ಕಾಣಾ..ಕಣಾ..ಕಣ್ಲಾ..ಕಣೆ

ಕಾಣಾ..ಕಣಾ..ಕಣ್ಲಾ..ಕಣೆ

ನಿನ್ನೆ ಸಾಯಂಕಾಲ ಟೀ ಕುಡಿಯುವಾಗ ನನ್ನೊಬ್ಬ ತಮಿಳು ಗೆಳೆಯ ನಾವು ಮಾತು ಮಾತಿಗೆ ಬಳಸುವ "ಕಣಾ" ಪದದ ಬಗ್ಗೆ ಕೇಳಿದ. ಹಾಗಾಗಿ..ನೆನೆಪಿಗಾಗಿ!.. ಈ ಬರಹ :)

ನಾವು ಬಳಸುವ ಕೆಲ ಉದಾಹರಣೆಗಳು!...

ಹೂ ಕಣಾ ...ಹೂ ಕಣೋ ..ಹೂ ಕಣಯ್ಯಾ
ಹೂ ಕಣೆ ( ಹುಡುಗಿಯರಿಗೆ)
ಹೌದು ಕಣ್ಲಾ...

ಇತ್ಯಾದಿ.

ನನ್ನ ತಲೆಗೆ ಆ ಕ್ಷಣಕ್ಕೆ ಹೊಳೆದಂತೆ....ಎರಡು ಅರ್ಥಗಳನ್ನು ಅವನಿಗೆ ಕೊಟ್ಟೆ.

>ಕಾಣಾ ... ಕಾಣು .. ನೋಡು ಅನ್ನೋ ಅರ್ಥ ಬರೋ ರೀತಿ ಬಳಸ್ತೀವಿ.... ವಚನಗಳಲ್ಲಿ ಈ ಕಾಣಾ ಪದ ಮತ್ತೆ ಮತ್ತೆ ಬಳಕೆಯಾಗಿದೆ.

>ಕೃಷ್ಣ ಕನ್ನಡಿಗ ಅನ್ನೋ ಒಂದು ವಾದವಿದೆ. ಕೃಷ್ಣನಿಗೆ ಕಣ / ಕಣಯ್ಯ ಅನ್ನೋ ಹೆಸರೂ ಇದೆ.
ಮಾತಾಡುವಾಗ ಜೋತೆಯವರನ್ನು ಕಣಾ (ಕೃಷ್ಣ) / ಕಣಯ್ಯ ಅಂತ ಸಂಬೋಧಿಸಿ ಮಾತಾಡುತ್ತಿದ್ದ ರೂಡಿಯೇ ಈಗ ಕಣಾ ಅನ್ನೋ ಬಳಕೆಯಾಗಿ ಉಳಿದಿದೆ.

ಇವು ನಾನು ಅವನಿಗೆ ಕೊಟ್ಟ ವಿವರಣೆ.

Rating
No votes yet

Comments