ಕಾಡುತ್ತಿರುವ ಒಂದು ಪ್ರಶ್ನೆಗೆ ಉತ್ತರಿಸಿ..ಪ್ಲೀಸ್

ಕಾಡುತ್ತಿರುವ ಒಂದು ಪ್ರಶ್ನೆಗೆ ಉತ್ತರಿಸಿ..ಪ್ಲೀಸ್

ಮುಂಬಯಿಯ ಕರ್ನಾಟಕ ಸಂಘದಲ್ಲಿ ಎರಡು ದಿನಗಳ ಅಖಿಲ ಭಾರತ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ ನಡೆಯಿತು.. ಈ ಬಾರಿ ’ಕೋಮು ಸೌಹಾರ್ದ’ ಎಂಬ ವಿಷಯವನ್ನು ನೀಡಲಾಗಿತ್ತು. ಅಂದರೆ ಎಲ್ಲ ನಾಟಕಗಳ ವಸ್ತು ’ಕೋಮು ಸೌಹಾರ್ದತೆ’ ಆಗಿರಬೇಕು ಎಂಬುದು. ಮೊದಲ ದಿನ (೨೧-೦೨-೨೦೦೯) ಭದ್ರಾವತಿಯ ಎಂ.ಪಿ.ಎಂ ಕಲಾವಿದರು ’ಒಬ್ಬನೇ ಚಂದಿರ’ ಅನ್ನುವ ನಾಟಕವನ್ನು ಪ್ರದರ್ಶಿಸಿದರು.
ಒಂದು ಹಳ್ಳಿಯಲ್ಲಿ ಹಿಂದು-ಮುಸ್ಲಿಮರು ಸಹಬಾಳ್ವಯನ್ನು ನಡೆಸುತ್ತ ಬಂದಿದ್ದಾರೆ. ಆದರೆ ಯಾವುದೋ ಒಂದು ಕ್ಷಣ, ಎರಡೂ ಪಂಗಡಗಳಲ್ಲಿ ಜಗಳ ಪ್ರಾರಂಭವಾಗುತ್ತದೆ.
ಒಬ್ಬರನ್ನೊಬ್ಬರು ತೆಗಳಲು ಪ್ರಾರಂಭಿಸುತ್ತಾರೆ.
ಜಗಳದ ಮಧ್ಯೆ, ಹಿಂದೂ ಮನುಷ್ಯನೊಬ್ಬ, ಮುಸ್ಲಿಮನೊಬ್ಬನಿಗೆ ಈ ಮಾತನ್ನು ಹೇಳುತ್ತಾನೆ "ನಮ್ಮ ಊರಲ್ಲಿ ೧೦ ಮಕ್ಕಳು ಹುಟ್ಟಿದರೆ, ಅದರಲ್ಲಿ ಎಂಟು ನಿಮ್ಮದಾಗಿರುತ್ತವೆ"

ಈ dialogue ನ್ನು ಕೇಳಿ ಸಭಿಕರು ಚಪ್ಪಾಳೆ ಹೊಡೆದದ್ದನ್ನು ನೋಡಿ ಸ್ತಬ್ಧನಾದೆ.

ಅಂದರೆ ನಮ್ಮಲ್ಲಿ ಈ ಪರಿ ದ್ವೇಷ ಹೊತ್ತಿ ಉರಿಯುತ್ತಿದೆಯೇ? ನಮ್ಮ ಜಗತ್ತು ಅಷ್ಟು Polarise ಆಗಿದೆಯೇ?
"ಕೋಮು ಸೌಹಾರ್ದತೆಯ" ವಿಷಯದಲ್ಲಿ ನಾಟಕ ನಡೆಯುತ್ತಿರುವುದನ್ನು ಮರೆತು, ಜನ ಈ ರೀತಿ ವರ್ತಿಸಿದ್ದೇಕೆ?

ಯಾರಾದರೂ ಉತ್ತರಿಸುವಿರಾ? ಪ್ಲೀಸ್..

Rating
No votes yet

Comments