ಕವನ *ಪ್ರಿಯಗೆಳತಿಗೆ*

ಕವನ *ಪ್ರಿಯಗೆಳತಿಗೆ*

 *ಪ್ರಿಯಗೆಳತಿಗೆ*

ಹಾರದಿರು ನೀ ಗೆಳತಿ ಬೇಲಿ ಈ ಜಾತಿ

ಹಾರಿದರೆ ಪಡುವೆ ನೀ ನೂರು ಪಜೀತಿ

ಭಂದು ಬಳಗದ ಪ್ರೀತಿಯ ಪಂಜರ

ಬಿಟ್ಟು ಹಾರದಿರು ಎಚ್ಚರ

ಮೋಹದಾ ಮಾಯದಾ ಬಲೆಗೆ

ನೀ ಬೀಳದಿರು (ಗೆಳತಿ)ಗಿಳಿಯೆ ?

ದಾಹ ನಿಟ್ಟುಸಿರು ನಿನಗೆ ತಪ್ಪದು ನೀ ಅರಿಯೆ

ಬದುಕಲು ನಿನಗಿಹುದು ಹಲವು ದಾರಿ

ಹೋಗಿ ಬಾ ಹರಸುವೆನು ಚಂದಿರ ಚಕೋರಿ

ನೀನಾಗು ಆದರ್ಶ ನಾರಿ

ಹೋಗದೆ ಪ್ರೀತಿ ಸಾಗರದಿ ಜಾರಿ

ಎಚ್ಚರವೆ ನಾರಿ ಮೆಚ್ಚಿರುವೆ ನಿನ್ನ ವಯ್ಯಾರಿ

ಕೃಷ್ಣಮೊರ್ತಿಅಜ್ಜಹಳ್ಳಿ

Rating
No votes yet

Comments