ಕಸ್ತೂರಿವಾಹಿನಿಯ ಸಾಧನೆಯಲ್ಲಿ ಎಜೆ ಇಂಫ್ಯಾಕ್ಟ್ ಮೀಡಿಯಾ ಪಾತ್ರ

ಕಸ್ತೂರಿವಾಹಿನಿಯ ಸಾಧನೆಯಲ್ಲಿ ಎಜೆ ಇಂಫ್ಯಾಕ್ಟ್ ಮೀಡಿಯಾ ಪಾತ್ರ

ಕಸ್ತೂರಿವಾಹಿನಿಯ ಸಾಧನೆಯಲ್ಲಿ ಎಜೆ ಇಂಫ್ಯಾಕ್ಟ್ ಮೀಡಿಯಾ ಪಾತ್ರ
ಕನ್ನಡಿಗರ ಮೊಟ್ಟ ಮೊದಲ ಚಾನೆಲ್ ಎಂಬ ಹೆಗ್ಗಳಿಕೆಯ ಕಸ್ತೂರಿ ವಾಹಿನಿ. ವಿದ್ಯುನ್ಮಾನ ಮಾಧ್ಯಮ ಉದ್ಯಮದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಅಧಿಕ ಪ್ರಮಾಣದ ಸಂಪನ್ಮೂಲ ಕ್ರೂಢಿಕರಿಸಿದೆ. ಭಾರತದ ಪ್ರಾದೇಶಿಕ ವಾಹಿನಿಯೊಂದು ಆರಂಭವಾದ ಒಂದೇ ವರ್ಷದಲ್ಲಿ ಸುಮಾರು ೧೨ ಕೋಟಿ ಸಂಪನ್ಮೂಲ ಕ್ರೂಢಿಕರಿಸಿರುವುದು ಇದೇ ಮೊದಲು. ಶ್ರೀಮತಿ ಅನಿತಾಕುಮಾರಸ್ವಾಮಿ ನೇತ್ರುತ್ವದ ಈ ಸಂಸ್ಥೆ, ಈ ವಿಶಿಷ್ಟ ದಾಖಲೆ ಸಾಧಿಸಿದೆ.
ಯೋಜನೆಯಂತೆ ತಂಡ ಕಾರ್ಯನಿರ್ವಹಿಸಿದ್ದು, ಈ ಯಶಸ್ಸಿನಲ್ಲಿ ಕೈಜೋಡಿಸಿರುವ ಎಜೆ ಇಂಫ್ಯಾಕ್ಟ್ ಮೀಡಿಯಾಗೆ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಬಾಲಾಜಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕಸ್ತೂರಿ ವಾಹಿನಿಯ ಈ ಅದ್ಬುತ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಎಜೆ ಇಂಫ್ಯಾಕ್ಟ್ ಮೀಡಿಯಾ ಪ್ರೈವೇಟ್ ಲಿ. ಮುಖ್ಯಸ್ಥ ಅಜಯ್ ಕುಮಾರ್ ರಾಮಾನುಜ, ಹಿರಿಯ ಮಾಧ್ಯಮ ಸಲಹೆಗಾರ ಸಂಜಯ್ ಜರಿವಾಲ್ ಹಾಗೂ ರಸೂಲ್ ಅಲಿ ಇವರಿಗೂ ಅಭಿನಂದನೆ ಸಲ್ಲಿಸಲಾಗಿದೆ.
ಕಸ್ತೂರಿ ವಹಿನಿಯ ಈ ಪ್ರಚಂಡ ಪ್ರದರ್ಶನಕ್ಕೆ ಹರ್ಷ ವ್ಯಕ್ತಪಡಿಸಿರುವ ಎಜೆ ಇಂಫ್ಯಾಕ್ಟ್ ಮೀಡಿಯಾ ಪ್ರೈವೇಟ್ ಲಿ. ಮುಖ್ಯಸ್ಥ ಅಜಯ್ ಕುಮಾರ್ ರಾಮಾನುಜ, ದೇಶದ ಪ್ರಾದೇಶಿಕ ವಾಹಿನಿಗಳ ಪೈಕಿ ಕಸ್ತೂರಿಯದ್ದು ಶ್ರೇಷ್ಟ ಸಾಧನೆ ಎಂದು ಬಣ್ಣಿಸಿದ್ದಾರೆ. ಇದಕ್ಕಾಗಿ ಸಹಕಾರ ನೀಡಿದ ತಂಡದ ಎಲ್ಲಾ ಸದಸ್ಯರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅಜಯ್ ಕುಮಾರ್ ರಾಮಾನುಜ, ಸಂಜಯ್ ಜರಿವಾಲ್ ಹಾಗೂ ರಸೂಲ್ ಅಲಿ ಅವರನ್ನು ಒಳಗೊಂಡ ತಂಡ, ಪ್ರಾದೇಶಿಕ ವಿದ್ಯುನ್ಮಾನ ವಲಯ ಹಾಗೂ ಇತರ ಮಾಧ್ಯಮಗಳಲ್ಲಿ ಸುಮಾರು ೫೦ ವರ್ಷಗಳ ಅನುಭವ ಹೊಂದಿದೆ. ಇವರೆಲ್ಲರ ನೆರವಿನೊಂದಿಗೆ ಕಸ್ತೂರಿ ವಾಹಿನಿ ಬೆಂಗಳೂರಿನಲ್ಲಿ ಸೆಪ್ಟಂಬರ್ ೨೬,೨೦೦೭ ರಂದು ಕಾರ್ಯಾರಂಭ ಮಾಡಿತ್ತು. ಕಸ್ತೂರಿ ಕೇವಲ ಒಂದು ವರ್ಷದಲ್ಲಿ ಲಾಭ ಗಳಿಸಿರುವುದು ಅಷ್ಟೇ ಅಲ್ಲದೇ ಎಲ್ಲಾ ಸವಾಲು ಮತ್ತು ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಬಗೆಹರಿಸಿದೆ. ಈ ಮೂಲಕ ವೃತ್ತಿಪರತೆಯನ್ನೂ ಪ್ರದರ್ಶಿಸಿದೆ. ಇದೇ ವೇಳೆ ಪ್ರತಿಕ್ರಿಯಿಸಿರುವ ಸಂಜಯ್ ಜರಿವಾಲ್, ಜಾಹೀರಾತು ಏಜೆಸ್ಸಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಉತ್ಕೃಷ್ಟತೆಯನ್ನು ಕಾಯ್ದುಕೊಂಡಿದ್ದೇವೆ. ರಾಷ್ಟೀಯ ಜಾಹೀರಾತುದಾರರು, ಅದರಲ್ಲೂ ಪ್ರಾದೇಶಿಕ ಜಾಹೀರಾತುದಾರರ ಇಚ್ಚೆಗನುಗುಣವಾಗಿ ಸೇವೆ ಸಲ್ಲಿಸಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಜಾಹೀರಾತು ಆದಾಯ ಹೆಚ್ಚಳಕ್ಕೆ ತೋರಿದ ದಕ್ಷತೆ ಹಾಗೂ ಕುಶಲತೆ ಪ್ರಮುಖ ಕಾರಣ ಎಂದು ತಿಳಿಸಿರುವ ಅಜಯ್, ಇದಕ್ಕಗಿ ರಾಜಮಾರ್ಗವನ್ನೇ ಅನುಸರಿಸಲಾಗಿದೆ ಎಂದರು. ಇದೇ ವೇಳೆ ಪೂರ್ವ ಯೋಜನೆಗಳನ್ನು ರೂಪಿಸಿದ ಹಾಗೂ ಸ್ವಾತಂತ್ರ್ಯ ನೀಡಿದ ಕಸ್ತೂರಿ ಆಡಳಿತ ಮಂಡಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಟಿವಿ ಮಾಧ್ಯಮ ವಲಯದಲ್ಲಿ ಕಸ್ತೂರಿ ತೋರಿರುವ ಸಾಧನೆಗೆ ಸಂಜಯ್ ಜರಿವಾಲ್ ಹಾಗೂ ಅವರ ತಂಡದ ಪರಿಶ್ರಮವೇ ಮುಖ್ಯ ಕಾರಣ. ಆರಂಭಿಕ ಹಂತದಲ್ಲೇ ಎಲ್ಲಾ ಸವಾಲುಗಳನ್ನು ಎದುರಿಸುವುದು ಸುಲಭವಲ್ಲ ಎಂದು ಅಜಯ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಉಪಗ್ರಹ ಟಿವಿ ಉದ್ಯಮದ ರೀತಿ-ರಿವಾಜುಗಳನ್ನು ಅರಿತ ಹಿರಿಯ ಆಡಳಿತ ಮಂಡಳಿ, ಇದಕ್ಕಾಗಿ ಸಕಲ ರೀತಿಯಲ್ಲೂ ಸೂಕ್ತವಾದ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಅಭಾರಿಗಳಾಗಿದ್ದೇವೆ. ಎಜೆ ಇಂಫ್ಯಾಕ್ಟ್ ಮೀಡಿಯಾ ಸಂಸ್ಥೆ ಕಟ್ಟಡ ನಿರ್ವಹಣೆ ತರಬೇತಿ, ಮಾನವ ಸಂಪನ್ಮೂಲದ ನಿರ್ವಹಣೆ, ಜಾಹೀರಾತು ವ್ಯವಹಾರದ ವ್ಯವಸ್ಥೆ ಹಾಗೂ ಶಿಷ್ಟಾಚಾರ, ಮಾರ್ಕೆಟಿಂಗ್, ಮಾಧ್ಯಮ ಸಂಪರ್ಕ ಹಾಗೂ ಕಾರ್ಯಕ್ರಮಗಳ ಕುರಿತ ವಿಶ್ಲೇಷಣೆಗಳನ್ನು ನಿರ್ವಹಿಸಿದೆ.ಇಷ್ಟೇ ಅಲ್ಲದೇ ಎಜೆ ಇಂಫ್ಯಾಕ್ಟ್ ಮೀಡಿಯಾ, ಆಂಧ್ರ ಪ್ರದೇಶ ಸರ್ಕಾರ ಮತ್ತು ಸತ್ಯಂ ಫೌಂಡೇಶನ್ ನ ಸಹಯೋಗದಲ್ಲಿ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಸಂವಹನ ಮಾಧ್ಯಮ ಮತ್ತು ಸಾಂಪ್ರದಾಯಿಕ ಮಾಧ್ಯಮ ಬಳಸಿಕೊಂಡು ಈ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಯೋಜನೆಯ ನೇತೃತ್ವವನ್ನು ರಸೂಲ್ ಅಲಿ ವಹಿಸಿದ್ದಾರೆ.
ಜೀ ತೆಲುಗು ಮತ್ತು ಜೀ ಕನ್ನಡ ವಾಹಿನಿಗಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ಅಜಯ್ ರಾಮಾನುಜ ಅವರು, ಎಜೆ ಇಂಫ್ಯಾಕ್ಟ್ ಮೀಡಿಯಾ ಬಗ್ಗೆ ಮೆಚ್ಚುಗೆಯ ಮಾತುಗಳಾನ್ನಾಡುತ್ತಾ, ಸಂಸ್ಥೆ ಮತ್ತಷ್ಟು ಆಕರ್ಷಕ ಯೋಜನೆಗಳನ್ನು ಪಡೆಯಲಿದ್ದು, ಮುಂಬರುವ ದಿನಗಳನ್ನು ಟಿವಿ ಕಾರ್ಯಕ್ರಮ, ಸಿನಿಮಾ ನಿರ್ಮಾಣ, ಮಾಧ್ಯಮ ಮತ್ತು ವೃತ್ತಿಪರ ತರಬೇತಿ ಕ್ಷೇತ್ರಗಳಿಗೂ ಲಗ್ಗೆ ಇಡಲಿದೆ. ನಮ್ಮ ದಾಖಲೆಗಳೇ ನಮ್ಮ ಸಾಧನೆಗಳನ್ನು ಸಾಕ್ಷೀಕರಿಸುತ್ತವೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಜ್ವಲಿಸಲಿದೆ ಎಂದು ಸಂಭ್ರಮಿಸಿದ್ದಾರೆ.
ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಮುಖ್ಯಸ್ಥರಾದ ಅಜಯ್ ಕುಮಾರ್ ರಾಮಾನುಜ ೯೮೪೫೬೦೭೭೮೯,೯೯೦೦೩೨೩೩೪೪. ಮತ್ತು ಸಂಜಯ್ ಜರಿವಾಲ್೯೯೦೦೩೨೩೩೮೮ ಸಂಪರ್ಕಿಸುವುದು

Rating
No votes yet