರ್ ಕನ್ನಡ ಆವೃತ್ತಿ - ರೂ ೪೨೨/-
೨) A Journey from Madras through the countries of Mysore, Canara and Malabar by Sir Francis Buchanan (three volumes) - Each Volume -Description: Indian Rupee ₹450/- set of three volumesDescription: Indian Rupee ₹1230/-
೩) ತಾಲೂಕು ಗ್ಯಾಸೆಟಿಯರ್ - ಮೈಸೂರು ಜಿಲ್ಲೆಯ ಏಳು ತಾಲೂಕುಗಳು - ಬಿಡಿ ಪ್ರತಿ - ರೂ ೧೨೦/- ೧) ತಿರುಮಕೂಡಲು ನರಸೀಪುರ, ೨) ಮೈಸೂರು, ೩) ಪಿರಿಯಾಪಟ್ಟಣ, ೪) ಕೃಷ್ಣರಾಜನಗರ, ೫) ಹೆಗ್ಗಡದೇವನಕೋಟೆ, ೬) ಹುಣಸೂರು ೭) ನಂಜನಗೂಡು
೪) ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್ ಆಂಗ್ಲ ಆವೃತ್ತಿ - - ರೂ ೮೮೦/-
೫) ಕರ್ನಾಟಕ ಕೈಪಿಡಿ ೨೦೧೧ - - ರೂ ೪೫೦/-
ಕರ್ನಾಟಕ ಗ್ಯಾಸೆಟಿಯರ್ ಇಲಾಖೆ
ದಿನಾಂಕ ೦೬-೦೯-೨೦೧೧ ರಂದು ಬಿಡುಗಡೆಯಾದ ಗ್ಯಾಸೆಟಿಯರ್ ಸಂಪುಟಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ
೧) ಉಡುಪಿ ಜಿಲ್ಲಾ ಗ್ಯಾಸೆಟಿಯರ್ (ಕನ್ನಡ ಆವೃತ್ತಿ): ೨೦೦೫-೦೬ ರ ಸಾಲಿನ ಕ್ರಿಯಾಯೋಜನೆಯಡಿ ರೂ.೨.೮೦ ಲಕ್ಷ ಮಂಜೂರಾತಿಯೊಂದಿಗೆ ಹಮ್ಮಿಕೊಳ್ಳಲಾಗಿದ್ದ ಯೋಜನೆಯಂತೆ ಮುದ್ರಿತಗೊಂಡಿರುವ ಉಡುಪಿ ಜಿಲ್ಲಾ ಗ್ಯಾಸೆಟಿಯರ್ (ಪರಿಷ್ಕೃತ ಆವೃತ್ತಿ) ಸಂಪುಟವು, ೧೭ ಅಧ್ಯಾಯಗಳನ್ನು ಒಳಗೊಂಡಿದೆ. ಈ ಅಧ್ಯಾಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಾಲ್ಕು ಅಧ್ಯಾಯಗಳು ಹೊರವಿದ್ವಾಂಸರಿಂದ ರಚಿಸಲ್ಪಟ್ಟಿದ್ದು, ಉಳಿದ ಅಧ್ಯಾಯಗಳನ್ನು ಇಲಾಖೆಯ ಸಂಪಾದಕ ವರ್ಗ ರಚಿಸಿ ಸಂಪಾದಿಸಿದೆ. ಈ ಗ್ರಂಥವು ಪ್ರಸ್ತುತ ಬಿಡುಗಡೆಯಾಗುತ್ತಿದ್ದು, ರೂ.೪೨೨/- ಗಳಿಗೆ ಸಾರ್ವಜನಿಕರಿಗೆ ಖರೀದಿಸಲು ಲಭ್ಯವಿದೆ.
೨) ಮೈಸೂರು ಜಿಲ್ಲಾ ತಾಲೂಕು ಗ್ಯಾಸೆಟಿಯರ್: ೨೦೦೫-೦೬ರ ಸಾಲಿನ ಕ್ರಿಯಾಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಗ್ಯಾಸೆಟಿಯರ್ ಪ್ರಕಟಣೆಯಡಿ ಮೈಸೂರು ಜಿಲ್ಲೆಯ ಏಳು ತಾಲೂಕು (ತಿರುಮಕೂಡಲು ನರಸೀಪುರ, ಪಿರಿಯಾಪಟ್ಟಣ,ಮೈಸೂರು, ಹೆಗ್ಗಡದೇವನಕೋಟೆ, ಕೃಷ್ಣರಾಜನಗರ, ನಂಜನಗೂಡು ಹಾಗೂ ಹುಣಸೂರು) ಗ್ಯಾಸೆಟಿಯರ್ಗಳಿಗಾಗಿ ೨.೮೦ ಲಕ್ಷ ರೂ.ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿತ್ತು. ನಾಡಿಗೇ ವಿನೂತನವಾದ ಈ ತಾಲೂಕು ಗ್ಯಾಸೆಟಿಯರ್ ಸಂಪುಟಗಳು ಪ್ರಸ್ತುತ ಬಿಡುಗಡೆಯಾಗುತ್ತಿದ್ದು, ರೂ.೧೨೦/- ಕ್ಕೆ ಬಿಡಿಯಾಗಿ ಮಾರಾಟಕ್ಕೆ ದೊರೆಯುತ್ತವೆ.
೩) ಸರ್ ಫ್ರಾನ್ಸಿಸ್ ಬುಕನನ್ನನ A Journey from Madras through the countries of Mysore, Canara and Malabar by Sir Francis Buchanan (three volumes) - ಕೃತಿಯು ಮೂರು ಸಂಪುಟಗಳಲ್ಲಿ ೧೮೦೭ರಲ್ಲಿ ಪ್ರಕಟವಾಗಿದ್ದು, ವಿದ್ವತ್ ಲೋಕಕ್ಕೆ ಅದರ ಅಗತ್ಯವಿದ್ದು, ೨೦೦೮-೦೯ರ ಸಾಲಿನ ಕ್ರಿಯಾಯೋಜನೆಯಡಿ ಸದರಿ ಗ್ರಂಥದ ಸ್ಕ್ಯಾನಿಂಗ್ ಹಾಗೂ ಮರುಮುದ್ರಣ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಈ ಕೃತಿಯು (ಮೂರು ಸಂಪುಟಗಳು) ಬಿಡುಗಡೆಯಾಗುತ್ತಿದ್ದು,ಒಟ್ಟಾಗಿ ರೂ. ೧೨೩೦/-ಗಳಿಗೆ ಲಭಿಸುತ್ತಿದ್ದು, ಬಿಡಿ ಸಂಪುಟವಾದಲ್ಲಿ ರೂ. ೪೫೦/- ಕ್ಕೆ ದೊರೆಯುತ್ತದೆ.
೪) ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್ (ಇಂಗ್ಲೀಷ್ ಆವೃತ್ತಿ): ೨೦೧೦-೧೧ರ ಸಾಲಿನ ಕ್ರಿಯಾ ಯೋಜನೆಯಡಿ, ೨೦೦೭ರಲ್ಲಿ ಪ್ರಕಟವಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್ನ ಆಂಗ್ಲ ಆವೃತ್ತಿಯ ಭಾಷಾಂತರ, ಸಂಪಾದನೆ ಹಾಗೂ ಮುದ್ರಣ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಸ್ತುತ ಭಾಷಾಂತರಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್ ಸಂಪುಟವೂ ಬಿಡುಗಡೆಯಾಗುತ್ತಿದ್ದು, ರೂ.೮೮೦/- ಕ್ಕೆ ಮಾರಾಟಕ್ಕೆ ಲಭ್ಯವಿದೆ.
ಕರ್ನಾಟಕ ಕೈಪಿಡಿ ೨೦೧೧: ೨೦೧೦-೧೧ರ ಸಾಲಿನ ಕ್ರಿಯಾಯೋಜನೆಯಡಿ,ಇಲಾಖೆಯು ೨೦೧೦ರಲ್ಲಿ ಪ್ರಕಟಿಸಿದ್ದ, ಎ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಗ್ರಂಥದ ಕನ್ನಡ ಆವೃತ್ತಿಯ ಪ್ರಕಟಣಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಮೊದಲ ಕನ್ನಡ ಆವೃತ್ತಿಯು ೧೯೯೬ ರಲ್ಲಿ ಪ್ರಕಟವಾಗಿತ್ತು. ಈ ಗ್ರಂಥವು ಕರ್ನಾಟಕ ಲೋಕಸೇವಾ ಆಯೋಗವು ಏರ್ಪಡಿಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಂದು ಶಿಫಾರಸ್ಸು ಮಾಡಿರುವ ಆಕರ ಗ್ರಂಥವಾಗಿದ್ದು,ರಾಜ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಕ್ಷಿಪ್ತವಾಗಿ ಒಳಗೊಂಡಿದೆ. ಆ ಪ್ರಕಾರ ಕರ್ನಾಟಕ ಕೈಪಿಡಿ ೨೦೧೧ ಗ್ರಂಥವು ಸಿ.ಡಿ.ಯೊಂದಿಗೆ ಪ್ರಸ್ತುತ ಬಿಡುಗಡೆಯಾಗುತ್ತಿದೆ. ಈ ಗ್ರಂಥವೂ ರೂ.೪೫೦/- ಕ್ಕೆ ಮಾರಾಟಕ್ಕೆ ದೊರೆಯುತ್ತದೆ