ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)

ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)

ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು

ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು

ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು

ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು

 

ಏಕೆ  ಬೇಕಿತ್ತು  ಈ  ಜಗದ ಸೃಷ್ಠಿ  ಎಂದು ಕೇಳಿದಾಗ ಮನಸು

ತಿಳಿದು ಅದ ನೀ ಮಾಡುವುದೇನೆಂಬುದನೊಮ್ಮೆ ಯೋಚಿಸು

ಸದ್ದು ಮಾಡದೆ ಮೌನವಾಗಿಹ ನೀರು ತುಂಬಿದ ಕೊಡದಂತೆ

ಸೃಷ್ಠಿ ರಹಸ್ಯ  ತಿಳಿದಂದು ನೀ ಕೂಡ ಮೌನವಾಗುವೆ ಅಂತೆ

 

ಸುಖದಿಂದಲಿ ಇರುವಾಗ ಪರರ ದುಃಖ, ಕಷ್ಟಗಳಿಗೆ ನೀನಾದರೆ

ನಿನ್ನ ಕಷ್ಟದಲಿ ಕೈಹಿಡಿದು ಶ್ರೀ ನರಸಿಂಹ ನೀಡುವ ನಿನಗಾಸರೆ

Rating
No votes yet

Comments