ಕಳ್ಳಭಟ್ಟಿ

ಕಳ್ಳಭಟ್ಟಿ

ಕುಡಿತದ ಬಗ್ಗೆ ತಿಳಿಯುವ (ಕುಡಿಯುವ ಅಲ್ಲ) ಕುತೂಹಲ ಇರುವವರಿಗೆ ನನಗೆ ತಿಳಿದಷ್ಟು ಮಟ್ಟಿಗೆ ಹೇಳುವ ಪ್ರಯತ್ನ ಇಲ್ಲಿ ಮಾಡುವೆ. ತಮಾಷೆಗೆ/ಫ್ರೆಂಡ್ಲೀ/ಸೋಷಿಯಲ್/ಫ್ರೀ/ಬೆಟ್/ಕಂಪನಿ/ಬಾಸ್‌ಗಾಗಿ..ಯಾವ ಕಾರಣಕ್ಕೂ ಕುಡಿಯಲು ಸುರುಮಾಡಬೇಡಿ. ಸುಳಿಯಂತೆ ಅದು ನಿಮ್ಮನ್ನು ಒಳ ಸೆಳೆದುಕೊಳ್ಳುವುದು.
ಮೊದಲು ನಿಮ್ಮ ಕಂಟ್ರೋಲ್‌ನಲ್ಲಿ ಅದು, ನಂತರ ಅದರ ಕಂಟ್ರೋಲ್‌ನಲ್ಲಿ ನೀವು ಇರುವಿರಿ.

ಸಾರಾಯಿಯಿಂದ ಶಾಂಪೇನ್‌ವರೆಗೆ ತಯಾರಿಯಲ್ಲಿ ಮುಖ್ಯವಿರುವುದು
‘ಹುದುಗು ಬರಿಸುವುದು/ಹುಳಿ ಬರಿಸುವುದು’, ಮತ್ತು ‘ಬಟ್ಟಿ ಇಳಿಸುವುದು’. ದೋಸೆ ಮಾಡಲು ಅಕ್ಕಿ, ಉದ್ದು ಸೇರಿಸಿ ರಾತ್ರಿ ಇಡೀ ಹುಳಿ ಬರಲು ಮುಚ್ಚಿಟ್ಟಂತೆ, ಇದೂ ಸಹ..

ಮನೆ ಮನೆಗಳಲ್ಲಿ ಕಳ್ಳಬಟ್ಟಿ ತಯಾರಿಸುತ್ತಿರುವುದನ್ನು ಆ ಊರಿನ ಯುವಕರೇ ಸೇರಿ ನಾಶಪಡಿಸಿದ ವಿವರ ಇತ್ತೀಚೆಗೆ ಟಿ.ವಿ.ಯಲ್ಲಿ ಬಂದಿತ್ತು. ಈ ಕಳ್ಳಬಟ್ಟಿ ಹೇಗೆ ತಯಾರಿಸುತ್ತಾರೆಂಬುದನ್ನು ನೋಡೋಣ-
೧.ಮರಸೇಬು ಮತ್ತು,ಬಾಡಿದ, ಕೊಳೆತ ಇತರ ಹಣ್ಣುಗಳು,
೨.ಬೆಲ್ಲಮತ್ತು ನೀರು
೩.ಕೆಲ ಮುಳ್ಳಿನ ಗಿಡಗಳು
ಇವನ್ನೆಲ್ಲಾ ಮಣ್ಣಿನ ಮಡಕೆಯಲ್ಲಿ ಮಿಕ್ಸ್ ಮಾಡಿ, ಜತೆಗೆ ಹಳೇ ಬ್ಯಾಟರಿ ಸೆಲ್‌ಗಳು, ರಬ್ಬರ್ ಸ್ಲಿಪ್ಪರ್, ನವಸಾದರ ಪುಡಿ, ಹುಳ,ಹಲ್ಲಿ,ಕೊಳೆಯುವ ವಸ್ತುಗಳನ್ನೂ ಸೇರಿಸಿ,
ಹುಳಿ ಬರಿಸಲು ಇಡುವರು.
೫-೬ ದಿನದ ನಂತರ ಒಂದು ಮೂರು ಗಂಟೆ ಕುದಿಸಿ, ನಂತರ ೬-೭ ಗಂಟೆ ಡಿಸ್ಟಿಲ್ ಮಾಡುವರು. ಬಾಟಲಲ್ಲಿ ತುಂಬಿಸಿ ೩ ದಿನದ ಮೇಲೆ ಅಂಗಡಿಗಳಿಗೆ ಸಪ್ಲೈ ಮಾಡುವರು.
ಒಳ್ಳೇ ಬ್ರಾಂಡ್‌ನ ಲೇಬಲ್ ಬೇಕಿದ್ದರೆ ಅಂಟಿಸುವರು.
ಕುಡುಕ ಒರಿಜಿನಲ್ಲಾ,ಡುಪ್ಲಿಕೇಟಾ -ಎಲ್ಲಿ ನೋಡುತ್ತಾನೆ. ಅವನಿಗೆ ಕಿಕ್ ಸಿಕ್ಕರೆ ಸಾಕು.
ಒರಿಜಿನಲ್‌ಗಿಂತ ಕಳ್ಳಭಟ್ಟಿಯಲ್ಲೇ ಜಾಸ್ತಿ ಕಿಕ್ ಸಿಗುವುದು.

ಇನ್ನು (ಕೆಲವು ನಿಜವಿರಬಹುದು) ರೈಡ್ ಮಾಡುವ ತಮಾಷೆ- ರೈಡ್ ಮಾಡುವ ದಿನವನ್ನು ಕಳ್ಳಭಟ್ಟಿ ತಯಾರಕರೇ ನಿರ್ಧರಿಸಿರುತ್ತಾರೆ. ಆದಿನ ಯಾರೋ ಪಾಪದವರನ್ನು ಹಣಕೊಟ್ಟು ಅಲ್ಲಿ ನಿಲ್ಲಿಸಿರುತ್ತಾರೆ.
ರೈಡು-ಕಳ್ಳಭಟ್ಟಿ ವಶ-ಫೋಟೋ-ಕೇಸು-ಖುಲಾಸೆ, ಮುಗೀತು. ಮಾಮೂಲಿನಂತೆ ಅಲ್ಲೇ ಅಥವಾ ಇನ್ನೊಂದು ಕಡೆ ಕಳ್ಳಭಟ್ಟಿ ತಯಾರಿ ನಡೆಯುತ್ತಿರುತ್ತದೆ.

ಜನ ಕಳ್ಳಭಟ್ಟಿ ಕುಡಿಯಬಾರದೆಂದು ಹಳ್ಳಿ-ಹಳ್ಳಿಯಲ್ಲೂ ಬಾರ್/ವೈನ್ ಸ್ಟೋರ್ ತೆರೆಯುವ ಆಲೋಚನೆಯಲ್ಲಿದೆ. ಹಳ್ಳಿಗಳಿಗೆ ನೀರು-ಇಲ್ಲ, ಕರೆಂಟು-ಇಲ್ಲ, ಸ್ಕೂಲ್ ಇಲ್ಲ,
ಬಾರ್-ಸ್ಯಾಂಕ್ಷನ್.
ಕುಡಿಯೋಣು ಬನ್ನಿ ಕುಡಿಯೋಣು..
-ಗಣೇಶ.

Rating
No votes yet

Comments