ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯

ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯



    ಒಬ್ಬ ದಿನಾಲು ಚೆಂಬು ಹಿಡಿದು ಬಹಿರ್ದೆಶೆಗೆ ಹಿತ್ತಲಿನ ಕಡೆಗೆ ಹೋಗುತ್ತಿದ್ದ. ಅವನು ಬಹಿರ್ದೆಶೆಗೆ ಕುಳಿತುಕೊಂಡ ಕೂಡಲೇ ಎಲ್ಲಿಂದಲೋ ಕಾಗೆಯೊಂದು ಬಂದು ಚೊಂಬನ್ನು ಉರುಳಿಸಿ ಬಿಡುತ್ತಿತ್ತು. ಆಗ ಆವನು ತನ್ನ ಹೆಂಡತಿಯನ್ನು ಕೂಗಿ ಕರೆದು ಮತ್ತೆ ಚಂಬಿನಲ್ಲಿ ನೀರು ತರಿಸಿಕೊಂಡು ತನ್ನ ಕಾರ್ಯಕ್ರಮವನ್ನು ಮುಗಿಸುತ್ತಿದ್ದ. ಇದೇ ಕ್ರಮ ದಿನಾಲೂ ಪುನರಾವರ್ತನೆಯಾಗುತ್ತಿತ್ತು. ಅದೊಂದು ದಿವಸ ಗಂಡ ಬಹಿರ್ದೆಶೆಗೆ ಕುಳಿತುಕೊಂಡು ಅಷ್ಟೊತ್ತಾದರೂ; ತನ್ನ ಹೆಂಡತಿಯನ್ನು ನೀರಿಗಾಗಿ ಕೂಗಿ ಕರೆಯಲೇ ಇಲ್ಲ. ಹೆಂಡತಿ ಆಶ್ಚರ್ಯಗೊಂಡು ಹೊರಗೆ ಬಂದು, ಈ ದಿನವೇಕೆ ನೀರಿಗಾಗಿ ತನ್ನನ್ನು ಕೂಗಿ ಕರೆಯಲಿಲ್ಲವೆಂದು ಕೇಳಿದಳು. ಆಗ ಗಂಡ, " ಆ ಕಾಗೆ ದಿನಾಲೂ ಬಂದು ಚೊಂಬು ಉರುಳಿಸುತ್ತಿತ್ತಲ್ಲ, ಅದಕ್ಕೇ ಅದಕ್ಕೊಂದು ಪಾಠ ಕಲಿಸಬೇಕೆಂದು, ಮೊದಲೇ ತೊಳೆದುಕೊಂಡು ಬಂದು ಕೂತ್ಕೊಂಡೆ!"

Rating
No votes yet

Comments