ಕಲಾಕಾರನಿಗೊಂದು ನಮನ

ಕಲಾಕಾರನಿಗೊಂದು ನಮನ

 
ಬ್ರಹ್ಮಾಂಡವನ್ನೇ ಕಲೆಯ ಬಲೆಯಲ್ಲಿ


ಸೆರೆಯಾಗಿಸುವ ಸೃಷ್ಟಿಯ ನಿರ್ಜೀವಗಳಿಗೂ


ಜೀವ ತುಂಬಿ ಸುಂದರತೆಯ ನೆಲೆತೋರುವ


ಅದ್ಭುತ ಕಲಾಕಾರನಿಗೆ ನನ್ನ ನಮನ ...


ಕವಿದ ಕತ್ತಲೆಯಲ್ಲೂ ಬೆಳಕು ಚೆಲ್ಲುವ


ಹೃದಯದಲಿ ಸಾವಿರ ನೋವಿದ್ದೂ


ತೋರದೆ ನಗೆಯರಳಿಸುವ ನಿನ್ನ ಸೃಷ್ಟಿಸಿದ


ಆ  ದೇವನ ಮಹಾನ್ ಕಲಾಕಾರಿಕೆಗೆ ನನ್ನ ನಮನ ...


ಜಗದಿರವ ಮರೆವ ತನ್ಮಯತೆ, ಆಘಾದ


ತಾಳ್ಮೆ,  ಅಧ್ಭುತ ನೈಪುಣ್ಯತೆ ಮೆರವ ,


ತನ್ನ ಚಿಂತನೆಗೆ ಸಾಕಾರ ರೂಪ ಕೊಟ್ಟು


ತಾನೆತ್ತ ಕೂಸ ಜತನಗೊಳಿಸುವ  ಕಾರ್ಯತತ್ಪರತೆ


ಎಲ್ಲ ಮೇಳೈಸಿದ ಸೌಂಧರ್ಯೋಪಾಸಕನಿಗೆ ನನ್ನ ನಮನ...

 
ಬಣ್ಣಗಳ ಅರಿವೇ ಇಲ್ಲದ


ವಕ್ರತೆಯ ಪರಿಚಯವೇ ಇಲ್ಲದ ,


ಸೌಂಧರ್ಯವೇ ದೇವರೆಂದು ಪೂಜಿಸುವ


ನಮಗೆ ಭೂಮಿಯ ವಿರಾಟ ರೂಪದ


ಕಲ್ಪನೆ ತೋರಿದ ಕಲಾ ಚತುರನಿಗೊಂದು ನಮನ ...


ನಗೆಮೊಗದ ಹಿಂದಿನ ಲಾಸ್ಯ


ಮಡುಗಟ್ಟಿದ ಧುಖ್ಖ,ವಿಷಾದ ,ವ್ಯಂಗ್ಯ


ಕ್ರೌರ್ಯ ಎಲ್ಲಾ ಭಾವಗಳ ಅನಾವರಣ


ಗೊಳಿಸಿ ನೋಡುಗರ ದಿಗ್ಭ್ರಮೆಗೊಳಿಸಿ


ಕಲೆಯ ಮೆರೆಯುವ  ಕಲಾ ರಸಿಕನಿಗೆ ನನ್ನ ನಮನ ...


ದಿನಕ್ಕೊಂದು ಬಣ್ಣ  ವೇಷ ಧರಿಸಿ


ತಮ್ಮ ಅಸ್ತಿತ್ವ ಮಾರಿಕೊಂಡ


ಬಹುರೂಪಿಗಳನ್ನು ಹಿಡಿದು ತನ್ನ


ಕಲೆಯ ಚೌಕಟ್ಟಿನಲ್ಲಿರಿಸಿ ನಿರ್ದಿಷ್ಟ ರೂಪ


ಬಣ್ಣ ಕೊಟ್ಟು ,ಇದೇ ನಿನ್ನ ನಿಜದ ರೂಪ


ಎಂಬ ಸತ್ಯದ ಅರಿವು ನೀದುವ ನಿನ್ನ


ಎದೆಗಾರಿಕೆಗೆ, ಕಲೆಗಾರಿಕೆಗೆ ನನ್ನ ನಮನ ....

 


ಕಮಲಬೆಲಗೂರ್
 

 

Rating
No votes yet

Comments