ಕವನ : ಬದಲಾದ ನನ್ನೊಳಗಿನವ
ಬೆಳಗ್ಗೆ ಎದ್ದು ಹೊರಬರುವಾಗ
ಅದೇ ಹಳೆಯ ಸೂರ್ಯ ಇಣುಕುತ್ತಿದ್ದ
ಮನೆಯ ಮುಂದಿನ ನಂಜಬಟ್ಟಲ ಗಿಡದಲ್ಲಿ
ದಿನವು ಬರುತ್ತಿದ ಅದೆ ಎರಡು ಪಕ್ಷಿಗಳು
ಮನೆಯ ಹಿಂದೆ ಕಾಗೆಗಳ ಕಲವರ
ರಸ್ತೆಯಲ್ಲಿ ನಡೆದಂತೆ ಅದೆ ಅದೆ ದೃಷ್ಯ
ಮನೆಯ ಮುಂದು ರಂಗೋಲಿ
ಹಾಕುತ್ತಿರುವ ವಯಸ್ಸಾದ ಮಹಿಳೆಯರು
ಶಾಲು ಹೊದ್ದು ಬದುಕುವ ಉತ್ಸಾಹದಿಂದ
ವಾಕಿಂಗ್ ಹೊರಟಿರುವ ವಯಸ್ಕರು
ಅದೆ ಗಾಳಿ ಅದೆ ಭೂಮಿ ಅದೆ ನೀರು
ಎಂದಿಗೂ ಬದಲಾಗದ ಅವುಗಳು
ಆದರೆ ನನ್ನೊಳೆಗೇನೆ ಬೇರೆ
ನಿನ್ನೆಯವರೆಗೂ ಇದ್ದವ ಇಂದು ಕಾಣುತ್ತಿಲ್ಲ
ಎಲ್ಲಕ್ಕು ನಾನು ನಾನು ಎನ್ನುತ್ತಿದ್ದವ
ಇಂದೇಕೊ ಎಲ್ಲಕ್ಕು ನಾನೆ? ಎನ್ನುತ್ತಿರುವ
ಎಲ್ಲವನ್ನು ಕಡಿದು ಹಾಕಬಲ್ಲೆ ಎಂದು ಕೂಗಿದವ
ಇಂದು ಕೊಡಲಿ ಎಸೆದು ಕುಳಿತಿರುವ
Rating
Comments
ಬದಲಾವಣೆಯ ಗಾಳಿ ಬೀಸುವುದೆಂದರೆ
ಬದಲಾವಣೆಯ ಗಾಳಿ ಬೀಸುವುದೆಂದರೆ ಇದೇ! :)
ಪಾರ್ಥ ಸಾರಥಿ ಯವರಿಗೆ ವಂದನೆಗಳು
ಪಾರ್ಥ ಸಾರಥಿ ಯವರಿಗೆ ವಂದನೆಗಳು
" ಬದಲಾದ ನನ್ನೊಳಗಿನವ " ದಿನ ನಿತ್ಯದ ಬೆಳಗನ್ನು ಸರಳವಾಗಿ ನಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ವಿವರಿಸುತ್ತ ಹೋಗುವ ಕವನ ನಾಲ್ಕನೆ ಚರಣಕ್ಕೆ ಹೋಗುತ್ತಿದ್ದಂತೆ ನಮ್ಮೊಳಗನ್ನು ಬಗೆಯುತ್ತ ಹೋಗುತ್ತದೆ, ಕೊನೆಯ ಚರಣವಂತೂ ಸೂಪರ್, ಕವನದ ನಾಯಕ ಜಗದ ದ್ವಂದ್ವ ಬದುಕನ್ನು ಕಂಡು ಸೋತು ಹೈರಾಣವಾಗಿ ಕೊಡಲಿಯೆಸೆದು ಕೂತಿರಬಹುದೆ? ಎಲ್ಲವನ್ನೂ ಕಂಡೂ ವರ್ತಮಾನದ ಜನ ನಾಯಕನಂತೆ ನಾನು ನನ್ನಿಂದ ಮತ್ತು ನನಗಾಗಿ ಎಂದು ಉದ್ದೇಶ ಪೂರ್ವಕವಾಗಿ ಕೊಡಲಿ ಎಸೆದು ಕುಳಿತಿರ ಬಹುದೆ? ಉತ್ತಮ ಕವನ ಧನ್ಯವಾದಗಳು.