ಕಸೌಲಿ ಎಂಬ ರಮ್ಯ ತಾಣ

ಕಸೌಲಿ ಎಂಬ ರಮ್ಯ ತಾಣ

ಸಿಮ್ಲ ಎಲ್ಲರಿಗೂ ಗೊತ್ತು, ಸಿಮ್ಲದ ಹತ್ತಿರದಲ್ಲೇ ಇರುವ ’ಕಸೌಲಿ’ಯ ಬಗ್ಗೆ ಕೇಳಿದವರು ಕಡಿಮೆ.

ಚಂಡೀಗಢದಿಂದ ಸಿಮ್ಲಕ್ಕೆ ಡಾಮರು ರಸ್ತೆಯಲ್ಲಿ ಅಥವಾ ಪುಟಾಣಿ ರೈಲುಗಾಡಿಯಲ್ಲಿ ಹೋಗಬಹುದು. ಹೇಗೆ ಹೋದರೂ ದಾರಿಯಲ್ಲಿ ಸಿಗುವ ಧರಮ್ ಪುರದಿಂದ ಎಡಕ್ಕೆ ತಿರುಗಿ ಮುಂದುವರೆದರೆ ಕಸೌಲಿ ಪಟ್ಟಣ ಸಿಗುತ್ತದೆ. ಇದರ ಬಗ್ಗೆ ಇನ್ನೂ ತಿಳಿಯಲು ಈ ಲಿಂಕ್ ಅನ್ನು ಉಪಯೋಗಿಸಬಹುದು

http://www.arounddelhi.com/kasauli.htm 

ಕಸೌಲಿ ಪಟ್ಟಣದಿಂದ ೪ ಕಿ. ಮೀ. ದೂರದಲ್ಲಿ ಭಾರತೀಯ ವಾಯು ಸೇನೆಯ ತಾಣವೊಂದಿದೆ. ಅದರ ಒಳಗಿರುವ ಒಂದು ಬೆಟ್ಟ ಕಸೌಲಿಯ ಪ್ರದೇಶದಲ್ಲೇ ಅತಿ ಎತ್ತರವಾದದ್ದು. ಈ ಪರ್ವತದ ಹೆಸರು ’ಮಂಕಿ ಪಾಯಿಂಟ್’. ಅದರ ಮೇಲೆ ಹನುಮಂತ ದೇವರ ಗುಡಿಯೊಂದಿದೆ. ಹನುಮಂತನಿಗೆ ಇಲ್ಲಿ ’ಮಂಕಿ ಬಾಬಾ’ ಎಂದು ಹೆಸರು. ಗುಡಿಯ ಮುಂದೇ ವಾಯು ಸೇನೆಯವರ ಹೆಲಿಪ್ಯಾಡ್ ಕೂಡ ಇದೆ. ಹನುಮಂತನು ಗಂಧಮಾದನ ಪರ್ವತವನ್ನು ಹೊತ್ತುಕೊಂಡು ಹಾರುವಾಗ ಬಲಗಾಲನ್ನು ಸಿಮ್ಲದ ಮೇಲೂ, ಎಡಗಾಲನ್ನು ಕಸೌಲಿಯ ಈ ಪರ್ವತದ ಮೇಲೂ ಇಟ್ಟನು ಎಂದು ಪ್ರತೀತಿ.

ಇಲ್ಲಿಗೆ ಬರಲು ಕಸೌಲಿಯಿಂದ ಟ್ಯಾಕ್ಸಿಯಲ್ಲಿ ಬರಬಹುದು, ಆದರೆ ೪ + ೪ ಕಿ. ಮೀ. ದೂರಕ್ಕೆ ೩೦೦, ೪೦೦ ರೂ ಕೇಳುತ್ತಾರೆ. ಕಾಲು ಗಟ್ಟಿ ಇದ್ದವರು ನಡೆದುಕೊಂಡೇ ಬರಬಹುದು.

ಇಲ್ಲಿಗೆ ಬರುವಾಗ ಗುರುತು ಚೀಟಿ (ಐ.ಡಿ, ಪ್ಯಾನ್ ಕಾರ್ಡ್, ಲೈಸನ್ಸ್ ಇತ್ಯಾದಿ) ಅವಶ್ಯವಾಗಿ ಬೇಕು. ಯಾವುದೇ ಇಲೆಕ್ಟ್ರಾನಿಕ್ ಉಪಕರಣಗಳನ್ನು (ಮೊಬೈಲ್, ಕ್ಯಾಮೆರ, ಕಾರಿನ ರಿಮೋಟ್ ಕೀ ಇತ್ಯಾದಿ) ತರಬಾರದು. ಒಳಹೊಕ್ಕ ಕೂಡಲೇ ವಾಯು ಸೇನಾ ಸಿಬ್ಬಂದಿ ಎಲ್ಲರನ್ನೂ ತಪಾಸಣೆ ಮಾಡುತ್ತಾರೆ, ಅನಂತರ ಮುಂದೆ ಹೋಗಬಹುದು. ಯಾವುದೇ ತಿಂಡಿ ತಿನಿಸುಗಳನ್ನು ಕೊಂಡೊಯ್ಯಬೇಡಿ, ಮಂಗಗಳ ಹಾವಳಿ ವಿಪರೀತ.

ಸಿಮ್ಲಕ್ಕೆ ಹೋಗಿ ಬರುವವರು ಅವಶ್ಯವಾಗಿ ನೋಡಬೇಕಾದ ಸ್ಥಳ.

Rating
No votes yet