ಕವಿತೆ : ಮಂದಗೋಚರ ಸತ್ಯ..
ಕವಿತೆ : ಮಂದಗೋಚರ ಸತ್ಯ..
ಹಸಿರ ಮಾವಿನತೋಪು, ತಂಪು ತಂಪಿದ್ದರೂ
ಜೀರುಂಡೆ ಸದ್ದಿಲ್ಲ ತೋಪಿನೊಳಗೆ.
ಎತ್ತನೋಡಿದರಲ್ಲಿ ತೂಗುತಿಹ ಹೆಮ್ಮಾವು,
ಚಿಗುರಿದೆಲೆ ಅಲ್ಲಲ್ಲಿ ಮಧ್ಯದೊಳಗೆ
ಆಹ! ಕೋಗಿಲೆ ಕಂಡೆ ಎತ್ತರದ ಟೊಂಗೆಯಲಿ
ಕಪ್ಪು, ಬಾಗಿದ ಕೊಕ್ಕು ದಿಟ್ಟಿ ತಾಗೆ.
ಹಲಗಂಟೆ ಕಾದರೂ ಇನಿದನಿಯು ಬರಲಿಲ್ಲ.
ಒಮ್ಮೆಗೇ ಕಿರುಚಿತದು ಕಪ್ಪು ಕಾಗೆ.
Rating
Comments
ಉ: ಕವಿತೆ : ಮಂದಗೋಚರ ಸತ್ಯ..
ಕವಿಗಳಿಗೆ ನಮಸ್ಕಾರಗಳು,
ನಿಮ್ಮ ರಚಿತ ಮಂದಗೋಚರ ಕವನ ತುಂಬಾ ಅರ್ಥಗರ್ಭಿತವಾಗಿದೆ, ಅರ್ಥವಾಗುವ ಬಗೆ ಅವರವರ ಮನಸ್ಸಿಗೆ ಬಿಟ್ಟಿದ್ದು.
ಧನ್ಯವಾದಗಳು.
ಉ: ಕವಿತೆ : ಮಂದಗೋಚರ ಸತ್ಯ..
ಈಗ ಹಕ್ಕಿಗಳೇ ಕಾಣುತ್ತಿಲ್ಲ! ಇನ್ನು ಚಿಲಿಪಿಲಿ, ಕುಹು ಕುಹೂಗಳೆಲ್ಲಿ ಕೇಳೀತು!!