ಕಾಪು ಸಮುದ್ರ ತೀರದಲ್ಲೊಂದು ಸಂಜೆ

ಕಾಪು ಸಮುದ್ರ ತೀರದಲ್ಲೊಂದು ಸಂಜೆ

ಗಣರಾಜ್ಯ ಮತ್ತು ಸೂರ್ಯಗ್ರಹಣದ ಹಿಂದಿನ ದಿನ ಕಾಪು ಸಮುದ್ರ ತೀರಕ್ಕೆ ಹೋಗಿದ್ದೆವು. ಸಂಜೆ ೫ ಘಂಟೆ ಹೊರಟೆವು. ಕಾಪು ಸಮುದ್ರ ತೀರ ನಮ್ಮ ಮನೆ ಇಂದ ೬ ಕಿ.ಮಿ. ಅಂತರದಲ್ಲಿದೆ. ಅಮ್ಮ ಅಂದು ಗೋಳಿಬಜೆ (ಮಂಗಳೂರು ಬಜ್ಜಿ) ಮಾಡಿದ್ದರು. ಅದನ್ನು ಡಬ್ಬಿಯಲ್ಲಿ ತುಂಬಿಕೊಂಡು ಸಮುದ್ರ ತೀರಕ್ಕೆ ಬಂದಿಳಿದೆವು. ಪಾಲಚಂದ್ರರ ಸಲಹೆಯಂತೆ ಕೆಲವು ಚಿತ್ರಗಳನ್ನು under-expose ಮಾಡಿ ತೆಗೆದಿದ್ದೇನೆ.

ಸಾಯಂಕಾಲೇ ವನಾಂತೆ ಕುಸುಮಿತ ಸಮಯೇ..... ಬೆಳಿಗ್ಗೆ ಬಿಳಿಯಾಗಿದ್ದ ಸೂರ್ಯಕಾಂತಿ ಹೂವು ಸಂಜೆ ಕಂಡಿದ್ದು ಹೀಗೆ


ಮೊದಲ ನೋಟ. ಚಿತ್ರ ಕಂಡಾಗ ನೆನಪಾಗಿದ್ದು ದೀಕ್ಷಿತರ ನವಗ್ರಹ ಕೀರ್ತನೆ "ಸೂರ್ಯಮೂರ್ತೆ ನಮೋಸ್ತುತೆ ಸುಂದರ ಛಾಯಾಧಿಪತೆ....."

ದೀಪಸ್ತಂಭ

ಸಮುದ್ರ "ಎಲ್ಲಿ ಬರಗಾಲ ಬಂದರೂ ನಿನ್ನ ನೀರೆಗೆನೂ ಕೊರತೆಯಿಲ್ಲ ಸಮುದ್ರರಾಜ" ಎಂದು ಅಪ್ಪ ಉದ್ದರಿಸಿದರು.

ಅಮ್ಮ ಮಾಡಿದ ಗೋಳಿಬಜೆ

ಬಲ್ಲವರೇ ಬಲ್ಲ ಗೋಳಿಬಜೆಯ ರುಚಿಯ. ಕಾಗೆಗೂ ಬೇಕು ನಮ್ಮ ಗೋಳಿಬಜೆ. ಅಮ್ಮನ ಹತ್ತಿರವೇ ನಿಂತಿತ್ತು. ಎರಡು ಮೂರು ತಿಂದು ಹೊರಟು ಹೋಯಿತು. ಹೀಗೆಯೇ ೫-೬ ಗೊಳಿಬಜೆಗಳು ಕಾಗೆ ಪಾಲಾಯಿತು.

ಸಮುದ್ರ ತೀರ.


ತೆರೆಗಳ ಅಬ್ಬರ.

ಬಂಡೆಯಿಂದ ತೆಗೆದ ಹಿನ್ನೀರಿನ ಚಿತ್ರ

ನೆರೆದಿದ್ದ ಜನಸ್ತೋಮ

ಒಂಟಿ ಯುವಕ.

ಕಪ್ಪು-ಬಿಳುಪು ನೋಟ

ಸೂರ್ಯಾಸ್ತದ ಕ್ಷಣ.

ಹೊರಡುವ ಮುನ್ನ ಗಣರಾಜ್ಯ ದಿವಸದ ಸಂದೇಶ.

ಇದನ್ನು ರಚಿಸಿದವರು ಮಣಿಪಾಲದವರು. ಇದರ ಸಂದೇಶದ ಬಗೆಯೂ ಅನೇಕ ವಿಚಾರವಾದಿ ಹೇಳಿಕೆಗಳು ಜನರಿಂದ ಕೇಳಿಬರುತ್ತಿದ್ದವು. ಯಾರೋ "I do not believe this message" ಎಂದು ಹೇಳಿದಾಗೆ ಆಯಿತು. ಅವರೂ ಕೂಡ ಚಿತ್ರ ಕ್ಲಿಕ್ಕಿಸಿಕೊಂಡು ಹೋದರು.
*******************************************************************************************************************

Rating
No votes yet

Comments