"ಕಲ್ಪನೆ ಕಚಗುಳಿ ಇಟ್ಟಾಗ".. :)

"ಕಲ್ಪನೆ ಕಚಗುಳಿ ಇಟ್ಟಾಗ".. :)

ಅಂದು ಸೋಮವಾರ ಮಧ್ಯಾಹ್ನ.. ೨ ಗಂಟೆಗೆ ಬೆಂಗಳೂರು ಬಸವೇಶ್ವರ ನಗರದಿಂದ ಹೊರಟವಳು, ಹಾಸನಕ್ಕೆ ಮರಳಬೇಕಿತ್ತಲ್ಲಾ ಅಂತೂ ಬಸ್ ಹತ್ತಿ ಕುಳಿತೆ.. ಮಧ್ಯದಲ್ಲಿ ಒಂದೇ ಸೀಟ್ ಇತ್ತಾ.. ಇನ್ನೇನು ಅಲ್ಲೇ ಕುಳಿತೆ!! ಆಚೆ ಈಚೆ ಎಲ್ಲಾ ಹುಡುಗರೆ!! ಇನ್ನು ದಾರಿಯುದ್ದ ಮೌನವೇ ಗತಿ ಅಂದು ೪ ಗಂಟೆ ಕಳೆಯಬಾಕಲ್ಲಾ, ಎಂಪಿ೩ ಹ್ಯಾನ್ಡ್ಸ್ ಫ್ರೀ ಅನ್ನು ಕಿವಿಗೆ ದಬ್ಬಿ ಕುಳಿತೆ. ಹಾಗೆ ಅರ್ಧ ಗಂಟೆಯ ನಿದ್ದೆ ಬಂತು. ಕಿಟಕಿ ಬಳಿ ಸಿಕ್ಕಿದರೋ ಹೊರಗಾದರೂ ನೋಡಬಹುದಿತ್ತು. ಮುಹು!! ಎದುರೆ ಬಿಟ್ಟರೆ ಬೇರೆಲ್ಲೂ ನೊಡೋಹಾಗಿರಲಿಲ್ಲ. ಎಸ್.ಎಮ್.ಎಸ್ ಮಾಡೋಣ ಎಂದರೆ ಒಬ್ಬರದೂ ಮೆಸ್ಸೇಜ್ಗಳಿಲ್ಲ. ದಿನಕ್ಕೆ ೧೦೦ ಇದ್ದರೂ ನಾನು ಮಾಡಲ್ಲ ಇನ್ನು ಉಳಿದವ್ರು ಯಕ್ ಮಾಡೋ ಮನಸ್ಸು ಮಾಡ್ತಾರೆ ಅಲ್ವಾ.! ;)

ಅಂತೂ ಕುಣಿಗಲ್ ತಲುಪಿದಾಗ ಮೆಲ್ಲನೆ ಕಿಟಕಿಯಿಂದ ತೂರಿ ತಂಗಾಳಿ ಬೀಸಿತು ನೋಡಿ, ಚುರ್ ಅಂತು ಮೈ! ಹಾಗೇ ಕಣ್ಣ ನೋಟ ತಂಗಾಳಿ ಬಂದ ಕಡೆ ಹಾಯಿತು. ಮೋಡ ಕಟ್ಟಿ ಬಾನು ಕಪ್ಪು ಬಣ್ಣಕ್ಕೆ ತಿರುಗತ್ತು. ಕತ್ತಲಾದಂತೆ ಭಾಸವಾಯಿತು. ಟೈಮ್ ನೋಡಿದೆ ಇನ್ನೂ ೩.೩೦ ಅಷ್ಟೆ! ಸುಮ್ಮನೆ ಕಣ್ಮುಚ್ಚಿ ಕುಳಿತೆ! ಆ ರೊಮ್ಯಾಂಟಿಕ್ ಹವೆಗೆ ನನ್ನ ಮನಸ್ಸು ಕಲ್ಪಾನಾ ಲೋಕದಲ್ಲಿ ವಿಹರಿಸಲು ಪ್ರಾರಂಭಿಸಿತು. ಪಲ್ಸರ್ ಕಪ್ಪು ಬಣ್ಣದ ಬೈಕು, ಮುಂದೆ ಅವರು ಹಿಂದೆ ನಾನು! ಇದೇ ವೆದರ್.. ಚುಮು ಚುಮು ಹನಿಯುತ್ತಿದ್ದ ಮಳೆ. ಅದೇ ದಾರಿಯಲ್ಲಿ ಹೋಗುತ್ತಿತ್ತು ಗಾಡಿ..! ಇದಕ್ಕೆ ಸರ್ಯಾಗಿ ನನ್ನ ಎಂಪಿ೩ ಅಲ್ಲಿ ಬಂದ ಹಾಡುಗಳು "ಅಲೆ ಅಲೆ","ಕೈಸೆ ಮುಝೆ ತುಮ್ ಮಿಲ್ಗಯೇ","ಮುಂಗಾರು ಮಳೆಯೇ ಏನು ನಿನ್ನ ಹನಿಗಳಲೀಲೆ" "ಐ ಕ್ಯಾನ್ ಸೀ.. ಯು ಎಂಡ್ ಮಿ ವಾಕಿಂಗ್ ಇನ್ ದಿಸ್ ವಲ್ಡ್ ಟುಗೆಧರ್" "ತನ್ ತಾನೆ ತಾನ್ನಂತಾನೆ" ಈ ಹಾಡುಗಳೋ ನನ್ನ ಕಲ್ಪನೆಗೆ ಒಳ್ಳೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ನಂತಾಗ್ಬೇಕೇ!! ಮನಸ್ಸು ಎಲ್ಲೆಲ್ಲೋ ಹೋಯ್ತು.. ಅಷ್ಟೊತ್ಗೆ ಗಟ್ಟರ್ ವಾಸನೆ ಹೊಡೀತು.. :(
ಆದ್ರೆ ನನ್ನ ಕಲ್ಪನೆಲಿ ಅದು ಹೇಗೆ ತಿರಿಗಿತೆಂದರೆ.. ಅವ್ರನ್ನೊಂಚೂರು ಗಟ್ಟಿಯಾಗೇ ಹಿಡಿದೆ, ಆಗ ಬಡಿದದ್ದು ಆಯ್ಕ್ಸೆ ಡಿಯೋದು ಘಮ್ ಅನ್ನೋ ಪರಿಮಳ :P. ಆಮೇಲೆ ಗಾಡಿ ಅಲ್ಲೇ ಪಕ್ಕದಲ್ಲೇ ಇರೋ ಜುಳು ಜುಳು ಹರಿಯೋ ಫಾಲ್ಸ್ ಕಡೆ ಹೋಗಿ ದಡಕ್ ಅಂತ ಸ್ಟಾಪ್ ಆಯ್ತು.. ಮಳೆ ಜೋರಾಗ್ತಾನೆ ಇತ್ತು. ಸೀನ್ ಸಕತ್ತಾಗೇ ಹೋಗ್ತಿತ್ತು. ಇನ್ನೇನು ಮುಂದುವರಿಯುತ್ತೆ ಅನ್ನೋವಷ್ಟರಲ್ಲಿ ಕಂಡಕ್ಟರ್ "ಹತ್ತು ನಿಮ್ಶ್ಯ ಟೈಮ್ ಇದೆ ನೋಡಿ ಟೀ ಕುಡ್ಕೊಂಡು ಬರಬಹುದು" ಅಂತ ನನ್ನ ಕಲ್ಪನೆಗೆ ಸೆನ್ಸಾರ್ ಮಂಡ್ಳಿ ಅವ್ರತರ ಕತ್ತರಿ ಹಾಕ್ಬಿಟ್ರು :( ಆಮೇಲೆ ಕಲ್ಪನೆ ಮಾಡೋ ಮೂಡೇ ಹೋಯ್ತು!! ಮೌನದಲ್ಲೇ ಹಾಸನ ತಲುಪಿದೆ.. ಕೊನೆಗೂ ಈ "ಅವರು" ಯಾರು ಎಂದು ಗೊತ್ತಾಗಲೇ ಇಲ್ಲ :( !!!

Rating
No votes yet

Comments