ಕಾದಿರುವೆ

ಕಾದಿರುವೆ

ಹೋಗುವೆಯಾ ಗೆಳತಿ ಬಾಗಿಲನು ಮುಚ್ಚಿ?

ಬಲವಾದ ಬೀಗವನ್ನು ಹಾಕಿ,

ಎಸಳನ್ನು ತೆಗೆದುಕೊಂದು ಹೋಗಿಬಿಟ್ಟೆಯಾ?

ಕೋಣೆಯಲ್ಲಿ ನನ್ನನ್ನು ದೂಡಿ

ಚಿಂತೆಯಿಲ್ಲ ಬಿದು ಗೆಳತಿ ನಾನೊಬ್ಬನೆ ಇರುವೆ

ಹೊರಗಡೆ ಮಳೆಯು ಸುರಿಯುತ್ತಿದೆ

ಕಿತಕಿಯಲ್ಲಿ ತಂಗಾಳಿ ಬಿಡದೆ ಸುಯ್ಯಲಿಡುತ್ತಿದೆ

ಬೆಚ್ಚನೆಯ ನೀರೊಲೆ ಕರೆಯುತ್ತಿದೆ

ನನ್ನ ಮನದೊಳಗೆ ಮೂಡುವ ಭಾವನೆಗಳು

ಒಲೆಯೊಳಗಿಂದೇಳುತಿರುವ ಜ್ವಾಲೆಗಳು

ಹೊಗೆಯಿಲ್ಲದೆ ಉರಿದುರಿದು ಭಸ್ಮವಾಗುತ್ತಿವೆ

ತಮ್ಮ ಕೆಅಸದಲ್ಲಿ ತಾವು ಮಗ್ನವಾಗಿವೆ

ನಾನು ಬೇರೆಯಲ್ಲ ನನ್ನ ಭಾವನೆಗಳು ಬೇರಲ್ಲ

ಎಲ್ಲವನ್ನು ಚಿನ್ನದ ಪೆಟ್ಟಿಗೆಯಲ್ಲಿಡುವೆ

ಇಲ್ಲೇ, ಈ ಒಲೆಯ ಬುಡದಲ್ಲಿಯೇ ಇಡುವೆ

ಚಳಿ ಮಳೆಗೆ ಸಿಗದ ಹಾಗೆ ಬೆಚ್ಚಗಿದುವೆ

ಎಂದಾದರೊಮ್ಮೆ ಈ ಕದೆ ಬಂದಾಗ ಬಾ ನೀನು

ತೆರೆ ಬಾಗಿಲನ್ನು, ಇದೆ ಎಸಳು ನಿನ್ನಲ್ಲಿ

ಚಿನ್ನದ ಪೆತ್ತಿಗೆಯಲ್ಲಿ ಬೆಚ್ಚನೆಯ ಭಾವನೆಗಳಿರುತ್ತವೆ

ಬಾದಿರಾಶಿ ನಾನು ಕುಳಿತಿರುವೆಡೆಯಲ್ಲಿ.

- ನಾಸೋ

Rating
No votes yet