ಕಲಾಂ ನಿಮಗೆ ನೂರೊಂದು ಸಲಾಂ

Submitted by ravindra n angadi on Wed, 10/14/2015 - 16:29
ಚಿತ್ರ

ಅಮೂಲ್ಯವಾದ ಈ ಮುತ್ತು

ಭಾರತದ ಮಡಿಲಲ್ಲಿ ಮಿಂಚಿತ್ತು

ಜಗತ್ತಿಗೇ ಆಶ್ಚರ್ಯ ಪಡಿಸಿತ್ತು 

 

ಮೊಗ್ಗೊಂದು ಅರಳಿತು ಈ ಭೂಮಿಯಲ್ಲಿ

ಭಾರತಾಂಬೆಯ ಮಮತೆಯ ಮಡಿಲಲ್ಲಿ

ಭಾರತದ ಶಕ್ತಿಯನು ಜಗತ್ತಿಗೆ ಬಿಂಬಿಸಲು

 

ಬಡತನದ ಬೇಗೆಯಲಿ ಬೆಂದ ಈ ಕಂದ

ಕಷ್ಟದಲು ಕನಸು ಕಂಡ ಈ ಕಂದ

ಎದೆಗುಂದದೆ ಸಾಧನೆಗೈದ ಈ ಕಂದ

 

ಜ್ಞಾನದಲಿ ಅದ್ಭುತ ಶಕ್ತಿ ಹೊಂದಿದ ಚತುರ

ದೇಶವ ಅಭಿವೃದ್ಧಿಯತ್ತ ತಂದ ಛಲಗಾರ

ನೀವು ನಮ್ಮ ಭಾರತದ ಹೆಮ್ಮೆಯ ಕುವರ

 

ಕಲಿತು ಕಲಿಸುತ ಸಾಗಿಸಿದಿರಿ ಜೀವನವ

ವಿದ್ಯಾರ್ಥಿಗಳಿಗೆ  ನೀವೆಂದರೆ ಬಹಳ ಇಷ್ಟ

ಪ್ರತಿಯೊಬ್ಬ ಪ್ರಜೆಗೆ ಆದರ್ಶವಾದಿರಿ ನೀವು  

 

ಭಾಷಣ ಮಾಡುತ ದೇಹವ ತೊರೆದಿರಿ

ಕಾಣದ ಲೋಕಕೆ ಅಗಲಿ ಹೋದಿರಿ  

ಭಾರತೀಯರ ಹೃದಯದಲಿ ಅಮರರಾದಿರಿ

 

ಮತ್ತೆ ಜನಿಸು ಭಾರತಾಂಬೆಯ ಮಗುವಾಗಿ

ಭಾರತಕ್ಕೆ ಶಾಶ್ವತ ಕೊಡುಗೆ ನೀಡಿದ ಕಲಾಂ 

ನಿಮಗಿದೋ ನಮ್ಮ ನೂರೊಂದು ಸಲಾಂ

 

 

 

Rating
No votes yet