ಕಾಂಗ್ರೆಸ್ ಪಾಠ ಕಲಿಯಬೇಕು
ಐದು ವಿಧಾನ ಸಭೆ ಚುನಾವಣೆಗಳ ಫಲಿತಾಂಶ ಶುಭಸೂಚಕವಾಗಿದೆ. ಐದು ರಾಜ್ಯಗಳ ಪೈಕಿ ನಾಲ್ಕು ವಿಧಾನಸಭೆಗಳು ನಿಸ್ಸಂದಿಗ್ಧ ಬಹುಮತ ಗಳಿಸಿವೆ. ದೇಶದ ಅದರಲ್ಲೂ ಅತಿದೊಡ್ಡ ವಿಧಾನಸಭೆಯ ಉತ್ತರ ಪ್ರದೇಶದ ಮತದಾರ ಅಭಿನಂದನಾರ್ಹ ಕೆಲಸ ಮಾಡಿದ್ದಾನೆ. ಅಲ್ಲಿ ಒಂದೇ ಪಕ್ಷ ನಿಚ್ಚಳ ಬಹುಮತ ಗಳಿಸಿದೆ. ಇಂದಿನ ಚುನಾವಣಾ ಸಂದರ್ಭದಲ್ಲೇ ಇದು ಸ್ವಪ್ನಾವಸ್ಥೆ ಎನ್ನಿಸುವ ಸನ್ನಿವೇಶ! ಪ್ರದೇಶಿಕ ಸಮಾಜವಾದಿ ಪಕ್ಷಕ್ಕೆ ಹ್ಯಾಟ್ಸ್ ಆಫ್!
ಬರಲಿರುವ ಸಂಸದೀಯ ಚುನಾವಣೆಗಾಗಿ ರಾಷ್ಟ್ರ ಮಟ್ಟದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪಾಠವೇ ಇಲ್ಲಿದೆ. ಮುಂದೆ ನೂಕಲ್ಪಟ್ಟ ಕೃತಕ ನಾಯಕ ರಾಹುಲ್ ಗಾಂಧೀ ಗುಣಕಥನವನ್ನದು ತಕ್ಷಣದಿಂದಲೇ ಕೈಬಿಡಬೇಕು. ಸೋಲಿನಲ್ಲೂ ಆತನನ್ನೇ ಅಟ್ಟಕ್ಕೇರರಿಸಿ ಹೆಸರನ್ನು ಚಾಲ್ತಿಯಲ್ಲಡುವ ಅದರ ಪ್ರಯತ್ನ ಅಪಾಯಕಾರಿ. ಪಕ್ಷಾಧ್ಯಕ್ಷೆಯ ಪ್ರಧಾನಿ ಪಟ್ಟದ ಪದತ್ಯಾಗದ ಹೆಗ್ಗಳಿಕೆಯ ಟ್ರಂಪ್ ಕಾರ್ಡ್ ಪಕ್ಷದ ಬಳಿ ಇನ್ನೂ ಜೀವಂತವಾಗಿಯೇ ಇದೆ. ಆದರೆ ಅದಕ್ಕೂ ಆಕೆಯ ಕೌಟುಂಬಿಕ ವಾರಸುದಾರಿಕೆಯನ್ನೇ ಸರಿಹಚ್ಚಹೋಗುವುದು ಅವಿವೇಕವಾದೀತು. ಇನ್ನೊಂದು ಪಾಠವೆಂದರೆ, ಅಲ್ಪಸಂಖ್ಯಾತರ ಅತಿ ಓಲೈಕೆ. ಈ ಕುರಿತ ಜಾಹಿರಾತುಗಳು ಈಗಾಗಲೇ ಸಾರ್ವಜನಿಕರಲ್ಲಿ ವಾಕರಿಕೆ ಹುತ್ತಿಸುವ ಮಟ್ಟದಲ್ಲಿದೆ. ಬೇಕಾದರೆ ಅವರನ್ನು ಮುಖ್ಯವಾಹಿನಿಗೆ ತರುವ ನೈಜ ಪ್ರಯತ್ನದಿಂದ ಮನವೊಲಿಸಿಕೊಳ್ಳಲಿ.
ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಈಗ ಪಾಠ ಕಲಿಯದೆ ಮುಂದೆ ಪ್ರಾದೇಶಿಕ ಪಕ್ಷಗಳು ಕೇಂದ್ರವನ್ನೂ ಕೈವಶ ಮಾಡಿಕೊಂಡರೆ ದೇಶ ಛಿದ್ರ-ಛಿದ್ರವಾಗುವುದು ಕಟ್ಟಿಟ್ಟ ಬುತ್ತಿ!