ಕರ್ನಾಟಕ ರಾಜ್ಯೋತ್ಸವ ಕನ್ನಡ ಹಬ್ಬದ ಶುಭ ಸಂದರ್ಭದಲ್ಲಿ

ಕರ್ನಾಟಕ ರಾಜ್ಯೋತ್ಸವ ಕನ್ನಡ ಹಬ್ಬದ ಶುಭ ಸಂದರ್ಭದಲ್ಲಿ

ಕರ್ನಾಟಕ  ರಾಜ್ಯೋತ್ಸವ‍ಕನ್ನಡ ಹಬ್ಬದ ಶುಭ ಸಂದರ್ಭದಲ್ಲಿ  ನಿಮಗೆಲ್ಲ ಶುಭ ಹಾರೈಕೆಗಳು .
ಈ ಸಂದರ್ಭದಲ್ಲಿ  ನಿಮ್ಮಲ್ಲಿ  ಬಹುತೇಕ ಜನಕ್ಕೆ  ರಜ ಇದ್ದಿರಬೇಕು ಅಲ್ಲವೇ ,  ರವಿವಾರವೂ  ಅದರ ಹಿಂದೆಯೇ ಬಂದಿದೆ.  ಇವನ್ನು ಬಳಸಿಕೊಂಡು
೧) ನಮ್ಮ ಕನ್ನಡ ರಾಜ್ಯದ ಕುರಿತು , ಅದರ ಏಕೀಕರಣದ ಕುರಿತು , ಅದರ ಇತಿಹಾಸದ ಕುರಿತು  ನಮಗೆ ಎಷ್ಟು  ಗೊತ್ತಿದೆ , ಎಷ್ಟು  ಗೊತ್ತಿಲ್ಲ   ಎಂದು ಪರೀಕ್ಷಿಸಿಕೊಳ್ಳಲು
ಈ ಕೊಂಡಿಗಳನ್ನು ನೋಡಿ .  ( ಈ ಕೊಂಡಿಗಳು ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದ ಪುಟಗಳು ; ನಮಗೆ ಸಾಮಾನ್ಯವಾಗಿ ಗೊತ್ತಿಲ್ಲದ ಅನೇಕ  ಸಂಗತಿಗಳು  ಅಲ್ಲಿವೆ) 
೨) ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕನ್ನಡ ಬಳಸಲು ಪ್ರಯತ್ನಿಸಿ . ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ನಿಮ್ಮ ಮೊದಲ ಆದ್ಯತೆಯ ಭಾಷೆಯಾಗಿರಲಿ .  ಎಲ್ಲೆಲ್ಲಿ  ಎ.ಟಿ.ಎಮ್ ಗಳಲ್ಲಿ ಕನ್ನಡ‌ ಆಯ್ಕೆ ಇದೆಯೋ ಅಲ್ಲೆಲ್ಲ‌ ಕನ್ನಡ‌ ಬಳಸಿ , ಬೇರೆ ಭಾಷಿಕರಿಗೆ ಕ‌ನ್ನಡ ನಿಮ್ಮ ಮೊದಲ ಆದ್ಯತೆಯ ಭಾಷೆ  ಎಂದು ಗೊತ್ತಾಗುವಂತೆ ಮೊದಲಿಗೆ ಕನ್ನಡದಲ್ಲಿ ಮಾತನಾಡಿ ,   ಮೊಬೈಲ್ ಗಳಲ್ಲಿ , ಇಂಟರ್ನೆಟ್ಟಿನಲ್ಲಿ  ಈಗಾಗಲೇ ಕನ್ನಡ ಬಳಸದಿದ್ದವರು ಇಂಗ್ಲೀಶು , ಕಂಗ್ಲೀಶುಗಳ‌ ಬದಲಾಗಿ ಕನ್ನಡ ಬಳಸಲು ಆರಂಭಿಸಿ  , ಉಳಿದವರಿಗೂ  ಕನ್ನಡ ಬಳಸಲು  ಪ್ರೇರೇಪಿಸಿ,   ಕನ್ನಡದವರು ಕನ್ನಡ ಬಳಸದಿದ್ದರೆ ಇಂಗ್ಲೀಷರು , ಬೇರೆ ಭಾಶೆಯವರು ಬಳಸುವರೇ?
೩) ಕನ್ನಡ ಪತ್ರಿಕೆ , ಪುಸ್ತಕಗಳನ್ನು ಓದುವುದನ್ನ್ನು  ಸಿನೆಮಾ , ನಾಟಕಗಳನ್ನು    ನೋಡುವುದನ್ನು  ನಿಲ್ಲಿಸಬೇಡಿ .
 

ಕನ್ನಡ ಉಳಿಸಿ , ಬಳಸಿ , ಬೆಳೆಸಿ. 

 

 

Rating
No votes yet