ಕಾಮನ ಬಿಲ್ಲು/ ಮಳೆ -ಬಿಲ್ಲು!!!

ಕಾಮನ ಬಿಲ್ಲು/ ಮಳೆ -ಬಿಲ್ಲು!!!

ಇವತ್ತು ಬುಧುವಾರ, ಎಂದಿನಂತೆ ನನ್ನ ಅರ್ಧ ದಿನದ ಕೆಲಸ ಮುಗಿಸಿ ಆಸ್ಪತ್ರೆಗೆ ಹೋಗಿ ರೌಂಡ್ಸ್ ಸಹ ಮುಗಿಸಿ ಮನೆಯದಾರಿ ಹಿಡಿಯುವಳಿದ್ದೆ. ಮಳೆ-ಚಳಿ ಎರಡೂ ಸೇರಿ ಒಂದು ತರ ಬೇಸರ ಮನಸ್ಸಿಗೆ ಬರುವಂತಿತ್ತು. ಹಾಗೇ ಸ್ವಲ್ಪ ಚೈತನ್ಯ ತಂದು ಕೊಂಡು ಆಸ್ಪತ್ರೆಯಲ್ಲಿ ೫-ತಿಂಗಳ ಮಗುವನ್ನು ನೋಡುತ್ತಿದ್ದಾಗ, ಮಗುವಿನ ಅಜ್ಜಿ ನನ್ನ ಕೇಳಿದಳು " ಯಾವತ್ತು ಮಗುನ ಮನೆಗೆ ಕರೆದುಕೊಂಡು ಹೋಗಬಹುದು? , ಈಗ ಮಗುಹುಷಾರಾಗಿ ನೋಡಬಹುದು, ನಿಮಗೆ ತುಂಬಾ ಧನ್ಯವಾದಗಳು" . ಎರಡು ದಿನದಿಂದ ಮಗು ನಿಮೋನಿಯಾದಿಂದ ಬಳಲುತ್ತಿದ್ದ ಮಗುವನ್ನು ನೋಡಿ ಅವಳಿಗೆ ತುಂಬಾ ಸಾಕಾಗಿತ್ತು. ಇವತ್ತು ಅಜ್ಜಿ ಖುಷಿಯಾಗಿದ್ದು ನೋಡಿ ನನ್ನ ಮನಸ್ಸಿನ ಬೇಸರ ತಕ್ಷಣ ಮಾಯವಾಗಿತ್ತು. ಇಷ್ಟೊಂದು ಕಷ್ಟಗಳಿರುವಾಗ, ಮಳೆ-ಚಳಿ ಯಾವ ಮೂಲೆಗೆ? ಅದಕ್ಕೆಲ್ಲಾ ಮನಸ್ಸನ್ನು ಅಲುಗಾಡಲು ಬಿಡಬಾರದು ಅಂತ ಅದೇ ಮನಸ್ಸು ಹೇಳಿದಂತಿತ್ತು. ಮಗು ಹುಷಾರಾಗುತ್ತಿರುವುದು ಒಂದು ತೃಪ್ತಿಯ ವಿಷಯವಾಗಿತ್ತು. ಹೀಗೇ ಲಹರಿ ಹರಿಯುತ್ತಿದ್ದಾಗ, ನನ್ನ ಮಗಳ ಕರೆ ಬಂತು. ನಾವು ಡ್ಯಾನ್ಸ್ ಕ್ಲಾಸ್ ಗೆ ಹೋಗಬೇಕು, ನೀನು ಇನ್ನು ಯಾವಾಗ ಮನೆಗೆ ಬಂದು ನನ್ನ ಕರೆದುಕೊಂಡು ಹೋಗುವುದು? ಎಂದು ಕೇಳುತ್ತಾ ಮಾತಾಡುತ್ತಿದ್ದಳು. ಆಸ್ಪತ್ರೆ ಕೆಲಸ ಮುಗಿಸಿ ಹೊರಗೆ ಬಂದು ಕಾರ್ ಹತ್ತಿದಾಗ , ಮಳೆ ಜೋರಾಯಿತು. ಹಾಗೆ ಮೋಡದ ಮರೆಯಲ್ಲಿ ಸ್ವಲ್ಪ ಸೂರ್ಯ ಕಾಣಿಸುತ್ತಿದ್ದ. ಮನೆಯ ದಾರಿಯಲ್ಲಿ ಬರುತ್ತಿದ್ದಾಗ, ಕಾಮನ -ಬಿಲ್ಲು ಅವತರಿಸಿತು. ಪ್ರಕೃತಿ ಸೌಂದರ್ಯ ನೋಡಿ, ಹಾಗೇ ಆನಂದಿಸತೊಡಗಿದೆ. ಮನಸ್ಸು ತುಂಬಾ ಹಗುರಾಯಿತು. ಆಕ್ಷಣದಲ್ಲಿ ಅದನ್ನು ಸೆರೆಹಿಡಿಯಲು ಹೊಳೆಯಲಿಲ್ಲ. ನನಗೆ ಹೊಳೆದಾಗ ಹಾಗೇ ಬ್ಲಾಕ್ ಬೆರಿ ಯಿಂದ ಕ್ಲಿಕ್ಕಿಸಿದೆ. ಸ್ವಲ್ಪ ಬಿಲ್ಲು ಕಾರಿನ ಒಳಗಿಂದೇ ಕಾಣಿಸಿದ್ದು ತೆಗೆದೆ. ಏನು ಕಾಕತಾಳೀಯವೋ ಎಂಬಂತೆ, ಮಳೆಯ ಬೇಸರದಿಂದ ಪ್ಪ್ರಾರಂಭವಾಗಿ ಕಾಮನ-ಬಿಲ್ಲಿನಿಂದ-ಮನಸ್ಸು ತಿಳಿಯಾಗಿ ನಿಂತಿತು.

ಚಿತ್ರ ಹಾಕಲು ಪ್ರಯತ್ನಿಸುತ್ತೇನೆ.

Rating
No votes yet

Comments