ಕಾಫೀ ಬೀಜ ಗೇರುವಾಗ

ಕಾಫೀ ಬೀಜ ಗೇರುವಾಗ

ಹೊರನಾಡಿನ ದೇವಸ್ಥಾನದ ಒಳಗೆ ಕಾಣಿಸಿದ ಕಾಫೀ ಬೀಜ ಗೇರುವ ನೋಟ. ನಮ್ಮೂರಲ್ಲಿ ಈ ಕೆಲಸಕ್ಕೆ ಗೇರುವುದು ಅಂತಾನೂ ಮತ್ತೆ ಸಾಧನಕ್ಕೆ ಗೆರ್ಸಿ ಅಂತಾನೂ ಕರೀತಾರೆ. ನಿಮ್ಮ ಕಡೆ ಏನಂತಾರೆ ಅಂತ ನೀವು ತಿಳಿಸ್ತೀರಲ್ಲ...

 

ಮೊದಲ ಚಿತ್ರದಲ್ಲಿ ಅಜ್ಜಿ ಮುಖ ಸ್ಪುಟವಾಗಿದ್ರೂ ಕೈ, ಗೆರ್ಸಿ ಅಸ್ಪಷ್ಟವಾಗಿ ಚಲನೆಯನ್ನು ಸೂಚಿಸ್ತಾ ಇದೆ. ಇದಕ್ಕೆ ಬಳಸಿದ Exposure 1/40 ಸೆಕೆಂಡುಗಳು. ಇಲ್ಲಿ ನನ್ನ lens VR-Vibration Reduction (IS-Image Stabilization) ಆದ್ದರಿಂದ ಇತರ ಸಾಮಾನ್ಯ lensಗಿಂತ ದುಪ್ಪಟ್ಟು ಸ್ಥಿರತೆ ಕೊಡುತ್ತದೆ. ಸಾಮಾನ್ಯ lens ಆಗಿದ್ದರೆ exposure 1/60 ಸೆಕೆಂಡಿಗಿಂತ ಕಡಿಮೆಯಾದಂತೆ ನಮ್ಮ ಕೈಯ ಚಲನೆಯಿಂದ ಚಿತ್ರ ಅಸ್ಪಷ್ಟವಾಗಿ ಕಾಣಿಸುವುದು ಸಹಜ. ಅಜ್ಜಿ ಮುಖದ ಭಾವ ಇಷ್ಟ ಆದ್ರಿಂದ ಈ ಚಿತ್ರ ಇರಿಸಿಕೊಂಡು, ಇದೇ Exposure ಉಪಯೋಗಿಸಿಕೊಂಡು ಮತ್ತೊಂದು ಚಿತ್ರ ತೆಗೆಯೋಕೆ ಪ್ರಯತ್ನಿಸಿದೆ.

 

 

ಇದು ನಾ ತೆಗೆದ ಎರಡನೇ ಚಿತ್ರ. ಇಲ್ಲಿ ಕಾಫಿ ಬೀಜದ ಚಲನೆ ಮಾತ್ರ ಗುರುತಿಸಬಹುದು. ಗೆರ್ಸಿ, ಅಜ್ಜಿ ಚಿತ್ರದಲ್ಲಿ ಸ್ಪುಟವಾಗಿ ಚಿತ್ರಿತವಾಗಿದೆ. ಎರಡೂ ಚಿತ್ರದಲ್ಲಿ ಬಳಸಿದ exposure ಒಂದೇ ಆದರೂ ಕಾಲಾವಧಿ (timing) ಹೇಗೆ ಚಿತ್ರದ ಪರಿಣಾಮ ಬದಲಾಯಿಸುತ್ತದೆ ಅಲ್ಲವೇ? ಇದಕ್ಕೇ ಹಿರಿಯರು ಎಲ್ಲದಕ್ಕೂ ಸಮಯ ಕೂಡಿ ಬರ್ಬೇಕು ಅನ್ನೋದು :)

 

ಚಲನೆಯ ಫೋಟೋ ಇದೇ ರೀತಿ ತೆಗೀಬೇಕಾ, ಯಾವ್ಯಾವ ಚಲನೆಗೆ ಯಾವ exposure ಸರಿಹೊಂದುತ್ತೆ ಅಂತ ಹೇಳೋದು ಕಷ್ಟ. Exposure ೧/೧೦೦ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಇಟ್ಟುಕೊಂಡಿದ್ದರೆ ಕಾಫಿ ಬೀಜವೂ ಸ್ಪುಟವಾಗಿ ಹಾರಾಡ್ತಾ ಇರೋ ಫೋಟೋ ತೆಗೆಯಬಹುದಿತ್ತು. ಬೆಳಕು ಕಮ್ಮಿ ಇದ್ದಿದ್ರಿಂದ ISO ಜಾಸ್ತಿ ಮಾಡಿದ್ದರೆ (ಈ ಚಿತ್ರಕ್ಕೆ ಬಳಸಿದ ISO ೪೦೦ - aperture ನನ್ನ lens  ಒದಗಿಸುವ ದೊಡ್ಡ ತೆರವಿಗೆ ಹೊಂದಿಸೆದ್ದೆ) ಆ ಪರಿಣಾಮದ ಚಿತ್ರ ಕೂಡ ಸಿಕ್ತಾ ಇತ್ತೇನೋ. ಆದ್ರೆ ನನ್ನ ತಲೆ ಆ ಅವಧಿಯಲ್ಲಿ ಇದರ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೂ ಚಲನೆ ಬಿಂಬಿಸುವ ಎರಡನೇ ಚಿತ್ರ ನನಗೆ ಇಷ್ಟ ಆಯ್ತು, ನಿಮಗೆ ಹೇಗೆ ಅನ್ನಿಸ್ತು ಅಂತಾನು ತಿಳಿಸಿ.

Rating
No votes yet

Comments