ಕಾರಂತರು

ಕಾರಂತರು

ಮೊನ್ನೆ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡರು ವಿವರಿಸಿದ ಕಾರಂತರ ಕುರಿತ ಒಂದು ಪ್ರಸಂಗ.
ಕಾರ್ಯಕ್ರಮ ವೀಕ್ಷಿಸದ ಓದುಗರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ:

ಶಿವರಾಮ ಕಾರಂತರಿಗೆ ಪುತ್ರವಿಯೋಗವಾಗುತ್ತದೆ. ಬೆಳೆದ ಮಗನನ್ನು ಕಳೆದುಕೊಂಡು ದುಃಖದಲ್ಲಿರುತ್ತಾರೆ.
ಆಗ ಸೀತಾರಾಮಯ್ಯನವರು ಕಾರಂತರಿಗೆ ಒಂದು ಪತ್ರ ಬರೆಯುತ್ತಾರೆ. ಅದರ ಸಾರಾಂಶ ಈ ರೀತಿ ಇತ್ತು.
"ವಿಷಯ ತಿಳಿದು ಸಂಕಟವಾಯಿತು. ನಾನು ನಿಮಗೆ ಸಮಾಧಾನ ಹೇಳುವಷ್ಟು ದೊಡ್ಡವನಲ್ಲ. ಆದರೂ ಹೇಳುತ್ತೇನೆ, ಸಮಾಧಾನ ಮಾಡಿಕೊಳ್ಳಿ"
ಕೆಲವು ದಿನಗಳ ಮೇಲೆ ಸೀತಾರಾಮಯ್ಯನವರಿಗೆ ಕಾರಂತರಿಂದ ಪತ್ರದ ಉತ್ತರ ಬರುತ್ತದೆ. ಅದರ ಸಾರಾಂಶ:
"ನಿಮ್ಮ ಪತ್ರ ಓದಿ ಮನಸ್ಸಿಗೆ ಸಮಾಧಾನವಾಯಿತು. ಅದಕ್ಕಿಂತ ದೊಡ್ಡ ಸಮಾಧಾನವೆಂದರೆ ಈ ಪ್ರಪಂಚದಲ್ಲಿ ಬೆಳೆದ ಮಗನನ್ನು ಕಳೆದುಕೊಂಡ ಮೊದಲನೇ ತಂದೆ ನಾನಲ್ಲ ಎಂಬುದು"
ಇಬ್ಬರು ದೊಡ್ಡ ವ್ಯಕ್ತಿಗಳ ಮನಸ್ಸುಗಳ ಪರಿಚಯಕ್ಕೆ ಈ ಉದಾಹರಣೆ ಸಾಕಲ್ಲವೇ?

Rating
No votes yet