ಕವನ : ಮಾವಿನ ಕಾಯ್

ಕವನ : ಮಾವಿನ ಕಾಯ್

 

ಕವನ : ಮಾವಿನ ಕಾಯ್

ಸುಳಿದಾಡುವಾಸೆ ಸೊಂಪಾಗಿ ರೆಂಬೆಯ ಚಾಚಿ
ಗಿಳಿ ಕುಕಿಲಗಳ ಹೊತ್ತ  ಮಾಮರದ ಕೆಳಗೆ
ತುರುಗಿ ತುಂಬಿದ ಪಸಿರ ಬಿಡಿಯೆಲೆಗಳನು ಬಳಸಿ
ಜೋತು ಬಿದ್ದವು ಮಾವು ಗೋಚರಿಸಲೆನಗೆ.

ಎಳೆಮಾವಿನಾಸುವಾಸನೆ ಮೂಗಿನೊಳು ಬಡಿದು
ಕೆದಕದಿತ್ತೇ ನಮ್ಮ ಬಾಲ್ಯದಿನಗಳನು
ಎಲ್ಲೋ ಮರೆತಿದ್ದ ಪರಿಮಳವೆನ್ನ ಮನದೊಳಗೆ
ಬಿಚ್ಚಹತ್ತಿತು ಮೊರಟಿಸತ್ತ ಲೋಕವನು.

ಚುಳ್ಳೆನಿಸುವಂತೆ ಹುಳಿಯಳಿಯುಪ್ಪು ಖಾರವನು
ನೆನೆದು ಮನ ನೀರೂರಿಸಿತು ನಾಲಗೆಯನು.
ಆಗ ಕಿತ್ತಿಹ ತೊಟ್ಟಲೊಸರಿಸುವ ಸೋನೆರಸ
ನೆನಪಿಸಿತು ತುಟಿಯಂಚ ಸಣ್ಣಗಾಯವನು.

ಅಲ್ಲಮನಿಗೂ ಗೊತ್ತು ನೆಲ್ಲಿ ಉಪ್ಪಿನ ರುಚಿಯು
ಸಾಗರಕೂ ಬೆಟ್ಟಕ್ಕೂ ಎಂಥ ಸಂಬಂಧ!
ಯಾರತೋಟದ ಮಾವೋ ಯಾವ ಹೊಲಬಿತ್ತ ಮೆಣ-
ಸಿನಕಾಯಿ, ಪುಡಿಯುಪ್ಪಿದೆಂತ ಅನುಬಂಧ!

ಸಂಕುಚಿತ ಮನದ ಪ್ರತಿಷ್ಟೆಗಳ ಚಣಕಾಲ
ತೊರೆದೆಂಟು ರೂಪಾಯಿಗಳಹೊರಗೆ ತೆಗೆದು
ಕೊಳ್ಳಲಾಗದೆ ನಿಮ್ಮ ಬಾಲ್ಯದಿನಗಳ ನೆನಪ
ನೇಹಿತರ ಜೊತೆಗೂಡಿ ಮಾತುಗಳ ಹೆಣೆದು.

 

Rating
No votes yet

Comments