' ಕಲಾವಿದ ಕವಿ ಶಿಲ್ಪಿ'
ಚಿತ್ರ
ಕಲ್ಪನೆ
ಮಾನಸಿಕ ಪ್ರತಿಮೆಗಳ ಜನನಿ
ಮನೋವೇಗ ಆಶಾಕಾಂಕ್ಷಮುಕ್ತ
ಕಲ್ಪನಾಶೀಲ ವ್ಯಕ್ತಿಯೆ
‘ಕನಸುಗಾರ’
ಆತ
ಆಕೃತಿಯ ಸಂಕೇತಗಳನು
ಮನೋ ದರ್ಪಣದಿ ಕಾಣುತ್ತ
ಆತ್ಮೀಯತೆಯ ಬೆಳೆಸಿಕೊಳ್ಳುತ್ತ
ಉಪಮೆ ರೂಪಕ ಸಂಕೇತ
ಆನಂದಮಯ
ಸದಭಿರುಚಿ ಸೃಷ್ಟಿಗೆ
ಕಾರಣೀಭೂತನಾಗುತ್ತಾನೆ
ಆ ಕನಸುಗಾರ
ಕಲಾವಿದ ಕವಿ ಶಿಲ್ಪಿ ಯಾರೂ
ಆಗಿರಬಹುದು
*
ಚಿತ್ರ : ಅಂತರ್ ಜಾಲ ದಿಂದ
Rating
Comments
ಉ: ' ಕಲಾವಿದ ಕವಿ ಶಿಲ್ಪಿ'
ಹಿರಿಯರಾದ ಹೆಚ್ ಎ ಪಾಟೀಲ್ ಸರ್ ಗೆ ವಂದನೆಗಳು. ಕಲಾವಿದ ಕವಿ ಶಿಲ್ಪಿ' ಕವನ ಮೆಚ್ಚುಗೆಯಾಯಿತು. ಆತ ಕನಸುಗಾರನಾಗಿ, ಕಲ್ಪನೆಗಳ ಜನನಿಯಾಗಿ, ಮನೋದರ್ಪಣದಲ್ಲಿ ಉಪಮೆ ಸಂಕೇತಗಳನ್ನು ಕಾಣುವ ದಿವ್ಯ ಮಾನವ. ಅವನೇ ಮನದ ಶಿಲ್ಪಿ, ಮಹಾ ಮಾನವ. ..ಕವನ ಚನ್ನಾಗಿ ಮೂಡಿಬಂದಿದೆ ಸರ್. ವಂದನೆಗಳು
In reply to ಉ: ' ಕಲಾವಿದ ಕವಿ ಶಿಲ್ಪಿ' by lpitnal
ಉ: ' ಕಲಾವಿದ ಕವಿ ಶಿಲ್ಪಿ'
ಲಕ್ಷ್ಮೀಕಾಂತ ಇಡ್ನಾಳರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಕವನದ ಮೆಚ್ಚುಗೆಗೆ ಧನ್ಯವಾದಗಳು.
In reply to ಉ: ' ಕಲಾವಿದ ಕವಿ ಶಿಲ್ಪಿ' by H A Patil
ಉ: ' ಕಲಾವಿದ ಕವಿ ಶಿಲ್ಪಿ'
ಪಾಟೀಲರೆ ಸೃಜನಶೀಲ ಸೃಷ್ಟಿಯಲ್ಲಿ ತೊಡಗಿಕೊಂಡ ಪ್ರತಿಯೊಂದು ಕಸುಬಿನ ಮನೋಕೃಷಿಯ ಮೂಲ ಸರಕನ್ನು ಕೆಲವೆ ಸಾಲುಗಳಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರ. ಎಲ್ಲಕ್ಕು ಮೂಲ ಆ ಸಾಧ್ಯತೆಗಳ ಕುರಿಕು ಕನಸು ಕಾಣುವುದೆನ್ನುವುದು ನಿಜವಾದ ಮಾತು - ಕನಸೆ ತಾನೆ ಕಲ್ಪನೆಯ ಮೂಸೆಯಲ್ಲಿ ಬಗೆಬಗೆಯ ಚಿತ್ತಾರವಾಗುವುದು :-)
In reply to ಉ: ' ಕಲಾವಿದ ಕವಿ ಶಿಲ್ಪಿ' by nageshamysore
ಉ: ' ಕಲಾವಿದ ಕವಿ ಶಿಲ್ಪಿ'
ನಾಗೇಶ ಮೈಸೂರುರವರಿಗೆ ವಂದನೆಗಳು
ಕಲ್ಪನೆ ಕನಸು ಗ್ರಹಿಕೆ ಮತ್ತು ಅಭಿವ್ಯಕ್ತಿ ಎಲ್ಲ ಕಲೆಗಳ ಮೂಲ ಎಂಬ ಭಾವ ಮೂಡಿದಾಗ ಮನದಾಳದಲ್ಲಿ ಮೂಡಿದ ಅಭಿವ್ಯಕ್ತಿಯ ರೂಪವೆ ಈ ಕವನ ಮೆಚ್ಚುಗೆಗೆ ಧನ್ಯವಾದಗಳು.
ಉ: ' ಕಲಾವಿದ ಕವಿ ಶಿಲ್ಪಿ'
ಪರಮಾತ್ಮ ನಿರ್ಮಿಸಿದ ನವರಸದ ಅರಮನೆಯ ಒಡೆಯನೇ ಅವನು!
In reply to ಉ: ' ಕಲಾವಿದ ಕವಿ ಶಿಲ್ಪಿ' by kavinagaraj
ಉ: ' ಕಲಾವಿದ ಕವಿ ಶಿಲ್ಪಿ'
ಕವಿ ನಾಗರಾಜರವರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿ ನಾವು ಕಾಣುವ, ಕೇಳುವ, ಗ್ರಹಿಸುವ ಎಲ್ಲವುಗಳ ಒಡೆಯ ಅ ಪರಮಾತ್ಮ ಈ ಜಗಕೆಲ್ಲ ಅತನೆ ಒಡೆಯ, ಪ್ರತಿಕ್ರಿಯೆಗೆ ಧನ್ಯವಾದಗಳು.
In reply to ಉ: ' ಕಲಾವಿದ ಕವಿ ಶಿಲ್ಪಿ' by H A Patil
ಉ: ' ಕಲಾವಿದ ಕವಿ ಶಿಲ್ಪಿ'
ನಮಸ್ತೆ ಪಾಟೀಲರೇ. ಪರಮಾತ್ಮ ನಿರ್ಮಿಸಿದ ನವರಸದ ಅರಮನೆಯೆಂದರೆ ಮಾನವನ ಶರೀರವೇ, ಅದರ ಒಡೆಯರು ನಾವೇನೇ! ನಾವೇ ಆ ಕಲಾವಿದರು, ಶಿಲ್ಪಿ, ಕವಿ, ಎಲ್ಲಾ!!
In reply to ಉ: ' ಕಲಾವಿದ ಕವಿ ಶಿಲ್ಪಿ' by kavinagaraj
ಉ: ' ಕಲಾವಿದ ಕವಿ ಶಿಲ್ಪಿ'
ಕವಿ ನಾಗರಾಜರವರಿಗೆ ವಂದನೆಗಳು
ಕವನವನ್ನು ತಾವು ರೀತಿ ಚೆನ್ನಾಗಿದೆ ತಮ್ಮ ಅನಿಸಿಕೆಗೆ ನನ್ನದು ಸಹಮತ ಧನ್ಯವಾದಗಳು.