ಕರ್ಮ-ಜನ್ಮ (ಶ್ರೀ ನರಸಿಂಹ 36)

ಕರ್ಮ-ಜನ್ಮ (ಶ್ರೀ ನರಸಿಂಹ 36)

ಹಿಂದಿನ ಕರ್ಮಗಳೆ ಕಾರಣವು ಇಂದಿನ ಜನ್ಮಕೆನ್ನುವರು
ಇಂದಿನ ಕರ್ಮಗಳೆ ಕಾರಣ ಮುಂದಿನ ಜನ್ಮಕೆನ್ನುವರು
ಹಿಂದೆ ನೋಡಿದರೆ ಒಂದೊಮ್ಮೆ ಕರ್ಮಶೂನ್ಯರಾಗಿಹೆವು
ವಿಸ್ಮಯವು ಆದರೂ ನಾವಿಲ್ಲಿ ಜನ್ಮಗಳ ತಳೆಯುತಿಹೆವು
 
ಮಾಡಿಸುತಿಹನು ಕರ್ಮಗಳನು ದೇವ ತಾ ಬಯಸಿದಂತೆ
ಕರ್ಮಗಳ ಮಾಡಿಸಿ ನೀಡುವ ಜನ್ಮಗಳ ತನ್ನಿಚ್ಛೆಯಂತೆ
ತೃಣವು ಕೂಡ ಅಲುಗುವುದಿಲ್ಲ ಅವನ ಆಣತಿಯ ಮೀರಿ
ಅಂಟದಂತಿರಲು ಕರ್ಮಗಳಿಗೆ ಸಲಹುವ ನಮ್ಮ ಶ್ರೀ ಹರಿ
 
ಕರ್ಮ,ಜನ್ಮಗಳಾವುದಾದರೂ ಬರಲಿ ಎಲ್ಲವು ಅವನಿಚ್ಛೆ ಎಂದು
ನಂಬಿದರೆ ಶ್ರೀ ನರಸಿಂಹನ ಕಾಯುವನೆಮ್ಮ ಹಿಂದೆಯೆ ನಿಂದು

 

Rating
No votes yet

Comments