ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
ನಿಮಗೆ ಕವಿ ಬೇಂದ್ರೆ ಗೊತ್ತು , ನಾಟಕಕಾರ ಬೇಂದ್ರೆ ಗೊತ್ತೆ? ಹೌದು, ಅವರು ಅನೇಕ ನಾಟಕಗಳನ್ನು ಕೂಡ ಬರೆದಿದ್ದಾರೆ. ಅವರು ಒಂದು ನಾಟಕ 'ಜಾತ್ರೆ'ಯ ಕಿರು ಪರಿಚಯ ಇಲ್ಲಿದೆ .
'ಜಾತ್ರೆ ಸುಳ್ಳಿನ ಕೋಟೆಯ ಕುರಿತಾದ ಒಂದು ವಿಡಂಬನೆ. ಇಲ್ಲಿ ಒಬ್ಬ ಪಾಳೇಗಾರ ಊರಲ್ಲಿ ಪ್ಲೇಗ್ ಬಂದರೂ ನಡೆಯಲಿರುವ ಜಾತ್ರೆ ತಪ್ಪಿಸಲು ಸಿದ್ಧನಿಲ್ಲ. ಜನ ಸತ್ತರೆ ಸಾಯಲಿ, ಬೊಕ್ಕಸಕ್ಕೆ ಬರುವ ಆದಾಯ ತಪ್ಪಬಾರದು . ಎಂಬ ಹಠ ಅವನದು . ಊರಲ್ಲಿ ಪ್ಲೇಗ್ ಇಲ್ಲ ಎಂದು ಡಂಗುರ ಸಾರಿಸುತ್ತಾನೆ . ಜನ ಪ್ಲೇಗ್ ನ ಹೆಸರು ಎತ್ತ ದಂತೆ ಮಾಡುತ್ತಾನೆ. ಕೊನೆಗೆ ಅವನಿಗೇ ಪ್ಲೇಗು ಬರುತ್ತದೆ . ರಾಜಾಜ್ನ್ಯೆಯಂತೆ ಡಾಕ್ಟರೂ ನಿಮಗೆ ಪ್ಲೇಗು ಇಲ್ಲ ಎನ್ನುತ್ತಾನೆ. ಹೀಗೆ ತನ್ನ ಸುಳ್ಳಿಗೆ ತಾನೇ ಬಲಿಯಾಗಿ ರಾಜ ಸಾಯುತ್ತಾನೆ.
ಇಲ್ಲಿ ಸಂಭಾಷಣೆಗಳು ಎಷ್ಟು ಚುರುಕಾಗಿ ಇವೆ ಎಂದರೆ " ಇದು ಒಂದು ಟ್ರಾಜೆಡಿ ; ಜನ ಇದನ್ನು ಕಾಮಿಡಿ ಎಂದು ಸ್ವೀಕರಿಸಿದರು . ಇದು ನಾಟಕದ ಟ್ರಾಜೆಡಿ" ಎಂದು ಬೇಂದ್ರೆ ನಿಟ್ಟುಸಿರು ಬಿಟ್ಟರು!.
Rating
Comments
ಜಾತ್ರೆ
In reply to ಜಾತ್ರೆ by rajeshks
ಬೇಂದ್ರೆಯವರ 'ಜಾತ್ರೆ' ನಾಟಕದ ವಿವರ